ನವದೆಹಲಿ : ಇರಾನ್‌ನ ಸರ್ವೋಚ್ಚ ನಾಯಕನಾಗಿದ್ದ ಆಯತೊಲ್ಲಾ ಅಲಿ ಖಮೇನಿಯನ್ನು ಇಸ್ರೇಲ್ ಹಾಗೂ ಅಮೆರಿಕದ ಜಂಟಿ ಕಾರ್ಯಾಚರಣೆ ಬಲಿ ಪಡೆದಿದೆ. ಇದಾದ ಬಳಿಕ ಇರಾನ್‌ನ ಮಧ್ಯಂತರ ಸರ್ವೋಚ್ಚ ನಾಯಕನಾಗಿ ಆಯ್ಕೆಯಾಗಿದ್ದ ಅಯತೊಲ್ಲಾ ಅಲಿರೆಜಾ ಅರಾಫಿಯನ್ನೂ ಹತ್ಯೆ ಮಾಡಲಾಗಿದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಮುಂದುವರೆದಿದೆ.

ದೀರ್ಘಕಾಲದ ಸರ್ವೋಚ್ಚ ನಾಯಕನಾಗಿದ್ದ ಅಯತೊಲ್ಲಾ ಅಲಿ ಖಮೇನಿ ನಿಧನದ ನಂತರ ಇರಾನ್‌ನಲ್ಲಿ ಪ್ರಬಲ ನಾಯಕತ್ವದ ಕೊರತೆ ಎದುರಾಗಿದೆ. ಯುದ್ಧದ ಸಮಯದ ಈ ತುರ್ತು ಪರಿಸ್ಥಿತಿಯಲ್ಲಿ ದೇಶದ ರಾಜಕೀಯ ಮತ್ತು ಧಾರ್ಮಿಕ ನಾಯಕರು, ಅಧಿಕಾರಿಗಳು ನೂತನವಾಗಿ ಮಧ್ಯಂತರ ಸರ್ವೋಚ್ಚ ನಾಯಕನಾಗಿ ಅಯತೊಲ್ಲಾ ಅಲಿರೆಜಾ ಅರಾಫಿಯನ್ನು ನೇಮಿಸಿದ್ದರು.
ಇದನ್ನೂ ಓದಿ : ವಿಜಯ್ –ರಶ್ಮಿಕಾ ಮದುವೆ ಸಂಭ್ರಮ: ಇಂದು ದೇಶಾದ್ಯಂತ ಸಿಹಿ ವಿತರಣೆ, ಅನ್ನದಾನ
ಈ ಯುದ್ಧದ ವಾತಾವರಣದಲ್ಲಿ ದೇಶವನ್ನು ಬಚಾವ್ ಮಾಡಲು ಅರಾಫಿ ನಾಯಕತ್ವ ಗಟ್ಟಿಯಾದ ನಿಲುವನ್ನು ಹೊಂದಿತ್ತು. ಇದರ ಪರಿಣಾಮ ತಮ್ಮ ನಾಯಕನನ್ನು ಬಲಿ ಪಡೆದಿದ್ದ ಅಮೆರಿಕ- ಇಸ್ರೇಲ್‌ಗಳ ವಿರುದ್ಧ ಪ್ರತೀಕಾರದ ದಾಳಿ ನಡೆಸುತ್ತಿದೆ.
ಈ ದಾಳಿಯಿಂದ ಕೆರಳಿರುವ ಉಭಯ ದೇಶಗಳು ಇರಾನ್‌ನ ಪ್ರಮುಖ ನಗರಗಳ ಭೀಕರ ದಾಳಿ ನಡೆಸುತ್ತಿವೆ. ಇದರಲ್ಲಿಯೇ ನೂತನ ನಾಯಕ ಅರಾಫಿ ಹತನಾದ್ರಾ? ಎಂಬ ಪ್ರಶ್ನೆ ಮೂಡಿದೆ. ಆದರೆ ಸಾಮಾಜಿಕ ಮಾಧ್ಯಮ ವರದಿಗಳು ಈಗ ಅಯತೊಲ್ಲಾ ಅಲಿರೆಜಾ ಅರಾಫಿ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂಬುದಾಗಿ ಹೇಳುತ್ತಿವೆ.
ಈ ವರದಿಗಳು ಖಚಿತವಾಗಿಲ್ಲದಿದ್ದರೂ, ಇರಾನಿನ ಸ್ಥಳೀಯ ಮಾಧ್ಯಮ ಅಥವಾ ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳು ಈ ವರದಿಯನ್ನು ದೃಢಪಡಿಸಿಲ್ಲ. ಈ ಸುದ್ದಿಯು ಇರಾನ್ ಸರ್ಕಾರವನ್ನು ಚಿಂತೆಗೆ ಒಳಪಡಿಸಿದೆ. ಆದರೆ ಅರಾಫಿ ಸಾವಿನ ಬಗ್ಗೆ ಈ ಹಂತದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಬರುವ ವರದಿಗಳು ವದಂತಿಗಳಾಗಿಯೇ ಉಳಿದಿದ್ದು, ಇದುವರೆಗೂ ಯಾವುದೇ ರೀತಿಯ ಸ್ಪಷ್ಟತೆ ಕಂಡು ಬಂದಿಲ್ಲ.






