
ತುಮಕೂರು: ಶಕ್ತಿ ವರ್ದಕ ಜೀನಿ ಪ್ರೊಡೆಕ್ಟ್ ಕಂಪನಿ ಮಾಲೀಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಜೀನಿ ಕಂಪನಿ ಮಾಲೀಕ ದಿಲೀಪ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ತುಮಕೂರಿನ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಆಗಿದೆ.

ಸಂತ್ರಸ್ತ ಯುವತಿ ನೀಡಿದ ದೂರಿನ ಮೇರೆಗೆ ಎಫ್ಐಅರ್ ದಾಖಲಾಗಿದ್ದು, ಜೀನಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿರೋ ಆರೋಪ ಕೇಳಿ ಬಂದಿದೆ. ಕಳೆದ 10 ತಿಂಗಳಿಂದ ಜೀನಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಸಂತ್ರಸ್ತ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿ, ಖಾಸಗಿ ಅಂಗಾಗಗಳನ್ನ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ.

ಲೈಂಗಿಕ ದೌರ್ಜನ್ಯದ ಬಗ್ಗೆ ಯಾರಿಗಾದರು ವಿಚಾರ ತಿಳಿಸಿದರೆ ಕೊಲೆ ಮಾಡೋದಾಗಿ ಜೀನಿ ಮಾಲೀಕ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದ್ದು, ಜೀನಿ ಕಂಪನಿಯ ಮಾಲೀಕನ ವಿರುದ್ಧ ಗಂಭೀರ ಆರೋಪ ಮಾಡಿ ಸಂತ್ರಸ್ತ ಯುವತಿ ದೂರು ನೀಡಿದ್ದಾರೆ.

ಸಂತ್ರಸ್ತ ಯುವತಿ ಕೊಟ್ಟ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿಕೊಂಡ ಕಳ್ಳಂಬೆಳ್ಳ ಪೊಲೀಸರು, ತನಿಖೆ ಶುರು ಮಾಡಿದ್ದಾರೆ. ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗ್ತಿದ್ದ ಹಾಗೆ ಯಾರ ಸಂಪರ್ಕಕ್ಕೂ ಸಿಗದ ಜೀನಿ ಸಂಸ್ಥೆ ಮಾಲೀಕ ದಿಲೀಪ್ ಕುಮಾರ್ ನಾಪತ್ತೆ ಆಗಿದ್ದಾರೆ.