ದಲಿತ-ಆದಿವಾಸಿಗಳಿಗಾಗಿ (SC ST)ಮೀಸಲಿಡುವ ನಿಗದಿತ (SCSP-TSP) 25,000 ಕೋಟಿ ರೂ.ಗೂ ಹೆಚ್ಚು ಹಣವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ (Congress government) ಗ್ಯಾರೆಂಟಿಗಳಿಗಾಗಿ ಅಥವಾ ಇತರೆ ವಿಭಾಗಗಳಿಗೆ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂಬ ಅರ್ಥದಲ್ಲಿ ದಲಿತ ಆದಿವಾಸಿ ಸಮುದಾಯಕ್ಕೆ ಘೋರ ಅನ್ಯಾಯವೆಸಗಿದೆ ಎಂದು ನಟ ಅಹಿಂಸಾ ಚೇತನ್ (Ahimsa Chethan) ಆರೋಪಿಸಿದ್ದಾರೆ.

ಈ ಬಗ್ಗೆ ತಮ್ಮ X ಖಾತೆಯಲ್ಲಿ ಪೋಸ್ಟ್ ಮಾಡಿರುವ ಚೇತನ್, ಬಿಜೆಪಿ ಈ ಬಗ್ಗೆ ಧ್ವನಿ ಎತ್ತಿದೆಯಾದ್ರೂ ಅದಕ್ಕೆ ಯಾವುದೇ ಮನ್ನಣೆ ಇಲ್ಲ. ಏಕೆಂದರೆ 2022 ರಲ್ಲಿ ಬಿಜೆಪಿ sarkara ಕೂಡ 7,885 ಕೋಟಿ ರೂ.ಗಳನ್ನು ಇದೇ ರೀತಿ ದುರುಪಯೋಗ ಮಾಡಿದೆ. ಹೀಗಾಗಿ ಬಿಜೆಪಿ ನೇತೃತ್ವದ ಪ್ರತಿಭಟನೆಗೆ ವಿಶ್ವಾಸಾರ್ಹತೆಯ ಕೊರತೆಯಿದೆ ಎಂದಿದ್ದಾರೆ.
ಹೀಗಾಗಿ ಅಸಮಾನತೆ ತೋರಿರುವ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಕೂಡ ದಲಿತ ವಿರೋಧಿ, ಆದಿವಾಸಿ ವಿರೋಧಿ ಧೋರಣೆಯನ್ನು ತೋರಿವೆ. ಈ ನಡೆಯ ವಿರುದ್ಧ ತೀವ್ರ ಹೋರಾಟ ಮತ್ತು ವಿರೋಧ ವ್ಯಕ್ತವಾಗಬೇಕಿದೆ ಎಂದು ಅಹಿಂಸಾ ಚೇತನ್ ಆಗ್ರಹಿಸಿದ್ದಾರೆ.