• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಿಎಂ ಕಪ್‌ಗೆ ಶುಭಹಾರೈಸಿದ ಕೆ.ವಿ. ಪ್ರಭಾಕರ್‌ : ಆಲ್‌ ದಿ ಬೆಸ್ಟ್‌ ಹೇಳಿದ ಯುವ ನಾಯಕ ಅರುಣ್‌ ಸೋಮಣ್ಣ..

ಪಂದ್ಯದಲ್ಲಿ ಭಾಗವಹಿಸಿರುವ ಎಂಟು ತಂಡಗಳು. ಟೂರ್ನಿಯಲ್ಲಿ ಕಣಕ್ಕಿಳಿದಿರುವ ಒಟ್ಟು 128 ಆಟಗಾರರು, ಎರಡು ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿಗಳು..

ಪ್ರತಿಧ್ವನಿ by ಪ್ರತಿಧ್ವನಿ
February 21, 2026
in Top Story, ಇದೀಗ, ಕರ್ನಾಟಕ, ಜೀವನದ ಶೈಲಿ, ದೇಶ, ರಾಜಕೀಯ
0
ಸಿಎಂ ಕಪ್‌ಗೆ ಶುಭಹಾರೈಸಿದ ಕೆ.ವಿ. ಪ್ರಭಾಕರ್‌ : ಆಲ್‌ ದಿ ಬೆಸ್ಟ್‌ ಹೇಳಿದ ಯುವ ನಾಯಕ ಅರುಣ್‌ ಸೋಮಣ್ಣ..
Share on WhatsAppShare on FacebookShare on Telegram

ಬೆಂಗಳೂರು : 9 ಡ್ರೀಮ್ಸ್‌ ಸಂಸ್ಥೆಯ ವಿನೂತನ ಪರಿಕಲ್ಪನೆಯ ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿ ಇಂದಿನಿಂದ ಎರಡು ದಿನಗಳ ಕಾಲ ನಡೆಯುತ್ತಿದೆ. ನಗರದ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯಾವಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾದ ಕೆ.ವಿ, ಪ್ರಭಾಕರ್‌ ಹಾಗೂ ಯುವ ನಾಯಕ ಅರುಣ್‌ ಸೋಮಣ್ಣ ಶುಭಹಾರೈಸಿದ್ದಾರೆ.

ADVERTISEMENT
CM Cup 2026  : ಇನ್ಸ್ಪೈರ್ ಚಾಲೆಂಜರ್ಸ್ ತಂಡದ ಅದ್ಭುತ ಪ್ರದರ್ಶನ... #pratidhvani

ಬ್ಯಾಡ್ಮಿಂಟನ್‌ ಅಂಸ್ಥೆಯ ಕ್ರೀಡಾಂಗಣಕ್ಕೆ ಪಂದ್ಯಗಳನ್ನು ವೀಕ್ಷಿಸಿದ ಬಳಿಕ ಆಯೋಜಕರ ಕ್ರೀಡಾಸಕ್ತಿಯನ್ನು ಹಾಗೂ ಆಟಗಾರರ ಉತ್ಸಾಹವನ್ನು ಶ್ಲಾಘಿಸಿದ್ದಾರೆ. ವೃತ್ತಿ ಬದುಕಿನ ಜೊತೆಗೆ ದೈಹಿಕ ಆರೋಗ್ಯ ಇನ್ನಷ್ಟು ಉತ್ತಮವಾಗಿರಬೇಕಾದರೆ ಕ್ರೀಡೆಗಳು ಬಹುಮುಖ್ಯವಾಗಿವೆ ಎಂದು ಅಭಿಪ್ರಾಯಪಟ್ಟರು.

ಇನ್ನೂ ಯುವ ನಾಯಕ ಅರುಣ್‌ ಸೋಮಣ್ಣ ಮಾತನಾಡಿ, 9 ಡ್ರೀಮ್ಸ್‌ ಆಯೋಜಕರು ಅದ್ಭುತವಾದ ಪರಿಕಲ್ಷನೆಯನ್ನು ನಮ್ಮೆಲ್ಲರಿಗೆ ಪರಿಚಯಿಸಿದ್ದಾರೆ. ಈ ಶಟಲ್‌ ಬ್ಯಾಡ್ಮಿಂಟನ್‌ನ ಸಿಎಂ ಕಪ್‌ ಪಂದ್ಯಾವಳಿಯು ಗ್ರಾಮೀಣ ಭಾಗಗಳಿಗೂ ತಲುಪಬೇಕು. ಇದಕ್ಕೆ ಬೇಕಾದ ಸಹಾಯ ಹಾಗೂ ಸಹಕಾರ ಮಾಡಲು ಸಿದ್ಧವಾಗಿದ್ದೇವೆ ಎಂದು ಭರವಸೆ ನೀಡಿದ್ದಾರೆ. ಎಲ್ಲ ಆಟಗಾರರು ಒಳ್ಳೆಯ ಪ್ರದರ್ಶನ ನೀಡುತ್ತಿದ್ದಾರೆ ಎಂದು ಪಂದ್ಯಾವಳಿಗೆ ಶುಭ ಕೋರಿದ್ದಾರೆ.

ಇದನ್ನೂ ಓದಿ : ಮೋದಿ–ಲುಲಾ ಮಾತುಕತೆ: ದ್ವಿಪಕ್ಷೀಯ ವ್ಯಾಪಾರ ವಿಸ್ತರಣೆಗೆ ಒಪ್ಪಂದ

ಈ ವೇಳೆ ಇನ್‌ಸ್ಪೈರ್ ಚಾಲೆಂಜರ್ಸ್ ತಂಡದ ಮಾಲೀಕರಾದ ಜಿ.ಎಸ್ ಲಿಂಗರಾಜು, ಪ್ರತಿಧ್ವನಿ ನ್ಯೂಸ್‌ನ ಪ್ರಧಾನ ಸಂಪಾದಕರಾದ ಎಸ್. ಶಿವಕುಮಾರ್‌‌, ಪತ್ರಕರ್ತರಾದ ಸನತ್‌ ರೈ, ಗಿರೀಶ್‌ ಕೋಟೆ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

8 ತಂಡಗಳು, 128 ಆಟಗಾರರ ನಡುವೆ ಕಾದಾಟ…. 

ಸಿಎಂ ಕಪ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಿವೆ. ಟೂರ್ನಿಯಲ್ಲಿ ಒಟ್ಟು 128 ಆಟಗಾರರು ಕಣಕ್ಕಿಳಿದಿದ್ದು. ಜನಪ್ರತಿನಿಧಿಗಳು, ಐಎಎಸ್‌-ಐಪಿಎಸ್‌ ಅಧಿಕಾರಿಗಳು, ಸಚಿವಾಲಯದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ವೈದ್ಯರು, ಸ್ಯಾಂಡಲ್‌ವುಡ್ ತಾರೆಯರು ಹಾಗೂ ಪತ್ರಕರ್ತರು ಜೊತೆಯಾಗಿ ಮೈದಾನದಲ್ಲಿ ಕಾದಾಟ ನಡೆಸುತ್ತಿದ್ದಾರೆ. ಲೀಡರ್ಸ್ ಪ್ಲೇ.. ಫ್ರೆಂಡ್‌ಶಿಫ್ ವಿನ್ ಎಂಬ ಘೋಷ ವಾಕ್ಯದೊಂದಿಗೆ ಆರಂಭಗೊಂಡಿರುವ ಮೊದಲ ಆವೃತ್ತಿಯ ಟೂರ್ನಿಯ ಲಾಂಛನವನ್ನು ಕಳೆದೆರಡು ದಿನಗಳ ಹಿಂದಷ್ಟೇ  ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸಿದ್ದರು. ಟೂರ್ನಿಯಲ್ಲಿ ದಿ ಎಲೈಟ್ ಬ್ಯಾಡ್ಮಿಂಟನ್ ಕ್ಲಬ್, ಇನ್‌ಸ್ಪೈರ್ ಚಾಲೆಂಜರ್ಸ್, ದಿ ಕೆಫೆ ದಿವ್ಯಂ, ಎಟಿಎಸ್ ಅಟ್ಯಾಕರ್ಸ್, ಪ್ರೋ ವಿನ್ ಪ್ಯಾಂಥರ್ಸ್, ಎಸ್ಥೆಟಿಕ್ ಅಟ್ಯಾಕರ್ಸ್, ಟೆಲಿಕಾಂ ಸ್ಕೈ ಸ್ಟ್ರೈಕರ್ಸ್, ಕೆಜಿಎಫ್ ಸ್ಮಾಷರ್ಶ್ ತಂಡಗಳ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಮುಂದುವರೆದಿದೆ. ಲೀಗ್ ಮಾದರಿಯಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಎರಡು ಗುಂಪುಗಳಾಗಿ ತಂಡಗಳನ್ನು ವಿಂಗಡಿಸಲಾಗಿದ್ದು, ಭಾನುವಾರದ ಫೈನಲ್‌ ಪಂದ್ಯದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

Tags: Arun SomannaBadminton loversBadminton newsBadminton sportsbjp karnatakacm cupCM Cup Finalcm cup karnataka 2026CM SidddaramaiahadoctorsG S LingarajuGovindaraj nagarIASInspire ChallengersIPSJournalistK V PrabhakarPratidhvanisports news
Previous Post

ಅತಿಹೆಚ್ಚು ಬಾಳೆಹಣ್ಣು ಬೆಳೆಯುವ ನಗರ ಯಾವುದು ಗೊತ್ತೆ

Next Post

ಈಗ ರಾಜ್ಯದಲ್ಲಿ  ವರ್ಗಾವಣೆ ಭ್ರಷ್ಟಾಚಾರ ಹೆಚ್ಚಾಗಿದೆ -ಸಿದ್ದರಾಮಯ್ಯ

Related Posts

ಸತ್ತ ಅಕ್ಕನ ಅಸ್ಥಿಪಂಜರ ಹೊತ್ತು ಬ್ಯಾಂಕ್‌ಗೆ ಬಂದ ಸೋದರ: ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹೃದಯವಿದ್ರಾವಕ ಪ್ರತಿಭಟನೆ
Top Story

ಸತ್ತ ಅಕ್ಕನ ಅಸ್ಥಿಪಂಜರ ಹೊತ್ತು ಬ್ಯಾಂಕ್‌ಗೆ ಬಂದ ಸೋದರ: ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹೃದಯವಿದ್ರಾವಕ ಪ್ರತಿಭಟನೆ

by ಪ್ರತಿಧ್ವನಿ
April 29, 2026
0

ಒಡಿಶಾದ ಖಿಯೋಂಜರ್ ಜಿಲ್ಲೆಯಲ್ಲಿ ನಡೆದ ಘಟನೆೊಂದು ಸಮಾಜದ ಸಂವೇದನಾಶೀಲತೆಯ ಕೊರತೆ ಮತ್ತು ಆಡಳಿತದ ಕಠೋರತೆಯನ್ನು ಬಯಲಿಗೆಳೆದಿದೆ. ಬಡ ಆದಿವಾಸಿ ಯುವಕ ಜೀತು ಮುಂಡಾ ತನ್ನ ಸತ್ತ ಅಕ್ಕನ...

Read moreDetails
ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ: ಟಿಎಂಸಿಗೆ ಸವಾಲು, ಬಿಜೆಪಿ ಮುನ್ನಡೆ? 

April 28, 2026
ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

April 28, 2026
ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

April 28, 2026
ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

April 28, 2026
Next Post
ಈಗ ರಾಜ್ಯದಲ್ಲಿ  ವರ್ಗಾವಣೆ ಭ್ರಷ್ಟಾಚಾರ ಹೆಚ್ಚಾಗಿದೆ -ಸಿದ್ದರಾಮಯ್ಯ

ಈಗ ರಾಜ್ಯದಲ್ಲಿ  ವರ್ಗಾವಣೆ ಭ್ರಷ್ಟಾಚಾರ ಹೆಚ್ಚಾಗಿದೆ -ಸಿದ್ದರಾಮಯ್ಯ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada