ಬಾಳೆಹಣ್ಣಿನಿಂದ ಬನಾನಾ ಚಿಪ್ಸ್ ಮಾಡಿಕೊಂಡು ಸೇವಿಸುತ್ತಾರೆ. ಬನಾನಾ ಹಲ್ವಾ ಮತ್ತು ಶೀರಾ ಮಾಡಿಕೊಂಡು ತಿನ್ನುತ್ತಾರೆ. ಸಾಂಪ್ರದಾಯಿಕವಾಗಿ ಅನೇಕ ಮನೆಗಳಲ್ಲಿ ಬಾಳೆ ಎಲೆಯಲ್ಲಿ ಊಟವನ್ನು ಬಡಿಸುತ್ತಾರೆ.ಕೈಗೆಟುಕುವ ದರದಲ್ಲಿ ಪೌಷ್ಟಿಕ ಮತ್ತು ವರ್ಷಪೂರ್ತಿ ಲಭ್ಯವಿರುವ ಹಣ್ಣು ಅದು ಬಾಳೆಹಣ್ಣು.ಭಾರತದ ಬಾಳೆಹಣ್ಣಿನ ರಾಜಧಾನಿ ಯಾವುದು ಗೊತ್ತೆ ?

ಮಹಾರಾಷ್ಟ್ರದ ಈ ನಗರವು ದೇಶದ ಬಾಳೆಹಣ್ಣಿನ ಬೇಡಿಕೆಯನ್ನು ಪೂರೈಸುತ್ತದೆ.ದೇಶದ ಅತಿದೊಡ್ಡ ಬಾಳೆಹಣ್ಣು ಉತ್ಪಾದಿಸುವ ಪ್ರದೇಶಗಳಲ್ಲಿ ಒಂದಾಗಿರುವುದರಿಂದ ಜಲಗಾಂವ್. ಉತ್ತರ ಮಹಾರಾಷ್ಟ್ರದ ಫಲವತ್ತಾದ ಪ್ರದೇಶದಲ್ಲಿ ನೆಲೆಗೊಂಡಿರುವ ಈ ಜಿಲ್ಲೆಯು ಭಾರತಕ್ಕ ಬಾಳೆಹಣ್ಣನ ಪೂರೈಸುತ್ತದೆ.

ವರ್ಷಪೂರ್ತಿ ಕೃಷಿಗೆ ಅನುಕೂಲಕರ ಕೃಷಿ ಹವಾಮಾನ ಜಲಗಾಂವ್ ನಗರದಲ್ಲಿದೆ. ಹಲವಾರು ರಾಜ್ಯಗಳು ಬಾಳೆಹಣ್ಣುಗಳನ್ನು ಬೆಳೆಯುತ್ತಿದ್ದರೂ, ಜಲಗಾಂವ್‌ನ ಪ್ರಮಾಣ ವಿಶೇಷವಾಗಿದೆ.






