ರಾಜ್ಯ ಬಿಜೆಪಿಯಲ್ಲಿ ಬಣ ರಾಜಕೀಯದ ಕಿಚ್ಚು ಜೋರಾಗ್ತಿದೆ.. ಬಿ.ಎಸ್ ಯಡಿಯೂರಪ್ಪ ಹಾಗೂ ಬಿ.ವೈ ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟೀಮ್ ಕೆಂಡ ಕಾರುತ್ತಿತ್ತು. ಇದೀಗ ಜನಾರ್ದನರೆಡ್ಡಿ ಹಾಗು ಶ್ರೀರಾಮುಲು ನಡುವೆ ಟಾಕ್ವಾರ್ ಶುರುವಾಗಿದೆ.. ಸಂಡೂರಿನ ಸೋಲಿನ ಹೊಣೆ ಶ್ರೀರಾಮುಲು ಮೇಲೆ ಹೊರಿಸಿದ್ದಕ್ಕೆ ಉಗ್ರರೂಪ ತಾಳಿದೆ. ಜನಾರ್ದನರೆಡ್ಡಿ ವಿರುದ್ಧ ಬಹಿರಂಗ ವಾಗ್ದಾಳಿ ಮಾಡಿದ ಬಳಿಕ ಇವತ್ತು ಸುದ್ದಿಗೋಷ್ಟಿ ನಡೆಸಿದ ಜನಾರ್ದನ ರೆಡ್ಡಿ, ರಾಮುಲು ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದಾರೆ.. ನಾನಿಲ್ಲದಿದ್ದರೆ ರಾಮುಲು ಕೊಲೆಗಾರ ಆಗ್ತಿದ್ದ. ರಾಮುಲುಗೆ ಸನ್ಮಾರ್ಗ ತೋರಿಸಿದ್ದೆ ನಾನು.. ರಾಮುಲುಗೆ ರಾಜಕೀಯವಾಗಿ ಬೆಳೆಸಿದ್ದು ನಾನೇ ಎಂದಿದ್ದಾರೆ.

ಶ್ರೀರಾಮುಲು ಕಾಂಗ್ರೆಸ್ ಸೇರ್ಪಡೆ ವಿಚಾರದ ಬಗ್ಗೆ ಮಾತನಾಡಿದ ಮಾಜಿ ಸಚಿವ ಜನಾರ್ದನರೆಡ್ಡಿ, ಶ್ರೀರಾಮುಲು ಎಂದೂ ನನಗೆ ಶತ್ರು ಅಲ್ಲ.. ಪಕ್ಷ ಬಿಡೋದು, ಬಿಡದೆ ಇರೋದು ಅವರ ವೈಯಕ್ತಿಕ ವಿಚಾರ.. ಕಾಂಗ್ರೆಸ್ಗೆ ಹೋಗೋದಾದ್ರೆ ಹೋಗಲಿ ಎಂದು ನೇರವಾಗಿಯೇ ಹೇಳಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟಿರುವ ಶ್ರೀರಾಮುಲು, ನನಗೆ ಬಿಜೆಪಿ ತಾಯಿ ಇದ್ದಂತೆ, ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡಲ್ಲ ಎಂದಿದ್ದಾರೆ.

ಬೆಂಗಳೂರಲ್ಲಿ ಸುದ್ದಿಗೋಷ್ಟಿ ನಡೆಸಿದ ಜನಾರ್ದನ ರೆಡ್ಡಿ 40 ವರ್ಷಗಳ ಹಳೆಯ ರಾಜಕೀಯವನ್ನ ನೆನಪಿಸಿದ್ರು.. 1991ರಲ್ಲಿ ರಾಮುಲು ಮಾವನ ಕೊಲೆ ಆಗಿತ್ತು.. ರಾಮುಲು ಮೇಲೆ ಕಾರ್ಪೊರೇಟರ್ ಕೊಲೆ ಆರೋಪ ಬಂದಿತ್ತು.. ಆಗ ನಾನು ಪ್ರೆಸ್ಮೀಟ್ ಮಾಡಿದ್ದೆ.. ದಿವಾಕರ್ ಬಾಬು ವಿರುದ್ಧ ನಾನು ಮಾತಾಡಿದ್ದೆ. ರಾಮುಲು ಪರ ಆಗ ನಾನು ನಿಂತಿದ್ದೆ.. ಆಗ ರಾಮುಲು ಸೋದರ ಮಾವನ ಕೊಂದವರನ್ನ ಬಿಡಲ್ಲ ಎಂದಿದ್ರು. ಈ ವೇಳೆ ರಾಮುಲುಗೆ ಸನ್ಮಾರ್ಗ ತೋರಿಸಿದೆ ಎಂದಿದ್ರು.. ಇದಕ್ಕೆ ತಿರುಗೇಟು ಕೊಟ್ಟ ರಾಮುಲು, ನಮ್ಮ ಕುಟುಂಬಕ್ಕೆ ರಾಜಕೀಯ ಇತಿಹಾಸವಿದೆ.. ಬಡವರಿಗೆ ಸಹಾಯ ಮಾಡಿ ಮೇಲೆ ಬಂದಿದ್ದೀನಿ ಎಂದು ತಿರುಗೇಟು ಕೊಟ್ಟಿದ್ದಾರೆ.

ಶ್ರೀರಾಮುಲು ವಿರುದ್ಧ ಜನಾರ್ದನರೆಡ್ಡಿ ವಾಗ್ದಾಳಿ ಮಾಡಿದ್ದು, 2018ರಲ್ಲಿ ರಾಮುಲುಗೆ ಸೋಲುವ ಭಯವಿತ್ತು. ಅದಕ್ಕಾಗಿ ಮೊಳಕಾಲ್ಮೂರು ಕ್ಷೇತ್ರವನ್ನ ಆಯ್ಕೆ ಮಾಡಿಕೊಂಡಿದ್ರು. ಆಗ ನಾನು ಮೊಳಕಾಲ್ಮೂರಲ್ಲಿ ಪ್ರಚಾರ ಮಾಡಿದ್ದೆ. ನನ್ನ ಸಹಾಯ ಪಡೆದುಕೊಂಡು ರಾಮುಲು 45 ಸಾವಿರ ವೋಟ್ಗಳಿಂದ ಗೆದ್ದರು ಎಂದಿದ್ದಾರೆ. ಇನ್ನು ರಾಮುಲುನ ನಾನೇ ಗೆಲ್ಲಿಸಿದ್ದು ಎಂದ ಜನಾರ್ದನ ರೆಡ್ಡಿಗೆ ಶ್ರೀರಾಮುಲು ತಿರುಗೇಟು ಕೊಟ್ಟಿದ್ದಾರೆ. ಜನಾರ್ದನ ರೆಡ್ಡಿ ಏನು ಮ್ಯಾಜಿಕ್ ಮಾಡಿ ಗೆಲ್ಲಿಸಿದ್ರಾ..? 2015ರಲ್ಲಿ ಎಷ್ಟೆಲ್ಲಾ ಕ್ಷೇತ್ರ ಗೆದ್ದಿದ್ವಿ.. ನನಗೆ ಶಕ್ತಿ ಇಲ್ಲದಿದ್ರೆ ಬಾದಾಮಿಯಿಂದ ನಿಲ್ಲಿಸ್ತಿದ್ರಾ..? ಬಾದಾಮಿಯಲ್ಲಿ ವಾಲ್ಮೀಕಿ ಮತಗಳಿಲ್ಲ ಆದ್ರೂ ನನ್ನ ಚುನಾವಣೆ ನಿಲ್ಲಿಸಿಲ್ವಾ ಎಂದು ಕೌಂಟರ್ ಕೊಟ್ಟಿದ್ದಾರೆ.