ಕೇಂದ್ರ ರೈಲ್ವೆ ಸಚಿವಾಲಯದ (Railway ministry) ನೆರವಿನೊಂದಿಗೆ ಐಐಟಿ ಮದ್ರಾಸ್ (IIT madras), 422 ಮೀಟರ್ ಉದ್ದದ ಭಾರತದ ಮೊದಲ ಹೈಪರ್‌ಲೂಪ್ (Hyper loop)ಪರೀಕ್ಷಾ ಟ್ರ್ಯಾಕ್ ಅನ್ನು ಅಭಿವೃದ್ಧಿಪಡಿಸಿದೆ. ಈ ಮೂಲಕ 350 ಕಿಲೋ ಮೀಟರ್‌ಗಳನ್ನು ಕೇವಲ 30 ನಿಮಿಷಗಳಲ್ಲಿ ಕ್ರಮಿಸಬಹುದಾಗಿದೆ.

ಇನ್ನು ದೆಹಲಿಯಿಂದ ಜೈಪುರಕ್ಕೆ ಸುಮಾರು 300 ಕಿಲೋ ಮೀಟರ್‌ಗಳನ್ನು ಅರ್ಧ ಗಂಟೆಗಿಂತ ಕಡಿಮೆ ಅವಧಿಯಲ್ಲಿ ಪ್ರಯಾಣಿಸಬಹುದು. 422 ಮೀಟರ್ ಉದ್ದದ ಹೈಪರ್‌ಲೂಪ್ ಪರೀಕ್ಷಾ ಹಳಿಯ ಸಾಧನೆಯನ್ನು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು ಪರೀಕ್ಷಾರ್ಥ ಹಳಿ ಪೂರ್ಣಗೊಂಡಿರುವುದಾಗಿ ಘೋಷಿಸಿದ್ದಾರೆ.

ಈ ಯೋಜನೆಯನ್ನು ಐಐಟಿ ಮದ್ರಾಸ್ ಕ್ಯಾಂಪಸ್‌ನಲ್ಲಿ ನಿರ್ಮಿಸಲಾಗಿದೆ. ಹೈಪರ್‌ಲೂಪ್ ಯೋಜನೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಕೇಂದ್ರ ರೇಲ್ವೇ ಇಲಾಖೆ ಮುಂದಾಗಿದೆ.