
ಜೂನ್ 4 ರಂದು ನಡೆದ ಹೃದಯ ವಿದ್ರಾವಕ ಕಾಲ್ತುಳಿತ ಘಟನೆ (Stamped case) ವಿವರಿಸಲು ಸಾಧ್ಯವಾಗದಷ್ಟು ನೋವು ತಂದಿದೆ, ಜೀವನದಲ್ಲಿ ಯಾವುದೇ ಘಟನೆ ಈ ರೀತಿಯ ಆಘಾತವನ್ನು ಸ್ವೀಕರಿಸಲು ನಮ್ಮನ್ನು ಸಿದ್ಧಪಡಿಸುವುದಿಲ್ಲ. ನಮ್ಮ ಫ್ರಾಂಚೈಸಿಯ (RCB) ಇತಿಹಾಸದಲ್ಲಿ ಅತ್ಯಂತ ಸಂತೋಷದಾಯಕ ಕ್ಷಣವಾಗಿರಬೇಕಾಗಿದ್ದ ಆ ಸಂಭ್ರಮಾಚರಣೆಯ ದಿನ ದುರಂತವಾಗಿ ಮಾರ್ಪಟ್ಟಿದೆ ಎಂದು ವಿರಾಟ್ ಕೊಹ್ಲಿ (Virat kohli) ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ನಾವು ಕಳೆದುಕೊಂಡವರ ಕುಟುಂಬಗಳಿಗಾಗಿ ಮತ್ತು ಗಾಯಗೊಂಡ ನಮ್ಮ ಅಭಿಮಾನಿಗಳಿಗಾಗಿ ನಾನು ಯೋಚಿಸುತ್ತಿದ್ದೇನೆ ಮತ್ತು ಪ್ರಾರ್ಥಿಸುತ್ತಿದ್ದೇನೆ. ನಿಮ್ಮ ನಷ್ಟವು ಈಗ ನಮ್ಮ ಕಥೆಯ ಭಾಗವಾಗಿದೆ. ಒಟ್ಟಾಗಿ, ನಾವು ಕಾಳಜಿ, ಗೌರವ ಮತ್ತು ಜವಾಬ್ದಾರಿಯೊಂದಿಗೆ ಮುಂದುವರಿಯುತ್ತೇವೆ ಎಂದು ಭಾರವಾದ ಮನಸ್ಸಿನಿಂದ ಕಿಂಗ್ ಕೊಹ್ಲಿ ವಿರಾಟ್ ಕೊಹ್ಲಿ ಪೋಸ್ಟ್ ಮಾಡಿದ್ದಾರೆ.

ಅವರ ಈ ಮಾತುಗಳನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕೂಡ ಪೋಸ್ಟ್ ಮಾಡಿದೆ. ಕೆಲವೇ ದಿನಗಳ ಹಿಂದೆ ಈ ಕುರಿತು ಪೋಸ್ಟ್ ಮಾಡಿದ್ದ ಆರ್.ಸಿ.ಬಿ , ಬೆಂಗಳೂರು ಕಾಲ್ತುಳಿತ ಘಟನೆ ನಮಗೆ ತೀವ್ರ ದುಃಖ ತಂದಿದ್ದು, ನಾವು ‘ ಆರ್.ಸಿ.ಬಿ ಕೇರ್ಸ್ ‘ ಯೋಜನೆ ರೂಪಿಸುವಲ್ಲಿ ನಿರತರಾಗಿದ್ದೇವೆ ಎಂದು ಹೇಳಿಕೊಂಡಿತ್ತು.