ಗ್ರೇಟರ್ ಬೆಂಗಳೂರು (Greater bengaluru) ವಿಚಾರಕ್ಕೆ ಸಂಬಂಧಪಟ್ಟಂತೆ, ಇದು ಬೆಂಗಳೂರಿನ ಜನರಿಗೆ ಮಾಡುತ್ತಿರುವ ದ್ರೋಹ ಅನ್ಯಾಯ ಮಾತ್ರವಲ್ಲದೆ ಕೆಂಪೇಗೌಡರಿಗೆ ಮಾಡುವ ಅವಮಾನ,ನಗರಕ್ಕೆ ಐದಾರು ಮೇಯರ್ ಯಾಕೆ ಬೇಕು..? ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal nagaraj) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ (Bengaluru) ರಸ್ತೆ ರಿಪೇರಿ ಮಾಡಿ, ಕುಡಿಯುವ ನೀರು ಕೊಡ್ಸಿ ಅಂತ ಹೇಳಿದ್ರೆ ಮಾಡ್ತಿಲ್ಲ. ಇದೆಲ್ಲಾ ಚುನಾವಣೆಗಾಗಿ ಗ್ರೇಟರ್ ಬೆಂಗಳೂರು ನಾಟಕ ಅಷ್ಟೇ.ಗ್ರೇಟರ್ ಬೆಂಗಳೂರಿಗೆ ಅನುಮತಿ ಕೊಡುವ ರೀತಿಯಲ್ಲಿ ವರದಿ ಮಾಡಿದ್ದಾರೆ.
ಬೆಂಗಳೂರು ಜನರು ಗ್ರೇಟರ್ ಬೆಂಗಳೂರು ಕೇಳಿದ್ದಾರೆ ಅಂತ ಈ ವರದಿಯಲ್ಲಿ ಹೇಳ್ತಿದ್ದಾರೆ.ಹಾಗಾದರೆ ಗ್ರೇಟರ್ ಬೆಂಗಳೂರು ಕೇಳಿದವರು ಯಾರು..? ಡಿ.ಕೆ ಶಿವಕುಮಾರ್ (Dk Shivakumar) ದೇವ್ರೆ ಬಂದ್ರು ಬೆಂಗಳೂರು ಅಭಿವೃದ್ಧಿ ಮಾಡಲು ಆಗಲ್ಲ ಅಂತಾರೆ.ಡಿ.ಕೆ ಶಿವಕುಮಾರ್ ಹೀಗೆ ಹೇಳ್ಬಾರ್ದಾಗಿತ್ತು ಎಂದಿದ್ದಾರೆ.

ಕೇವಲ ಇವರಿಗೆ ಅನುಕೂಲ ಆಗುವ ರೀತಿಯಲ್ಲಿ ಗ್ರೇಟರ್ ಬೆಂಗಳೂರು ಮಾಡ್ತಿದ್ದಾರೆ.ಗ್ರೇಟರ್ ಬೆಂಗಳೂರು ಸರ್ವಾಧಿಕಾರಿ, ಹಿಟ್ಲರ್ ಆಡಳಿತ ಆಗುತ್ತೆ.ಗ್ರೇಟರ್ ಬೆಂಗಳೂರು ಆದ್ರೆ ಹರಿದು ಹಂಚು ಹೋಗುತ್ತದೆ, ಮೇಯರ್ ಕಮಿಷನರ್ ಒಬ್ರೆ ಇರಬೇಕು ಎಂದು ವಾಟಲ್ ನಾಗರಾಜ್ ಹೇಳಿದ್ದಾರೆ.