• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಕನ್ನಡಿಗರನ್ನು ಕೆಣಕಿ ಕಂಗಾಲಾದ ಗಾಯಕ.. ಸೋನು ಮಾಡಿದ್ದೇನು..?

ಕೃಷ್ಣ ಮಣಿ by ಕೃಷ್ಣ ಮಣಿ
May 3, 2025
in ಕರ್ನಾಟಕ, ಸಿನಿಮಾ
0
ಕನ್ನಡಿಗರನ್ನು ಕೆಣಕಿ ಕಂಗಾಲಾದ ಗಾಯಕ.. ಸೋನು ಮಾಡಿದ್ದೇನು..?
Share on WhatsAppShare on FacebookShare on Telegram

ಕನ್ನಡದಲ್ಲೇ ಸಾಕಷ್ಟು ಹಾಡುಗಳನ್ನು ಹಾಡಿ, ಸಾಕಷ್ಟು ಹೆಸರು ಮಾಡಿ.. ಒಳ್ಳೆ ಹಣವನ್ನೂ ಮಾಡಿಕೊಂಡು ಆ ಬಳಿಕ ಕನ್ನಡಿಗರನ್ನೇ ಹಿಯ್ಯಾಳಿಸುವುದು ಹಿಂದಿ ಭಾಷಿಕರಿಗೆ ಪಿತ್ರಾರ್ಜಿತ ಆಸ್ತಿ ಎನ್ನುವಂತಾಗಿದೆ. ಹೇಳೋದು ವೇದಾಂತ, ತಿನ್ನೋದು ಬದನೇಕಾಯಿ ಅಂತಾರಲ್ಲ ಹಾಗೆ ಗಾಯಕ ಸೋನು ನಿಗಮ್​​ ಮಾಡಿದ್ದಾರೆ.

ADVERTISEMENT

ಕನ್ನಡಿಗರಿಂದಲೇ ಮನೆ ಮಾತಾದ ಗಾಯಕ ಸೋನು ನಿಗಮ್​​, ಈಗ ಕನ್ನಡಿಗರ ಬಗ್ಗೆ ನಾಲಿಗೆ ಹರಿಬಿಡುವ ಮೂಲಕ ಸುದ್ದಿಯಾಗಿದ್ದಾರೆ. ನಾನು ಹಿಂದಿನ ಜನ್ಮದಲ್ಲಿ ಕನ್ನಡದ ಮಗನಾಗಿ ಹುಟ್ಟಿದ್ದೆ ಅಂತಾ ಹಿಂದೊಮ್ಮೆ ಕನ್ನಡಿಗರನ್ನ ಕೊಂಡಾಡಿದ್ದ ಗಾಯಕ ಸೋನು ನಿಗಮ್​, ಕನ್ನಡ ಕನ್ನಡ ಎಂದಿದ್ದಕ್ಕೆ ಕಾಶ್ಮೀರದ ಪಹಲ್ಗಾಮ್ ದಾಳಿ ಆಯ್ತು ಅಂತಾ ಹೇಳುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಬೇಕಾಗಿದೆ.

ಜೀವನದಿ ಚಿತ್ರದಿಂದ ಆರಂಭವಾದ ಸೋನು ನಿಗಮ್​ ಗಾನಯಾನ, ಇತ್ತೀಚಿನ ಕೃಷ್ಣಂ ಪ್ರಣಯ ಸಖಿ ಚಿತ್ರದ ಹೇ ಗಗನ ಅನ್ನೋ ಹಾಡಿ​​ನಲ್ಲೂ ಮುಂದುವರಿದಿದೆ. ಸೋನು ನಿಗಮ್​ ಸ್ಟಾರ್ ಪಟ್ಟಕ್ಕೆ ಏರಲು ಕನ್ನಡಿಗರ ಪಾತ್ರವೂ ಇದೆ. ಇದೀಗ ಅಹಂನಿಂದ ಕನ್ನಡದ ಬಗ್ಗೆ ಅಪಹಾಸ್ಯ ಮಾಡಿದ್ದಾರೆ. ಕನ್ನಡಿಗರನ್ನ ಕೆಣಕುವ ಕೆಲಸ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ರಸಮಂಜರಿ ಕಾರ್ಯಕ್ರಮದಲ್ಲಿ ಕನ್ನಡದ ಹಾಡು ಹೇಳಿ ಅಂದಿದ್ದಕ್ಕೆ ಇದಕ್ಕೇನೇ ಪಹಲ್ಗಾಮ್ ದಾಳಿ ನಡೆದಿದ್ದು ಎಂದಿದ್ದಾರೆ.

ಸೋನು ನಿಗಮ್​ ಹೇಳಿಕೆಗೆ ಕನ್ನಡಪರ ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಕನ್ನಡ ಹಾಡು ಹಾಡುವಂತೆ ಕೇಳಿದ್ದಕ್ಕೂ, ಭಯೋತ್ಪಾದಕರ ದಾಳಿಗೂ ಏನು ಸಂಬಂಧ. ಕನ್ನಡಿಗರನ್ನ ಅವಮಾನಿಸಿದ ಸೋನು ನಿಗಮ್​ ಅವರನ್ನು ಕನ್ನಡ ಚಿತ್ರೋದ್ಯಮದಿಂದ ದೂರ ಇಡಿ. ಜೊತೆಗೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿ ಅಂತಾ ಕರವೇ ಅಧ್ಯಕ್ಷ ನಾರಾಯಣ ಗೌಡ ಆಕ್ರೋಶ ಹೊರ ಹಾಕಿದ್ದಾರೆ..

ಸೋನು ನಿಗಮ್ ಒಬ್ಬ ಸಾಂಸ್ಕೃತಿಕ ಭಯೋತ್ಪಾದಕ, ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸ್ತಿಯಾ? ಕೂಡಲೇ ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲವಾದ್ರೆ ಸೋನು ನಿಗಮ್ ಕನ್ನಡ ಹಾಡು ಹಾಡುವಂತಿಲ್ಲ. ಕನ್ನಡ‌ ಚಲನಚಿತ್ರ ಮಂಡಳಿ, ನಿರ್ಮಾಪಕ ಸಂಘಕ್ಕೆ ನಾನು ಆಗ್ರಹಿಸುತ್ತೇನೆ. ಸೋನು ನಿಗಮ್ ಅವರಿಂದ ಕನ್ನಡ ಹಾಡು ಹಾಡಿಸಬೇಡಿ. ನಮ್ಮಲ್ಲೇ ಪ್ರತಿಭಾವಂತ ಕನ್ನಡ ಗಾಯಕರಿದ್ದಾರೆ. ಅಂಥವರಿಗೆ ಅವಕಾಶ ಕೊಡಿ ಎಂದು ಒತ್ತಾಯ ಮಾಡಿದ್ದಾರೆ.

Narendra modi:ಮೋದಿಗೆ ಆಂಧ್ರದ ಮೇಲೆ ಇರುವ ಪ್ರೀತಿ ಕರ್ನಾಟಕದ ಮೇಲೆ ಯಾಕೆ ಇಲ್ಲ#pratidhvani

ಸೋನು ನಿಗಮ್‌ ವಿರುದ್ಧ ಬೆಂಗಳೂರಿನ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕರವೇ ದೂರು ನೀಡಿದೆ. ಕನ್ನಡಪರ ಹೋರಾಟಗಾರರು, ಕನ್ನಡಿಗರನ್ನು ಅವಮಾನ ಮಾಡಿರುವ ಸೋನು ನಿಗಮ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ದೂರು ನೀಡಲು ಕರವೇ ತಯಾರಿ ಮಾಡಿಕೊಂಡಿದೆ. ಕನ್ನಡಿಗರನ್ನು ಕೆಣಕಿ ಉಳಿದವರುಂಟೇ ಎನ್ನುವಂತಾಗಿದೆ ಸೋನು ನಿಗಮ್​ ಪರಿಸ್ಥಿತಿ.

Tags: #sonu nigam bengali songsguarantee news kannadaimitating sonu nigamKannadakannada daily newskannada latest newskannada newskannada songskannada top newskannada viral newsKannadigasmani sharma kannada songssonu nigamsonu nigam fabulous speechsonu nigam hitssonu nigam kannada songssonu nigam kannada speechsonu nigam marathi songssonu nigam mimicrysonu nigam odia songssonu nigam songstrending news kannada
Previous Post

ಪಾಸ್​ ಆದ ಮಕ್ಕಳ ಸಂಭ್ರಮ ನಾಚಿಸಿದ ಫೇಲ್​ ಆದ ಕುಟುಂಬ ಸಂಭ್ರಮ

Next Post

ನೈಸ್ ರೋಡ್ ನಲ್ಲಿ ಮರ್ಡರ್ ..?! ವಕೀಲ ಜಗದೀಶ್ ಸಾವು ಕೊಲೆಯೋ..? ಅಪಘಾತವೋ..?! 

Related Posts

BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್
Top Story

BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

by ಪ್ರತಿಧ್ವನಿ
May 25, 2026
0

ಚೆನೈ : ರಾಜ್ಯದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಮೇಕೆದಾಟು ನೀರಾವರಿ ಯೋಜನೆಗೆ ತಮಿಳುನಾಡಿನ ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿದೆ. ಈ ಹಿಂದಿನ ಸರ್ಕಾರಗಳು ಇದರ ವಿರುದ್ಧ ನಿಲುವನ್ನು ಹೊಂದಿದ್ದವು, ಅದರಂತೆ...

Read moreDetails
ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

May 25, 2026
ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

May 25, 2026
ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

May 25, 2026
ಸಿಎಂ ಸಿದ್ದರಾಮಯ್ಯ ದಿಢೀರ್ ದೆಹಲಿಗೆ : ಬದಲಾಗುತ್ತಾ ನಾಯಕತ್ವ..?

ಸಿಎಂ ಸಿದ್ದರಾಮಯ್ಯ ದಿಢೀರ್ ದೆಹಲಿಗೆ : ಬದಲಾಗುತ್ತಾ ನಾಯಕತ್ವ..?

May 25, 2026
Next Post
ನೈಸ್ ರೋಡ್ ನಲ್ಲಿ ಮರ್ಡರ್ ..?! ವಕೀಲ ಜಗದೀಶ್ ಸಾವು ಕೊಲೆಯೋ..? ಅಪಘಾತವೋ..?! 

ನೈಸ್ ರೋಡ್ ನಲ್ಲಿ ಮರ್ಡರ್ ..?! ವಕೀಲ ಜಗದೀಶ್ ಸಾವು ಕೊಲೆಯೋ..? ಅಪಘಾತವೋ..?! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada