• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮೈಕ್ರೋ ಫೈನಾನ್ಸ್‌ ಕಿರುಕುಳಕ್ಕೆ ಸರ್ಕಾರದ ತಡೆ.. ಇಂದು ಮಹತ್ವದ ನಿರ್ಧಾರ..

ಕೃಷ್ಣ ಮಣಿ by ಕೃಷ್ಣ ಮಣಿ
January 25, 2025
in Top Story, ಕರ್ನಾಟಕ, ಜೀವನದ ಶೈಲಿ, ವಿಶೇಷ, ಶೋಧ
0
ಮೈಕ್ರೋ ಫೈನಾನ್ಸ್‌ ಕಿರುಕುಳಕ್ಕೆ ಸರ್ಕಾರದ ತಡೆ.. ಇಂದು ಮಹತ್ವದ ನಿರ್ಧಾರ..
Share on WhatsAppShare on FacebookShare on Telegram

ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್​ ಕಿರುಕುಳದ ಬಗ್ಗೆ ಮಾಧ್ಯಮಗಳ ನಿರಂತರ ವರದಿ ಬಳಿಕ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ನಿರ್ಧಾರ ಮಾಡಿದೆ. ಫೈನಾನ್ಸ್​ಗಳ ಹಾವಳಿಗೆ ತಡೆ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಗ್ರಾಮೀಣ ಭಾಗದಲ್ಲಿ ಫೈನಾನ್ಸ್​ ಕಾಟದಿಂದ ಜನರು ಪ್ರಾಣ ಕಳೆದುಕೊಳ್ತಿದ್ದು, ಇದಕ್ಕೆ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಸುಗ್ರಿವಾಜ್ಞೆ ತರಲು ಮುಂದಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಮಹತ್ವದ ನಿರ್ಧಾರ ಮಾಡಲಿದ್ದಾರೆ.

ADVERTISEMENT

ವಿಜಯಪುರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಎದುರು ಮಹಿಳೆಯೊಬ್ಬರು ಮೈಕ್ರೋ ಫೈನಾನ್ಸ್‌ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಮೈಕ್ರೋ ಫೈನಾನ್ಸ್​ನಿಂದ ಆಗುತ್ತಿರುವ ಕಿರುಕುಳ ಬಗ್ಗೆ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ. ತಾಳಿ ಮಾರಿ ಫೈನಾನ್ಸ್​ಗೆ ಹಣ ಕಟ್ಟಿದ್ದೇನೆ. ಆದ್ರೂ ಕಿರುಕುಳ ತಪ್ಪುತ್ತಿಲ್ಲ ಎಂದು ಕಣ್ಣೀರಾಕಿದ್ದಾರೆ. ಸದ್ಯ ಸ್ಥಳದಲ್ಲೇ ಇದ್ದ ಎಎಸ್​ಪಿಗೆ ನಾಗಲಕ್ಷ್ಮೀ ಕೂಡಲೇ ಫೈನಾನ್ಸ್ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಮಹಿಳೆಯರಿಗೆ ಮೈಕ್ರೋ ಫೈನಾನ್ಸ್ ಕಿರುಕುಳ ವಿಚಾರದ ಬಗ್ಗೆ ವಿಜಯಪುರದಲ್ಲಿ ಮಾತನಾಡಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ.. ಮಹಿಳೆಯರು ಧೈರ್ಯವಾಗಿರಬೇಕು. ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಹೆದರದೇ ಪೊಲೀಸರಿಗೆ ದೂರು ಕೊಡಿ. ಮಹಿಳೆಯರಿಗೆ ಫೈನಾನ್ಸ್​ ಸಿಬ್ಬಂದಿ ಕಿರುಕುಳ ನೀಡ್ತಿದ್ರೆ ಕೂಡಲೇ ಫೈನಾನ್ಸ್​ರವರನ್ನ ಅರೆಸ್ಟ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Lawyer Jagadish: ಲಾಯರ್ ಜಗದೀಶ್ ಮೇಲೆ ಹಲ್ಲೆ ಮಾಡಿದೆಯಾರು #pratidhvani

ಮೈಕ್ರೋ ಫೈನಾನ್ಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಇದರ ಬೆನ್ನಲ್ಲೇ ಕೊಟ್ಟ ಸಾಲವನ್ನ ಬುದ್ದಿವಂತಿಕೆಯಿಂದ ವಾಪಸ್ ಪಡೆಯಲು ಮೈಕ್ರೋ ಫೈನಾನ್ಸ್​ ಮುಂದಾಗಿದೆ. ಹಳೆ ಸಾಲ ಕೊಟ್ರೆ ದುಪ್ಪಟ್ಟು ಸಾಲ ವಾಪಸ್ ಮಾಡೋದಾಗಿ ಸಾಲಗಾರರಿಗೆ ಕಂಪನಿಗಳು ಮೆಸೇಜ್ ಮಾಡ್ತಿದೆ. ಮೆಸೇಜ್ ನಂಬಿ ಸಾಲ ಮರುಪಾವತಿ ಮಾಡಿದ್ರೆ ಫೈನಾನ್ಸ್​ ಕಂಪನಿಗಳು ಸಾಲ ಕೊಡದೇ ಜಾರಿಕೊಳ್ತಿದೆ. ನಿಮ್ಮ ಸಿಬಿಲ್ ಸ್ಕೋರ್ ಇಲ್ಲ ಅಂತ ಹೇಳುತ್ತಾ ಜಾರಿಕೊಳ್ತಿದ್ದಾರೆ. ಇನ್ನ ಮಂಡ್ಯದ ಕಾಳೇನಹಳ್ಳಿಯ ಕೆಲವವರು ಸಾಲ ಮರುಪಾವತಿ ಮಾಡಿದ್ದು, ನಮಗೆ ಮತ್ತೆ ಸಾಲ ಕೊಡಿ ಅಂತ ಮನವಿ ಮಾಡಿಕೊಳ್ತಿದ್ದಾರೆ

ರಾಜ್ಯದಲ್ಲಿ ಫೈನಾನ್ಸ್ ಕಾಟ ಹೆಚ್ಚಾಗ್ತಿರುವ ವಿಚಾರದ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಸುಮಾರು ಕಡೆ ಕಿರುಕುಳ ಕೊಡುವ ವರದಿಗಳು ಬರ್ತಿವೆ. ಸಬ್ಸಿಡಿ ಹೆಸರಿನಲ್ಲಿ ಸಾವಿರಾರು ಜನರಿಗೆ ಸಾಲ ಕೊಟ್ಟಿದ್ದಾರೆ. ಹಣ ತುಂಬುವ ವಿಚಾರದಲ್ಲಿ ಈಗ ಸಂಘರ್ಷ ಆರಂಭವಾಗಿದೆ. ಈಗಾಗಲೇ ಡಿಸಿ ನೇತೃತ್ವದಲ್ಲಿ ಸಭೆ ನಡೆಸಿದ್ದೇನೆ. ಇದಕ್ಕೆ ಏನಾದ್ರೂ ಪರಿಹಾರ ಹುಡುಕುತ್ತೇವೆ ಎಂದಿದ್ದಾರೆ. ಇನ್ನು ಇದೇ ವಿಚಾರವಾಗಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಚಲುವರಾಯಸ್ವಾಮಿ ಫೈನಾನ್ಸ್ ಕಾಟಕ್ಕೆ ಕಠಿಣ ಕಾನೂನು ಕ್ರಮ ತರುವ ಕೆಲಸ ಮಾಡ್ತೇವೆ ಎಂದಿದ್ದಾರೆ.

ರಾಜ್ಯದಲ್ಲಿ ಹೆಚ್ಚುತ್ತಿರುವ ಮೈಕ್ರೋ ಫೈನಾನ್ಸ್​ ಕಿರುಕುಳದ ಬಗ್ಗೆ ರಾಮನಗರದಲ್ಲಿ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ರಾಜ್ಯದ ಹಲವಡೆ ಮೈಕ್ರೋ ಫೈನಾನ್ಸ್​ ಹಾವಳಿ ಹೆಚ್ಚಾಗಿದೆ. ಈಗ 2 ಸಾವಿರ ಗ್ಯಾರಂಟಿ ಹಣ ಕೊಟ್ರು. ಮತ್ಯಾಕೆ ಜನ ಮೈಕ್ರೋ ಫೈನಾನ್ಸ್​ನಲ್ಲಿ ಸಾಲ ಮಾಡ್ತವ್ರೆ. ನಾನು ಸಿಎಂ ಆಗಿದ್ದಾಗ ಬಿಲ್ ಪಾಸ್ ಮಾಡಿ ಒಂದು ಕಾನೂನು ತಂದೆ. ಆ ಬಿಲ್ ಏನಾಯ್ತು. ಬಡವರ ಮೇಲೆ ಯಾರಿಗೆ ಕಾಳಜಿಯಿದೆ ಅನ್ನೋದನ್ನ ಜನರು ಈಗಲಾದ್ರೂ ಅರ್ಥ ಮಾಡಿಕೊಳ್ಳಲಿ ಎಂದಿದ್ದಾರೆ. ಇನ್ನು ಇದೇ ವಿಚಾರವಾಗಿ ನಿಖಿಲ್ ಕುಮಾರಸ್ವಾಮಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ, ಛಲವಾದಿ ನಾರಯಣಸ್ವಾಮಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

Tags: articles of impeachmentassam micro finance companiesbanking & financecommission on the status of womencustomers of microfinance companieselectroral financefinanceFInance Ministryflorence school of banking & financegma news todayhimanta bisha sarma new announced todaymicro finance companymicro finance loanomicron canadaparliament of the republic of trinidad and tobagoreal vision financethe national on demand
Previous Post

ತುರ್ತು ಕ್ಯಾಬಿನೆಟ್‌ ಸಭೆಯಲ್ಲಿ ಆದ ನಿರ್ಧಾರ ಏನು..?

Next Post

ಲಾಯರ್ ಜಗದೀಶ್ ಅರೆಸ್ಟ್

Related Posts

ಬೌರಿಂಗ್ ದುರಂತದ ಬಳಿಕ ಎಚ್ಚರಗೊಂಡ ಸರ್ಕಾರ: ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ತಪಾಸಣೆ ಆದೇಶ
Top Story

ಬೌರಿಂಗ್ ದುರಂತದ ಬಳಿಕ ಎಚ್ಚರಗೊಂಡ ಸರ್ಕಾರ: ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ತಪಾಸಣೆ ಆದೇಶ

by ಪ್ರತಿಧ್ವನಿ
April 30, 2026
0

ಬೆಂಗಳೂರು: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿತ ದುರಂತದ ಹಿನ್ನೆಲೆ, ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಶರಣ ಪ್ರಕಾಶ ಪಾಟೀಲ ಅವರು ಗುರುವಾರ ಆಸ್ಪತ್ರೆಗೆ ಭೇಟಿ...

Read moreDetails
ಸೌಜನ್ಯ ಪ್ರಕರಣಕ್ಕೆ ಮತ್ತೆ ಜೀವ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕಠಿಣ ಸೂಚನೆ

ಸೌಜನ್ಯ ಪ್ರಕರಣಕ್ಕೆ ಮತ್ತೆ ಜೀವ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕಠಿಣ ಸೂಚನೆ

April 30, 2026
ಬೇಡ್ತಿ ನದಿಯ ಏತ ನೀರಾವರಿ ಯೋಜನೆ ಎರಡನೇ ಹಂತಕ್ಕೆ ₹180 ಕೋಟಿ

ಮಳೆ ದುರಂತಕ್ಕೆ ಆಘಾತ ವ್ಯಕ್ತಪಡಿಸಿದ ಡಿಕೆಶಿ: “ಆರೋಪದ ಸಮಯವಲ್ಲ, ಪರಿಹಾರವೇ ಮುಖ್ಯ”

April 30, 2026
ಮಳೆಯಲ್ಲಿ ಮುಳುಗಿದ ಬೆಂಗಳೂರು: ಡಿಸಿಎಂ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ

ಮಳೆಯಲ್ಲಿ ಮುಳುಗಿದ ಬೆಂಗಳೂರು: ಡಿಸಿಎಂ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ

April 30, 2026
ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ

ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ

April 29, 2026
Next Post
ಲಾಯರ್ ಜಗದೀಶ್ ಅರೆಸ್ಟ್

ಲಾಯರ್ ಜಗದೀಶ್ ಅರೆಸ್ಟ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada