
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ 14 ಜನ ಪಾಕ್ ಪ್ರಜೆಗಳು ವಾಸ ಮಾಡ್ತಿದ್ದಾರೆ.. ಭಟ್ಕಳ ಮೂಲದವ್ರನ್ನ ಮದ್ವೆಯಾಗಿ ಬಂದಿರೋ 10 ಮಂದಿ ಪಾಕ್ ಮಹಿಳೆಯರು, ಇಲ್ಲೇ ಸಂಸಾರ ಮಾಡ್ತಿದ್ದಾರೆ. ಇವ್ರ ಗಡಿಪಾರಿನ ಬಗ್ಗೆ ಇನ್ನೂ ಯಾವುದೇ ಅಧಿಕೃತ ಸೂಚನೆ ಬಂದಿಲ್ಲ ಎನ್ನಲಾಗಿದ್ದು, ಅಧಿಕಾರಿಗಳು ಕೇಂದ್ರ ಸರ್ಕಾರದ ಸಂದೇಶಕ್ಕೆ ಕಾದು ಕುಳಿತಿದ್ದಾರೆ.
ತುಮಕೂರಲ್ಲೂ ಮೂವರು ಪಾಕಿಸ್ತಾನಿ ಮೂಲದ ಮಹಿಳೆಯರಿದ್ದಾರೆ. ಗಂಡ ಮಕ್ಕಳ ಜೊತೆ ಜೀವನ ನಡೆಸ್ತಿರೋ ಪಾಕಿಸ್ತಾನದ ಹೆಣ್ಮಕ್ಕಳು, ಇಲ್ಲಿನ ಪೌರತ್ವಕ್ಕಾಗಿ 5 ವರ್ಷದಿಂದ ಅರ್ಜಿ ಸಲ್ಲಿಸ್ತಾನೇ ಇದ್ದಾರೆ. ಆದ್ರೆ, ಇದವರೆಗೂ ಕೇಂದ್ರ ಸರ್ಕಾರ ಭಾರತದ ಪೌರತ್ವ ಕೊಟ್ಟಿಲ್ಲ.. ಹೀಗಾಗಿ ಈಗ ವೀಸಾ ರದ್ದಾಗುವ ಆತಂಕದಲ್ಲಿದ್ದು, ಭಾರತದಲ್ಲಿರೋ ಎಲ್ಲಾ ಪಾಕಿಸ್ತಾನಿಗಳು, ಭಾರತ ಬಿಟ್ಟು ಹೊರಡೋದು ಬಹುತೇಕ ಖಾಯಂ ಆಗಿದೆ.

ಮಂಗಳೂರಿನ ಯುವಕರಿಬ್ಬರನ್ನ ಮದ್ವೆಯಾಗಿದ್ದ ಇಬ್ಬರು ಪಾಕ್ ಮಹಿಳೆಯರು, ಇಲ್ಲೇ ವಾಸವಾಗಿದ್ದಾರೆ. ಮದ್ವೆಯಾಗಿ ಬರ್ತಿದ್ದಂತೆ ಪಾಕಿಸ್ತಾನ ಬಿಟ್ಟು ಭಾರತದಲ್ಲೇ ಠಿಕಾಣೆ ಹೂಡಿದ್ದಾರೆ. ಹೀಗಾಗಿ ಇವ್ರನ್ನ ಪಾಕಿಸ್ತಾನಕ್ಕೆ ಕಳಿಸೋದಕ್ಕೆ FRRO ಕಚೇರಿಯಿಂದ ನಿರ್ದೇಶನ ಬರ್ತಿದ್ದಂತೆ ಕಿಕ್ಔಟ್ ಮಾಡೋ ಸಾಧ್ಯತೆ ಇದೆ.
ದಾವಣಗೆರೆಯ ಮೆಡಿಕಲ್ ಕಾಲೇಜಿನಲ್ಲಿ ಪಾಕ್ ಯುವತಿಯೊಬ್ಬಳು ವ್ಯಾಸಂಗ ಮಾಡ್ತಿದ್ದಾಳೆ. ಈ ಬಗ್ಗೆ ಮಾಹಿತಿ ನೀಡಿರುವ ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್, ಪಾಕಿಸ್ತಾನದ ಗೋಡ್ಕಾ ಜಿಲ್ಲೆಯ ಯುವತಿ, ತೃತೀಯ ವರ್ಷದ ಎಂಡಿ ಪೆಥಾಲಜಿ ಓದುತ್ತಿದ್ದಾಳೆ. ಅವರ ವೀಸಾ ಇನ್ನು ಮುಗಿದಿಲ್ಲ. ಹೀಗಾಗಿ ಪಾಕಿಸ್ತಾನ ತೆರಳುವ ಬಗ್ಗೆ ಯಾವುದೇ ಸೂಚನೆ ಬಂದಿಲ್ಲ ಎಂದಿದ್ದಾರೆ.

ಕೊಪ್ಪಳ ಜಿಲ್ಲೆಯ ಮುನಿರಾಬಾದ್ನಲ್ಲೂ ಇಬ್ಬರು ಪಾಕಿಸ್ತಾನ ಪ್ರಜೆಗಳಿರೋ ಮಾಹಿತಿ ಲಭ್ಯವಾಗಿದೆ. ಭಾರತೀಯರನ್ನು ಮದ್ವೆಯಾಗಿ ಬಂದಿರೋ ಪಾಕ್ ಮಹಿಳೆಯರು, ಇಲ್ಲೇ ವಾಸವಾಗಿದ್ದಾರೆ. ಇಬ್ಬರ ಬಳಿಯೂ ಲಾಂಗ್ ಟರ್ಮ್ ವೀಸಾ ಇರೋದ್ರಿಂದ ಗಡಿಪಾರು ಆಗ್ತಾರ ಇಲ್ವಾ ಅನ್ನೋ ಅನುಮಾನ ಇದೆ. ಯಾದಗಿರಿಯಲ್ಲೂ ಓರ್ವ ಪಾಕಿಸ್ತಾನಿ ಪ್ರಜೆ ವಾಸವಾಗಿದ್ದು, ಲಾಂಗ್ ಟರ್ಮ್ ವಿಸಾ ಪಡೆದು ಯಾದಗಿರಿಯಲ್ಲಿ ಇದ್ದಾರೆ ಎಂದು ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ಮಾಹಿತಿ ನೀಡಿದ್ದಾರೆ.

ಕರ್ನಾಟಕದಲ್ಲಿರೋ ಪಾಕ್ ಮೂಲದವರಿಗಷ್ಟೇ ಈ ನಿಯಮ ಅನ್ವಯ ಆಗ್ತಿಲ್ಲ. ಪಾಕಿಸ್ತಾನದ ಗಡಿದಾಟಿ ಬಂದು ಭಾರತದ ಯುವಕನನ್ನ ಮದುವೆಯಾದ ಸೀಮಾ ಹೈದರ್ಗೂ ಈ ನಿಯಮ ಅನ್ವಯವಾಗಲಿದೆ. ಸದ್ಯಕ್ಕೆ ಸೀಮಾ ಹೈದರ್ ಪ್ರಕರಣ ಕೋರ್ಟ್ನಲ್ಲಿದೆ.. ಸೀಮಾ ಹೈದರ್ ರೀತಿಯಲ್ಲೇ ನೂರಾರು ಪಾಕಿಸ್ತಾನಿ ಮಹಿಳೆಯರು ಭಾರತದ ಪೌರತ್ವಕ್ಕಾಗಿ ಕೋರ್ಟ್ಗೆ ಅರ್ಜಿ ಹಾಕಿದ್ದಾರೆ. ಇದೀಗ ಎಲ್ಲಾ ಮಹಿಳೆಯರು ಕೋರ್ಟ್ ಮೊರೆ ಹೋಗಿ ನಾವು ಭಾರತೀಯರು. ನಮ್ಮ ಗಂಡ, ಮಕ್ಕಳು ಇಲ್ಲೇ ಇದ್ದಾರೆ ಎಂದು ರಕ್ಷಣೆ ಪಡೆಯುತ್ತಾರಾ..? ಅನ್ನೋದನ್ನು ಕಾದು ನೋಡ್ಬೇಕು.