• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಒಡಿಶಾದಲ್ಲಿ ಕಾಂಗ್ರೆಸ್‌ಗೆ ಕಾಡ್ತಿರುವ ಭೀತಿ ಏನು..? : ಬಿಜೆಪಿಗೆ ಇರುವ ಸದಸ್ಯ ಬಲವೆಷ್ಟು..?

ಅಡ್ಡ ಮತದಾನದ ಭೀತಿಯಲ್ಲಿರುವ ಕಾಂಗ್ರೆಸ್‌ಗೆ ಡಿಕೆ ಶಿವಕುಮಾರ್‌ ಅಭಯ, ಹೈಕಮಾಂಡ್‌ ಸಂಕಟದ ಸಮಯದಲ್ಲಿ ನೆರವಿಗೆ ಬಂಡೆ..

ಪ್ರತಿಧ್ವನಿ by ಪ್ರತಿಧ್ವನಿ
March 14, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಒಡಿಶಾದಲ್ಲಿ ಕಾಂಗ್ರೆಸ್‌ಗೆ ಕಾಡ್ತಿರುವ ಭೀತಿ ಏನು..? : ಬಿಜೆಪಿಗೆ ಇರುವ ಸದಸ್ಯ ಬಲವೆಷ್ಟು..?
Share on WhatsAppShare on FacebookShare on Telegram

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಹಾಗೂ ಸಂಪುಟ ವಿಸ್ತರಣೆಯ ವಿಚಾರ ಚರ್ಚೆಯಲ್ಲಿರುವಾಗಲೇ ಕಾಂಗ್ರೆಸ್‌ ಪಾಳಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಈ ಹಿಂದೆ ಗುಜರಾತ್‌ ಕಾಂಗ್ರೆಸ್‌ ನಾಯಕರಿಗೆ ರಾಜ್ಯದಲಿ ಆಸರೆ ನೀಡಿದ್ದ ಡಿಸಿಎಂ ಡಿಕೆ ಶಿವಕುಮಾರ್‌ ಇದೀಗ ಮತ್ತೊಮ್ಮೆ ಅದೇ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ.

ADVERTISEMENT
Karnataka Legislative Council : ಪ್ರಾಜೆಕ್ಟ್‌ ಮೆಜೆಸ್ಟಿಕ್‌ ಯೋಜನೆಯ ಗಮನ ಸೆಳೆದ ನಾಗರಾಜ್‌ ಯಾದವ್..!

ಶೀಘ್ರದಲ್ಲೇ ನಡೆಯಲಿರುವ ಒಡಿಶಾದ ರಾಜ್ಯಸಭಾ ಚುನಾವಣೆಗೆ ವೇದಿಕೆ ಸಿದ್ಧವಾಗುತ್ತಿದ್ದು, ಆಪರೇಷನ್‌ ಕಮಲದ ಭೀತಿಯ ಹಿನ್ನೆಲೆಯಲ್ಲಿ ಅಲ್ಲಿನ 14 ಜನ ಕಾಂಗ್ರೆಸ್‌ ಶಾಸಕರು ರಾಜ್ಯಕ್ಕೆ ಆಗಮಿಸಿದ್ದಾರೆ. ರಾಮನಗರದ ಬಿಡದಿಯ ವಂಡರ್‌ ಲಾ ರೆಸಾರ್ಟ್‌ನಲ್ಲಿ ಅವರಿಗೆ ಆತಿಥ್ಯ ನೀಡಲಾಗುತ್ತಿದೆ. ಖುದ್ದು ಇದರ ಸಂಪೂರ್ಣ ಜವಾಬ್ದಾರಿಯನ್ನು ಡಿಸಿಎಂ ಡಿಕೆ ಶಿವಕುಮಾರ್‌ ವಹಿಸಿಕೊಂಡಿದ್ದಾರೆ.

ಇನ್ನೂ ಪ್ರಮುಖವಾಗಿ ಒಡಿಶಾದ ಕಾಂಗ್ರೆಸ್ ಶಾಸಕರು ಬಿಡದಿಗೆ ಆಗಮಿಸಿರುವುದರ ಸುತ್ತ-ಮುತ್ತಲಿನ ವಿಚಾರಗಳನ್ನು ಗಮನಿಸಿದಾಗ, ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜು ಜನತಾ ದಳ (BJD) ಸಂಯುಕ್ತ ಅಭ್ಯರ್ಥಿಯಾಗಿರುವ ಖ್ಯಾತ ನ್ಯೂರೋಲಾಜಿಸ್ಟ್, ಒಡಿಶಾ ಮೆಡಿಕಲ್ ಯೂನಿವರ್ಸಿಟಿ ಮಾಜಿ ನಿರ್ದೇಶಕ ಡಾ. ದತ್ತೇಶ್ವರ್ ಹೋಟ ಗೆಲ್ಲಲು 30 ಮತಗಳ ಅವಶ್ಯಕತೆಯಿದೆ.

ಇದನ್ನೂ ಓದಿ : ವಿಲಾಸ್ ರಾವ್ ದೇಶಮುಖ್ ಸರ್ಕಾರದಿಂದಲೂ ಇದನ್ನು ಮಾಡುತ್ತಿರುವೆ : ಟ್ರಬಲ್‌ ಶೂಟರ್‌ ಆದ ಡಿಕೆ ಶಿವಕುಮಾರ್..

ಮತದ ಲೆಕ್ಕಾಚಾರ ಹೀಗಿರುವಾಗ ಲಭ್ಯವಾಗುವ ಒಟ್ಟು ಮತಗಳು 32, ಅದರಲ್ಲಿ ಬಿಜೆಡಿ -18, ಕಾಂಗ್ರೆಸ್ – 14
ಹಾಗೂ ಸಿಪಿಐ (ಎಂ)ನ 1 ಮತವಿದೆ. ಆದರೆ ಇದರಲ್ಲಿ ಮುಖ್ಯವಾಗಿ ಮೊದಲ ಬಾರಿ ಗೆದ್ದಿರುವ 8 ಮಂದಿ ಕಾಂಗ್ರೆಸ್ ಶಾಸಕರು ವಿಪಕ್ಷಗಳ ಟಾರ್ಗೆಟ್ ಆಗಿದ್ದಾರೆ. ಇದೇ ಕಾರಣಕ್ಕಾಗಿಯೇ ಸದ್ಯ ಬಿಡದಿಯಲ್ಲಿರುವ 8 ಶಾಸಕರೆಲ್ಲಾ ಮೊದಲ ಬಾರಿಗೆ ಗೆದ್ದಿರುವವರೇ ಇದ್ದಾರೆ ಎನ್ನುವುದು ಗಮನಾರ್ಹ.

Odisha Rajya Sabha Drama: BJP's Fourth Seat Gamble Sparks Horse Trading  Fears - Odisha Connect

ಅಲ್ಲದೆ ಒಡಿಶಾ ವಿಧಾನಸಭೆಯ ಒಟ್ಟು ಸದಸ್ಯ ಬಲ 147 ಆಗಿದ್ದು, 4 ಸ್ಥಾನಗಳಿಗೆ ನಡೆಯುವ ಚುನಾವಣೆಗೆ 5 ಮಂದಿ ಸ್ಪರ್ಧಿಸಿದ್ದಾರೆ. ಬಿಜೆಪಿ 3, ಬಿಜೆಡಿ 1 ಹಾಗೂ ಬಿಜೆಡಿ+ಕಾಂಗ್ರೆಸ್ ಸಂಯುಕ್ತದ 1 ಅಭ್ಯರ್ಥಿಯಿದ್ದಾರೆ. ಆದರೆ ಇದರಲ್ಲಿ ಒಬ್ಬ ಅಭ್ಯರ್ಥಿ ಗೆಲ್ಲಲು 30 ಮತಗಳು ಬೇಕಾಗಿವೆ. ಈ ಕಾರಣಕ್ಕಾಗಿಯೇ ತನ್ನ ಶಾಸಕರನ್ನು ರಕ್ಷಿಸಿ ಅಡ್ಡಮತದಾನ ತಡೆಯಲು ಕಾಂಗ್ರೆಸ್‌ ಹೈಕಮಾಂಡ್‌ ಒಡಿಶಾ ರಾಜ್ಯಸಭಾ ಚುನಾವಣೆಯ ಹೊಣೆಯನ್ನು ಡಿಕೆ ಶಿವಕುಮಾರ್‌ ಹೆಗಲಿಗೆ ಹೊರಿಸಿದೆ ಎನ್ನಲಾಗಿದೆ.

ರಾಜನ್ ಎಕ್ಕ, ಅಶೋಕ್ ದಾಸ್, ಅಪ್ಪಲ ಕುಮಾರ್ ಸ್ವಾಮಿ, ಮಂಗು ಕಿಲ್ಲೋ, ಪವಿತ್ರ ಸೌಂತಾ, ನೀಲಮಾಧವ್ ಹಿಕ್ಕ, ಪ್ರಫುಲ್ಲ ಪ್ರಧಾನ್, ಸತ್ಯಜಿತ್ ಗೋಮಂಗೋ ನೂತನವಾಗಿ ಆಯ್ಕೆಯಾಗಿರುವ ಈ ಶಾಸಕರು ರೆಸಾರ್ಟ್‌ ರಾಜಕೀಯಕ್ಕೆ ಹೊರಳಿದ್ದಾರೆ.

ಆದರೆ ಡಿಕೆ ಶಿವಕುಮಾರ್‌ಗೆ ಕಾಂಗ್ರೆಸ್‌ ಪಕ್ಷ ಅತ್ಯಂತ ಹತ್ತಿರದ ಹಾಗೂ ಭಾವನಾತ್ಮಕ ಸಂಗತಿಯಾಗಿದೆ. ಇದೇ ಕಾರಣಕ್ಕಾಗಿಯೇ ಮುಖ್ಯುಮಂತ್ರಿ ಸಿದ್ದರಾಮಯ್ಯ ಡಿಕೆ ಶಿವಕುಮಾರ್‌ ಪಕ್ಷ ನಿಷ್ಠೆಯನ್ನು ಶ್ಲಾಘಿಸುತ್ತಿರುತ್ತಾರೆ. ಆದರೆ ಕಾಂಗ್ರೆಸ್‌ ಹೈಕಮಾಂಡಿಗೆ ಸಂಕಟದ ಸಮಯದಲ್ಲಿ ನೆನಪಾಗುವುದೇ ಡಿಕೆ ಶಿವಕುಮಾರ್‌ ಎಂಬುವುದು ಅವರ ಗಟ್ಟಿತನಕ್ಕೆ ಸಾಕ್ಷಿಯಾಗಿದೆ.

Tags: AICCAppal Kumar SwamyAshok DasbjdBJP Odishacongress karnataka newscongress mlascongresspartyDK Shivakumarkannada newskarnataka newsMallikarjun KhargeMangu KilloOdisha Congress MLAsodisha politicsPavithra SauntaaPratidhvaniRahul GandhiRajan Ekkarajya sabha electionSonia Gandhi
Previous Post

“ಸತ್ಯ, ಸಂಶೋಧನೆ ನಡೆಸಿ ಬರೆಯುವ ಪತ್ರಕರ್ತರ ಸಂಖ್ಯೆ ಸುಳ್ಳು ಹರಡುವವರಿಗಿಂತ ಹೆಚ್ಚಾಗಬೇಕು”

Next Post

ಯುದ್ಧದ ಎಫೆಕ್ಟ್‌ : ಗಲ್ಫ್‌ನಲ್ಲಿರುವ ಕುಟುಂಬಸ್ಥರನ್ನೇ ನಂಬಿರುವ ಭಾರತೀಯರಿಗೆ ಆರ್ಥಿಕ ಹೊಡೆತ..!

Related Posts

ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?
Top Story

ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

by ಪ್ರತಿಧ್ವನಿ
May 25, 2026
0

ಬೆಂಗಳೂರು : ಗ್ಯಾರಂಟಿ ಬಲದ ಮೇಲೆ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ಇದೀಗ ಯೋಜನೆಯ ಫಲಾನುಭವಿಗಳಿಗೆ ಶಾಕ್‌ ನೀಡಲು ಮುಂದಾಗಿದೆ. ಪಂಚ ಗ್ಯಾರಂಟಿಗಳಿಂದ ರಾಜ್ಯದ ಬೊಕ್ಕಸ...

Read moreDetails
ಸಿಎಂ ಸಿದ್ದರಾಮಯ್ಯ ದಿಢೀರ್ ದೆಹಲಿಗೆ : ಬದಲಾಗುತ್ತಾ ನಾಯಕತ್ವ..?

ಸಿಎಂ ಸಿದ್ದರಾಮಯ್ಯ ದಿಢೀರ್ ದೆಹಲಿಗೆ : ಬದಲಾಗುತ್ತಾ ನಾಯಕತ್ವ..?

May 25, 2026
ಮೋದಿ ಸಂಚಾರ ಮಾರ್ಗದ ಬಳಿ ಸ್ಫೋಟಕ ಪತ್ತೆ ಪ್ರಕರಣ; ಬೆಂಗಳೂರು ಪೊಲೀಸರ ವಿರುದ್ಧ ಈ ಭಾರಿ ಕ್ರಮ!

ಮೋದಿ ಸಂಚಾರ ಮಾರ್ಗದ ಬಳಿ ಸ್ಫೋಟಕ ಪತ್ತೆ ಪ್ರಕರಣ; ಬೆಂಗಳೂರು ಪೊಲೀಸರ ವಿರುದ್ಧ ಈ ಭಾರಿ ಕ್ರಮ!

May 25, 2026
 ‘ಟಾಕ್ಸಿಕ್’ ಟೀಸರ್ ವಿವಾದಕ್ಕೆ ಯಶ್ ತಾಯಿ ಸ್ಪಷ್ಟನೆ ಇದು !

 ‘ಟಾಕ್ಸಿಕ್’ ಟೀಸರ್ ವಿವಾದಕ್ಕೆ ಯಶ್ ತಾಯಿ ಸ್ಪಷ್ಟನೆ ಇದು !

May 25, 2026
ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

May 24, 2026
Next Post
ಯುದ್ಧದ ಎಫೆಕ್ಟ್‌ : ಗಲ್ಫ್‌ನಲ್ಲಿರುವ ಕುಟುಂಬಸ್ಥರನ್ನೇ ನಂಬಿರುವ ಭಾರತೀಯರಿಗೆ ಆರ್ಥಿಕ ಹೊಡೆತ..!

ಯುದ್ಧದ ಎಫೆಕ್ಟ್‌ : ಗಲ್ಫ್‌ನಲ್ಲಿರುವ ಕುಟುಂಬಸ್ಥರನ್ನೇ ನಂಬಿರುವ ಭಾರತೀಯರಿಗೆ ಆರ್ಥಿಕ ಹೊಡೆತ..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada