• Home
  • About Us
  • ಕರ್ನಾಟಕ
Saturday, December 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ದುರ್ಬಲ ಪ್ರಧಾನಿ?

ಪ್ರತಿಧ್ವನಿ by ಪ್ರತಿಧ್ವನಿ
January 3, 2025
in Top Story, ಕರ್ನಾಟಕ, ದೇಶ, ರಾಜಕೀಯ, ವಾಣಿಜ್ಯ, ವಿಶೇಷ
0
Share on WhatsAppShare on FacebookShare on Telegram

ADVERTISEMENT

2004-2014ರ ಹತ್ತು ವರ್ಷಗಳ ಪ್ರಧಾನಮಂತ್ರಿಗಳ ಅವಧಿಯಲ್ಲಿ ಮನಮೋಹನ್ ಸಿಂಗ್ ತಮ್ಮ ಎಲ್‌ಪಿಜಿ ಎನ್ನುವ ಕರಾಳ ನೀತಿಯಿಂದ ಉಂಟಾದ ಗುಣಪಡಿಸಲಾಗದ ಗಾಯಗಳಿಗೆ ಮಲಾಮು ಎನ್ನುವಂತೆ ಕಲ್ಯಾಣ ಯೋಜನೆಗಳ ಕಾಯ್ದೆಗಳನ್ನು ಜಾರಿಗೊಳಿಸಿದ್ದು ಸಹ ಚರ್ಚೆಗೆ ಯೋಗ್ಯವಾಗಿದೆ. ಆದರೆ ಅರುಣಾ ರಾಯ್‌, ಜೀನ್‌ ಡ್ರೀಜೆಯಂತಹ ಅಭಿವೃದ್ಧಿ ಆರ್ಥಿಕ ತಜ್ಞರು, ಹರ್ಷ ಮಂದರ್‌ರಂತಹ ಚಿಂತಕರು, ಸೋನಿಯಾ ಗಾಂಧಿಯವರಂತಹ ಪ್ರಬುದ್ಧ ರಾಜಕಾರಣಿಗಳನ್ನು ಒಳಗೊಂಡ ʼರಾಷ್ಟ್ರೀಯ ಸಲಹಾ ಮಂಡಳಿʼಯ(ಎನ್‌ಎಸಿ) ಸಾಮಾಜಿಕ ಚಿಂತನೆ ಮತ್ತು ಅರೆ ಸಮಾಜವಾದಿ ಒಳನೋಟಗಳ ಕಾರಣದಿಂದ ಈ ಕಲ್ಯಾಣ ಯೋಜನೆಗಳ ಕಾಯ್ದೆಗಳು ಅನುಷ್ಠಾನಗೊಂಡವು ಎನ್ನುವುದು ವಾಸ್ತವ. ಇಲ್ಲಿ ಸಿಂಗ್‌ ಅವರು ಅನೇಕ ʼರೆʼಗಳ ಖುಣದಲ್ಲಿದ್ದಾರೆ. ಎನ್‌ಎಸಿ ಇಲ್ಲದೇ ಹೋಗಿದ್ದರೆ, ಡಿ ಫ್ಯಾಕ್ಟೋ ಪಿಎಂ ಎಂದು ಅಪಪ್ರಚಾರಕ್ಕೆ ಒಳಗಾಗಿದ್ದ ಸೋನಿಯಾ ಗಾಂಧಿ ರಾಜಕೀಯ ಇಚ್ಚಾಶಕ್ತಿ ಪ್ರದರ್ಶಿಸದಿದ್ದರೆ ಮತ್ತು ಯುಪಿಎ 1 ಅವಧಿಯಲ್ಲಿ ಮೈತ್ರಿಕೂಟದ ಭಾಗವಾಗಿದ್ದ ಎಡ ಪಕ್ಷಗಳು ಜನಪರ ಕಾಳಜಿಯುಳ್ಳ ನೀತಿಗಳನ್ನು ರೂಪಿಸದಿದ್ದರೆ ಸಿಂಗ್‌ ಅವರ ಪ್ರಧಾನಮಂತ್ರಿಗಳ ಹತ್ತು ವರ್ಷಗಳ ಅವಧಿ ಮತ್ತಷ್ಟು ವೈಫಲ್ಯಗಳಿಂದ ಕೂಡಿರುತ್ತಿತ್ತು. ಈ ಸತ್ಯವೂ ಅವರ ಸಮಾಜೋ-ಆರ್ಥಿಕ-ರಾಜಕೀಯ ಚಿಂತನೆಯ ಮಿತಿಯನ್ನು ತೋರಿಸುತ್ತದೆ.

ಆರ್‌ಟಿಇ(2009), ನರೇಗಾ(2005), ಆರ್‌ಟಿಐ(2005), ಆಹಾರ ಭದ್ರತೆ(2013)ಗಳಂತಹ ಜನಪರ ಕಲ್ಯಾಣ ಕಾಯ್ದೆಗಳು ಯುಪಿಎ1&2 ಅವಧಿಯಲ್ಲಿ ಜಾರಿಗೊಂಡಿದ್ದು ಈ ಸರ್ಕಾರದ ಹಿರಿಮೆಯನ್ನು ತೋರಿಸುತ್ತದೆ. ಆದರೆ ತಮ್ಮ ಎಲ್‌ಪಿಜಿ ಪರವಾದ ನೀತಿಗಳಿಗೆ ವಿರುದ್ಧವಾಗಿದ್ದ ಈ ಕಾಯ್ದೆಗಳನ್ನು ಎನ್‌ಎಸಿ ಇಲ್ಲದೇ ಹೋಗಿದ್ದರೆ ಸಿಂಗ್‌ ಅವರು ಸ್ವಯಂಪೂರ್ವಕವಾಗಿ ಜಾರಿಗೊಳಿಸುತ್ತಿದ್ದರೆ ಎನ್ನುವ ಪ್ರಶ್ನೆಗೆ ಇಲ್ಲ ಎನ್ನುವ ಉತ್ತರ ದೊರಕುತ್ತದೆ. ಯಾಕಂದರೆ ಅವರ ಆರ್ಥಿಕ ಚಿಂತನೆಗಳು ಸಂಪೂರ್ಣವಾಗಿ ಬಂಡವಾಳಶಾಹಿ ಪರವಾದ ಅಭಿವೃದ್ಧಿಯನ್ನು ಧೃಡವಾಗಿ ನಂಬಿಕೊಂಡಿದ್ದರೆ, ಅವರ ಸಚಿವ ಸಂಪುಟದಲ್ಲಿಯೂ ಇಂತಹ ಕಲ್ಯಾಣ ಯೋಜನೆಗಳ ಪರವಾಗಿ ಯೋಚಿಸಬಲ್ಲಂತಹ ಸಚಿವರ ಕೊರತೆಯಿತ್ತು. ಆದರೆ ಪ್ರಜಾಪ್ರಭುತ್ವವಾದಿಯಾಗಿದ್ದ ಸಿಂಗ್‌ ಅವರು ಮೇಲಿನ ಕಲ್ಯಾಣ ಯೋಜನೆಗಳಿಗೆ ಪ್ರಧಾನಿಯಾಗಿ ಸಂಪೂರ್ಣವಾಗಿ ಬೆಂಬಲಿಸಿದರು. ಇಂದಿನ ಮೋದಿ ನೇತೃತ್ವದ ದಮನಕಾರಿ ಆಡಳಿತವನ್ನು ಗಮನಿಸಿದಾಗ ಸಿಂಗ್‌ ಅವರ ಪ್ರಜಾಪ್ರಭುತ್ವವಾದಿ ಗುಣಗಳ ಮಹತ್ವ ಅರಿವಾಗುತ್ತದೆ.

Daali Dhananjaya: ಶ್ರೀಗಳ ಮದುವೆಗೆ ಕರೆದ ಡಾಲಿ ಏನಂದ್ರು..! #siddagangamutt #daalidhananjaya

ಇದೇ ಅವಧಿಯಲ್ಲಿ ಯುಎಪಿಎ (ನಿಯಂತ್ರಣ) ಕಾಯ್ದೆ 2004 & ಯುಎಪಿಎ(ತಿದ್ದುಪಡಿ)2008ಯಂತಹ ಪ್ರಜಾಪ್ರಭುತ್ವ ವಿರೋಧಿ ಕರಾಳ ಕಾನೂನು, ಎನ್‌ಇಎ(ರಾಷ್ಟ್ರೀಯ ತನಿಖಾ ಏಜೆನ್ಸಿ) ಕಾಯ್ದೆಯಂತಹ ದಮನಕಾರಿ ಏಜೆನ್ಸಿಗೆ ಚಾಲನೆ ನೀಡಿದರು, ಖಾಸಗಿತನವನ್ನು ಕಸಿದುಕೊಳ್ಳುವ ಆಧಾರ್‌ನಂತಹ ಯೋಜನೆಯನ್ನು ಜಾರಿಗೊಳಿಸಿದರು. 2008-2012ರ ಅವಧಿಯಲ್ಲಿ ಗೃಹಮಂತ್ರಿಯಾಗಿದ್ದ ಪಿ.ಚಿದಂಬರಂ ಯುಎಪಿಎಯಂತಹ ಕರಾಳ ಕಾನೂನು ಜಾರಿಗೊಳಿಸುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದರೆ ಚತ್ತೀಸ್‌ಘಡ, ಒಡಿಸ್ಸಾದಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆಗೆ ಸಾಲ್ವಾಜುಡಂನಂತಹ ಖಾಸಗಿ ಹತ್ಯೆಕೋರರ ಬರ್ಬರ ಪಡೆಯನ್ನು ಸ್ಥಾಪಿಸಿದರು.

ಇವೆರಡೂ ಯುಪಿಎ ಸರ್ಕಾರದ ಜನ ವಿರೋಧಿ ಆಡಳಿತಕ್ಕೆ ಉದಾಹರಣೆಗಳಾಗಿವೆ. ಸಿಂಗ್‌ ಅವರ ವೈಯುಕ್ತಿಕ ಸೌಮ್ಯತೆ, ಸಜ್ಜನಿಕೆಯನ್ನು ಪರಿಗಣಿಸಿದಾಗ ಇಂತಹ ಪ್ರಜಾಪ್ರಭುತ್ವ ವಿರೋಧಿ ಕಾನೂನುಗಳನ್ನು ಅವರು ಬೆಂಬಲಿಸಿರಲಿಕ್ಕಿಲ್ಲ ಎನ್ನುವುದು ನಿಜವಾದರೂ ಸಹ ಅವರ ಕೈ ಮೀರಿ ಜಾರಿಗೊಂಡಿರುವುದು ನಾಯಕತ್ವದಲ್ಲಿನ ದೌರ್ಬಲ್ಯವನ್ನು ಸೂಚಿಸುತ್ತದೆ. ಯುಪಿಎ 1&2 ಅವಧಿಯಲ್ಲಿನ ಕಲ್ಯಾಣ ಯೋಜನೆಗಳ ಕಾಯ್ದೆಗಳು ಮತ್ತು ಕರಾಳ ಶಾಸನಗಳು ಎರಡಕ್ಕೂ ಸಿಂಗ್‌ ಅವರು ಹೊಣೆಗಾರರಾಗಿರಲಿಲ್ಲ ಎನ್ನುವ ವಾಸ್ತವ ದುರ್ಬಲ ಪ್ರಧಾನಿಯನ್ನು ಸಂಕೇತಿಸುತ್ತದೆಯೇ?
(ಸಶೇಷ)

Tags: best prime minister of indiaBJPCongress Partyisrael prime ministerkrime minister ukmanmohan singh was a weak prime ministerMinisterMinistersprimePrime Ministerprime minister justin trudeauprime minister manmohan singh deathPrime Minister ModiPrime Minister Narendra Modiprime minister trudeau's full address to the euprime ministers questionsrishi sunak prime ministerthe accidental prime ministerಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಲೋಹಿಯಾವಾದಿಗಳು ಮತ್ತು ಬಲಪಂಥೀಯರು

Next Post

ಸಿದ್ದರಾಮಯ್ಯ ಔಟ್​ ಗೋಯಿಂಗ್​ ಸಿಎಂ ಅಂದಿದ್ದು ಯಾಕೆ​..?

Related Posts

ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ
Top Story

ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

by ಪ್ರತಿಧ್ವನಿ
December 13, 2025
0

ಅರ್ಜೆಂಟೀನಾದ ಫುಟ್‌ಬಾಲ್(Football)  ಮಾಂತ್ರಿಕ ಲೆಜೆಂಡ್‌ ಲಿಯೋನೆಲ್ ಮೆಸ್ಸಿ (Lionel Messi) ಭಾರತಕ್ಕೆ ಭೇಟಿ ನೀಡಿದ್ದಾರೆ. ಗೋಟ್ ಇಂಡಿಯಾ ಟೂರ್ 2025 (GOAT India Tour) ಅಡಿಯಲ್ಲಿ ಭಾರತ...

Read moreDetails
BBK 12: ಕ್ಯಾಪ್ಟನ್ಸಿ ಟಾಸ್ಕ್‌ ಗೆದ್ದ ರಾಶಿಕಾ ಜೊತೆ ಸೂರಜ್ ಕಿತ್ತಾಟ

BBK 12: ಕ್ಯಾಪ್ಟನ್ಸಿ ಟಾಸ್ಕ್‌ ಗೆದ್ದ ರಾಶಿಕಾ ಜೊತೆ ಸೂರಜ್ ಕಿತ್ತಾಟ

December 13, 2025
Winter Session 2025: ಕಾರ್ಮಿಕ ಕಿಟ್ ವಿತರಣೆ ನಿಯಮಕ್ಕೆ ಮಾರ್ಪಾಡು- ಸಚಿವ ಸಂತೋಷ್ ಲಾಡ್ ಸ್ಪಷ್ಟನೆ

Winter Session 2025: ಕಾರ್ಮಿಕ ಕಿಟ್ ವಿತರಣೆ ನಿಯಮಕ್ಕೆ ಮಾರ್ಪಾಡು- ಸಚಿವ ಸಂತೋಷ್ ಲಾಡ್ ಸ್ಪಷ್ಟನೆ

December 13, 2025
ಬೆಂಗಳೂರಿನಲ್ಲಿ ತೀವ್ರ ಹದಗೆಟ್ಟ ಗಾಳಿಯ ಗುಣಮಟ್ಟ: ಇದು ಎಚ್ಚರಿಕೆ ಗಂಟೆ

ಬೆಂಗಳೂರಿನಲ್ಲಿ ತೀವ್ರ ಹದಗೆಟ್ಟ ಗಾಳಿಯ ಗುಣಮಟ್ಟ: ಇದು ಎಚ್ಚರಿಕೆ ಗಂಟೆ

December 13, 2025
ಸಾಮಾಜಿಕ ವ್ಯಸನಗಳೂ ಶಾಸನಾತ್ಮಕ ಚಿಕಿತ್ಸೆಯೂ

ಸಾಮಾಜಿಕ ವ್ಯಸನಗಳೂ ಶಾಸನಾತ್ಮಕ ಚಿಕಿತ್ಸೆಯೂ

December 13, 2025
Next Post
ಸಿದ್ದರಾಮಯ್ಯ ಔಟ್​ ಗೋಯಿಂಗ್​ ಸಿಎಂ ಅಂದಿದ್ದು ಯಾಕೆ​..?

ಸಿದ್ದರಾಮಯ್ಯ ಔಟ್​ ಗೋಯಿಂಗ್​ ಸಿಎಂ ಅಂದಿದ್ದು ಯಾಕೆ​..?

Recent News

ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ
Top Story

ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

by ಪ್ರತಿಧ್ವನಿ
December 13, 2025
BBK 12: ಕ್ಯಾಪ್ಟನ್ಸಿ ಟಾಸ್ಕ್‌ ಗೆದ್ದ ರಾಶಿಕಾ ಜೊತೆ ಸೂರಜ್ ಕಿತ್ತಾಟ
Top Story

BBK 12: ಕ್ಯಾಪ್ಟನ್ಸಿ ಟಾಸ್ಕ್‌ ಗೆದ್ದ ರಾಶಿಕಾ ಜೊತೆ ಸೂರಜ್ ಕಿತ್ತಾಟ

by ಪ್ರತಿಧ್ವನಿ
December 13, 2025
Winter Session 2025: ಕಾರ್ಮಿಕ ಕಿಟ್ ವಿತರಣೆ ನಿಯಮಕ್ಕೆ ಮಾರ್ಪಾಡು- ಸಚಿವ ಸಂತೋಷ್ ಲಾಡ್ ಸ್ಪಷ್ಟನೆ
Top Story

Winter Session 2025: ಕಾರ್ಮಿಕ ಕಿಟ್ ವಿತರಣೆ ನಿಯಮಕ್ಕೆ ಮಾರ್ಪಾಡು- ಸಚಿವ ಸಂತೋಷ್ ಲಾಡ್ ಸ್ಪಷ್ಟನೆ

by ಪ್ರತಿಧ್ವನಿ
December 13, 2025
ಬೆಂಗಳೂರಿನಲ್ಲಿ ತೀವ್ರ ಹದಗೆಟ್ಟ ಗಾಳಿಯ ಗುಣಮಟ್ಟ: ಇದು ಎಚ್ಚರಿಕೆ ಗಂಟೆ
Top Story

ಬೆಂಗಳೂರಿನಲ್ಲಿ ತೀವ್ರ ಹದಗೆಟ್ಟ ಗಾಳಿಯ ಗುಣಮಟ್ಟ: ಇದು ಎಚ್ಚರಿಕೆ ಗಂಟೆ

by ಪ್ರತಿಧ್ವನಿ
December 13, 2025
ಸಾಮಾಜಿಕ ವ್ಯಸನಗಳೂ ಶಾಸನಾತ್ಮಕ ಚಿಕಿತ್ಸೆಯೂ
Health Care

ಸಾಮಾಜಿಕ ವ್ಯಸನಗಳೂ ಶಾಸನಾತ್ಮಕ ಚಿಕಿತ್ಸೆಯೂ

by ನಾ ದಿವಾಕರ
December 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

December 13, 2025
BBK 12: ಕ್ಯಾಪ್ಟನ್ಸಿ ಟಾಸ್ಕ್‌ ಗೆದ್ದ ರಾಶಿಕಾ ಜೊತೆ ಸೂರಜ್ ಕಿತ್ತಾಟ

BBK 12: ಕ್ಯಾಪ್ಟನ್ಸಿ ಟಾಸ್ಕ್‌ ಗೆದ್ದ ರಾಶಿಕಾ ಜೊತೆ ಸೂರಜ್ ಕಿತ್ತಾಟ

December 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!