ಚಾಕೊಲೇಟ್ ಅಂದ್ರೆ ಯಾರಿಗ್ತಾನೆ ಇಷ್ಟ ಆಗಲ್ಲ ಅದ್ರಲ್ಲೂ ಮಕ್ಕಳಂತೂ ಚಾಕೊಲೇಟ್ ಅಂದ್ರೆ ತುಂಬಾನೆ ಇಷ್ಟ ಪಡುತ್ತಾರೆ. ಚಾಕಲೇಟ್ ಬಾಯಿಗೆ ಎಷ್ಟು ರುಚಿಯೋ ಆರೋಗ್ಯಕ್ಕೆ ಹಾನಿ ಕೂಡ ಅಷ್ಟೇ. ಇನ್ನು ಕೆಲವು ತಂದೆ-ತಾಯಿಗಳಂತೂ ಲಿಮಿಟ್ ಇಲ್ಲದೆ ಚಾಕೊಲೇಟ್ ಅನ್ನ ನೀಡುತ್ತಾರೆ. ಈ ಸಿಹಿ ಪದಾರ್ಥವನ್ನು ತಿನ್ನೋದ್ರಿಂದ ಹಲ್ಲು ಹುಡುಕಾಗುವುದು ಮಾತ್ರವಲ್ಲದೆ ಆರೋಗ್ಯ ಸಮಸ್ಯೆಗಳು ಕೂಡ ಎದುರಾಗುತ್ತದೆ ಅವುಗಳು ಏನು ಅನ್ನುವುದರ ಮಾಹಿತಿ ಹೀಗಿದೆ

ತೂಕ ಮತ್ತು ಬೊಜ್ಜು
ಚಾಕೊಲೇಟ್ ಸೇವನೆ ಅತಿಯಾದರೆ ಅದ್ರಲ್ಲಿರುವಂತಹ ಕ್ಯಾಲೊರಿಗಳು, ಕೊಬ್ಬಿನ ಅಂಶ ಹಾಗೂ ಸಕ್ಕರೆ ದೇಹಕ್ಕೆ ಸೇರುತ್ತದೆ.ಇದರಿಂದ ಮಕ್ಕಳ ತೂಕ ಹೆಚ್ಚಾಗುತ್ತದೆ ಹಾಗೂ ಬೊಜ್ಜು ಕೂಡ ಬರುತ್ತದೆ.

ಹೊಟ್ಟೆ ನೋವು
ಚಾಕೊಲೇಟ್ ರುಚಿ ಎನಿಸಲು ಅದರಲ್ಲಿ ಹೆಚ್ಚು ಸಕ್ಕರೆಯನ್ನು ಬಳಸಿರುತ್ತಾರೆ ಮತ್ತು ಕೊಬ್ಬಿನ ಅಂಶ ಇರುವುದರಿಂದ ಕೆಲವು ಮಕ್ಕಳಿಗೆ ಹೊಟ್ಟೆ ನೋವು ಕಾಡುತ್ತದೆ..ಅಷ್ಟೇ ಅಲ್ಲದೆ ವಾಕರಿಕೆ, ವಾಂತಿ ಮತ್ತು ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು.

ಅಲರ್ಜಿ ರಿಯಾಕ್ಷನ್
ಚಾಕ್ಲೇಟಿನಲ್ಲಿ ಕೋಕ್ ಸಕ್ಕರೆ ಹಾಲು ಇಂತಹ ಹೆಚ್ಚು ಕ್ಯಾಲೋರಿ ಇರುವಂತಹ ಪದಾರ್ಥಗಳನ್ನು ಬಳಸಲಾಗಿರುತ್ತದೆ. ಇವುಗಳನ್ನ ಸೇವಿಸುವುದರಿಂದ ಮಕ್ಕಳಲ್ಲಿ ಅಲರ್ಜಿಕ್ ರಿಯಾಕ್ಷನ್ ಆಗುವುದು ಖಂಡಿತ.

ಪೋಷಕಾಂಶಗಳ ಅಸಮತೋಲನ
ಚಾಕೊಲೇಟ್‌ಗಳನ್ನು ಸೇವಿಸುವುದರಿಂದ ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು ಮತ್ತು ಫೈಬರ್ ಸೇರಿದಂತೆ ಅಗತ್ಯ ಪೋಷಕಾಂಶಗಳ ಅಸಮತೋಲನಕ್ಕೆ ಕಾರಣವಾಗಬಹುದು.