• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಮುಡಾ ಕೇಸ್‌ ರಿಪೋರ್ಟ್‌.. ಸಿಎಂ ವಿರೋಧಿಗಳು ಏನಂತಾರೆ..?

ಕೃಷ್ಣ ಮಣಿ by ಕೃಷ್ಣ ಮಣಿ
February 21, 2025
in ಕರ್ನಾಟಕ, ರಾಜಕೀಯ
0
ಮುಡಾ ಕೇಸ್‌ ರಿಪೋರ್ಟ್‌.. ಸಿಎಂ ವಿರೋಧಿಗಳು ಏನಂತಾರೆ..?
Share on WhatsAppShare on FacebookShare on Telegram

ADVERTISEMENT

ಮುಡಾ ಕೇಸ್‌ನಲ್ಲಿ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್‌ ಸಲ್ಲಿಕೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ದೂರುದಾರ ಸ್ನೇಹಮಯಿ ಕೃಷ್ಣ ಪರ ವಕೀಲ ವಸಂತ್ ಕುಮಾರ್ ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾರೆ. ಇದು ನಿರೀಕ್ಷಿತ ವರದಿ. ನಾವು ಲೋಕಾಯುಕ್ತ ಎಫ್ಐಆರ್ ಸಿಬಿಐ ವರ್ಗಾಯಿಸಬೇಕೆಂದು ಹೈಕೋರ್ಟ್‌ಗೆ ಹೋಗಿದ್ದೇವು. ಇದು ಪೂರ್ವ ನಿಯೋಜಿತ ಉದ್ದೇಶದಿಂದ ವರದಿ ಸಲ್ಲಿಕೆ ಮಾಡಿದ್ದಾರೆ. ಮುಂದಿನ ವಿಚಾರಣೆಯಲ್ಲಿ ನಾವು ಬಿ. ರಿಪೋರ್ಟ್ ಕೇಳ್ತೀವಿ. ಫೆಬ್ರವರಿ 24 ರಂದು ಮುಂದಿನ ವಿಚಾರಣೆ ನಡೆಯಲಿದ್ದು, ಯಾವ ದಾಖಲಾತಿ ಮೇಲೆ ತನಿಖಾಧಿಕಾರಿ ಬಿ ರಿಪೋರ್ಟ್‌ ಸಲ್ಲಿಕೆ ಮಾಡಿದ್ದಾರೆ ಅನ್ನೊದನ್ನ ನೋಡಿ ನಿರ್ಧಾರ ಮಾಡ್ತೀವಿ ಎಂದಿದ್ದಾರೆ.

ಲೋಕಾಯುಕ್ತರ ವರದಿಯ ಫ್ಯಾಕ್ಟ್ ನೋಡಿ ಕೋರ್ಟ್‌ನಲ್ಲಿ ಚಾಲೆಂಜ್ ಮಾಡ್ತೀವಿ ಎಂದಿರುವ ವಕೀಲರು. ಸ್ನೇಹಮಯಿ ಕೃಷ್ಣ ಈಗಾಗಲೇ ಸಾಕಷ್ಟು ದಾಖಲಾತಿಯನ್ನು ಲೋಕಾಯುಕ್ತಕ್ಕೆ ನೀಡಿದ್ದರು. ಅದನ್ನ ಸರಿಯಾಗಿ ಗಮನಿಸಿಲ್ಲ. ಮಾನ್ಯ ಜನಪ್ರತಿನಿಧಿಗಳ ಕೋರ್ಟ್ ಲೋಕಾಯುಕ್ತ ತನಿಖೆಗೆ ನೀಡಿತ್ತು. ಹೈಕೋರ್ಟ್‌ನಲ್ಲಿ ಸಿಬಿಐ ತನಿಖೆಗೆ ಕೋರಿದ್ವಿ. ಹೈಕೋರ್ಟ್ ಲೋಕಾಯುಕ್ತ ಮೇಲೆ ವಿಶ್ವಾಸ ಇಟ್ಟಿತ್ತು. ಆದರೆ ಲೋಕಾಯುಕ್ತ ಅಧಿಕಾರಿಗಳು ತರಾತುರಿಯಲ್ಲಿ ರಿಪೋರ್ಟ್ ಸಲ್ಲಿಕೆ ಮಾಡಿದ್ದಾರೆ. ಇದು ಫೈನಲ್ ರಿಪೋರ್ಟ್ ಆದ್ರೂ, ಇನ್ನು ತನಿಖೆ ಮುಗಿದಿಲ್ಲ ಅಂತ ಅಧಿಕಾರಿಗಳು ಹೇಳಿದ್ದಾರೆ. ಸಿಎಂ, ಅವರ ಪತ್ನಿ ಮಲ್ಲಿಕಾರ್ಜುನ ಸ್ವಾಮಿ, ದೇವರಾಜುಗೆ ಕ್ಲೀನ್ ಚೀಟ್ ಕೊಡಲಿಕ್ಕೆ ರಿಪೋರ್ಟ್ ಸಲ್ಲಿಕೆ ಮಾಡಿದ್ದಾರೆ. ನಾವಿನ್ನು ರಿಪೋರ್ಟ್ ನೋಡಿಲ್ಲ. ಇದೇ 24ನೇ ತಾರೀಖು ರಿಪೋರ್ಟ್ ನಮ್ಮ ಕೈ ಸೇರಲಿದೆ. ವಕೀಲ ವಸಂತ ಕುಮಾರ್ ಹೇಳಿಕೆ.

ಶಾಸಕ ಶ್ರೀವತ್ಸ ಮಾತನಾಡಿ ಲೋಕಾಯುಕ್ತ ಇದೇ ರೀತಿ ವರದಿ ಕೊಡುತ್ತೆ ಎಂದು ಗೊತ್ತಿತ್ತು. ಲೋಕಾಯುಕ್ತ ವರದಿ ಖಂಡಿಸುತ್ತೇವೆ. ಲೋಕಾಯುಕ್ತಕ್ಕೆ ಎಲ್ಲಾ ದಾಖಲೆ ಕೊಟ್ಟಿದ್ದೇವೆ. ಆದರೂ ಈ ರೀತಿ ವರದಿ ಕೊಟ್ಟಿದ್ದಾರೆ. ಈ ಪ್ರಕರಣದಲ್ಲಿ ಸಿಎಂ ಮುಗ್ದರು, ಏನೂ ತಪ್ಪು ಮಾಡಿಲ್ಲ ಎಂಬುದಾದರೆ 14 ಸೈಟ್ ಯಾಕೆ ವಾಪಾಸ್ ಕೊಟ್ಟರು?. ಸಚಿವ ಭೈರತಿ ಸುರೇಶ್ 141 ಫೈಲ್ ತೆಗೆದು ಕೊಂಡು ಹೋಗಿದ್ದಾರೆ. ಅದರಲ್ಲೆ ಸಿಎಂ ಕುಟುಂಬದ ಸಾಕ್ಷಿ ಇರಬಹುದು. ಸಿಎಂ ಒತ್ತಡ ದಿಂದ ಲೋಕಾಯುಕ್ತ ವರದಿ ಸಿದ್ಧವಾಗಿದೆ. ಲೋಕಾಯುಕ್ತಕ್ಕೆ ಇದ್ದ ಮರ್ಯಾದೆಯನ್ನು ಜಿಲ್ಲಾ ಮಟ್ಟದ ಲೋಕಾಯುಕ್ತ ಅಧಿಕಾರಿ ಕಳೆದಿದ್ದಾರೆ.

ಮುಡಾ ಹಗರಣ ವಿಚಾರದಲ್ಲಿ ಸಿಎಂ ಗೆ ಕ್ಲೀನ್ ಚೀಟ್ ವಿಚಾರ. ಸಿದ್ದರಾಮಯ್ಯ ಪರ ಮತ್ತೆ ಜಿ.ಟಿ. ದೇವೇಗೌಡ ಭರ್ಜರಿ ಬ್ಯಾಟಿಂಗ್ ಎಫ್ ಐ ಆರ್ ಆದ ಕೂಡಲೇ ಸಿದ್ದರಾಮಯ್ಯ ರಾಜೀನಾಮೆ ಕೇಳುತ್ತಿದ್ದರು. ಈಗ ನೋಡಿ ಈ ಆರೋಪಕ್ಕೆ ಸಾಕ್ಷಿ ಇಲ್ಲ. ಈಗ ಏನೂ ಹೇಳುತ್ತಾರೆ. ಸಿಎಂ ರಾಜೀನಾಮೆ ಕೇಳ್ತಿದ್ದರು. ಎಫ್ ಐ ಆರ್ ಆದ ತಕ್ಷಣ ರಾಜೀನಾಮೆ ಕೇಳುವುದು ತಪ್ಪು ಎಂದು ಹೇಳಿದ್ದೆ. ಅದನ್ನೆ ಮಹಾ ಅಪರಾಧದ ಅನ್ನೋ ರೀತಿ ಬಿಂಬಿಸಿದ್ದರು. ಈಗ ಸತ್ಯ ಗೊತ್ತಾಗಿದೆ. ನಾನು ಅವತ್ತೂ ಹೇಳಿದ ಮಾತು ನನಗೆ ದುಬಾರಿ ಅಲ್ಲ. ನನ್ನ ಮೇಲಿನ ಸೇಡಿಗೆ ಕಾರಣವಾಯ್ತು ಎಂದಿದ್ದಾರೆ.

Tags: cm siddaramaiah gets clean chit in muda casecm siddaramaiah muda casecm siddaramaiah wife in muda scamed probe muda scamlokayukta gives clean chit to cm siddaramaiah in muda caselokayukta muda casemoney Laundering caseMuda Casemuda case lokayuktamuda case siddaramaiahMuda Scammuda site allocation scammuda site scammulti crore scam in mudasiddaramaiah muda casesiddaramaiah muda scam₹4000 crore scam in muda
Previous Post

ದೆಹಲಿ ಸಿಎಂ ಅಧಿಕಾರ ಸ್ವೀಕಾರ.. ಮೋದಿ ಏನಂತ ಗುಟ್ಟು ಹೇಳಿದ್ರು..?

Next Post

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಗೆ ಅನಾರೋಗ್ಯ ..! ಇಂದು ಬೆಳಿಗ್ಗೆ ಆಸ್ಪತ್ರೆಗೆ ದಾಖಲು ! 

Related Posts

ಬಿಸಿಲಿನ ಬೇಗೆಗೆ ತಂಪೆರೆದ ವರುಣ : ಬೆಂಗಳೂರಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ..
Top Story

ಬಿಸಿಲಿನ ಬೇಗೆಗೆ ತಂಪೆರೆದ ವರುಣ : ಬೆಂಗಳೂರಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ..

by ಪ್ರತಿಧ್ವನಿ
April 29, 2026
0

ಬೆಂಗಳೂರು : ಕೆಲ ದಿನಗಳಿಂದ ಬಿಸಿಲಿನ ಬೇಗೆಗೆ ಬಸವಳಿದಿದ್ದ ನಗರದ ಜನರಿಗೆ ಇಂದು ಸಂಜೆ ವರುಣ ತಂಪೆರೆದಿದ್ದಾನೆ. ಬೇಸಿಗೆಯ ಬಿಸಿಲಿನ ಶಾಖಕ್ಕೆ ಕಂಗಾಲಾಗಿದ್ದ ಸಿಲಿಕಾನ್‌ ಸಿಟಿಯ ಜನರಿಗೆ ಮಳೆರಾಯ...

Read moreDetails
ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

April 29, 2026
“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

April 29, 2026
ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

April 29, 2026
ಕೈ ಪಕ್ಷದ ವಿರುದ್ಧ ಅಹಿಂದ ಗುಡುಗು: ಹೊಸ ರಾಜಕೀಯ ತಿರುವು

ಕೈ ಪಕ್ಷದ ವಿರುದ್ಧ ಅಹಿಂದ ಗುಡುಗು: ಹೊಸ ರಾಜಕೀಯ ತಿರುವು

April 29, 2026
Next Post
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಗೆ ಅನಾರೋಗ್ಯ ..! ಇಂದು ಬೆಳಿಗ್ಗೆ ಆಸ್ಪತ್ರೆಗೆ ದಾಖಲು ! 

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಗೆ ಅನಾರೋಗ್ಯ ..! ಇಂದು ಬೆಳಿಗ್ಗೆ ಆಸ್ಪತ್ರೆಗೆ ದಾಖಲು ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada