• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಒಂದು ಯೂನಿಟ್‌ ವಿದ್ಯುತ್‌ ಉಳಿತಾಯ ಎರಡು ಯೂನಿಟ್‌ಗಳ ಉತ್ಪಾದನೆಗೆ ಸಮ: ಕ್ರೆಡಲ್‌ ಎಂಡಿ ರುದ್ರಪ್ಪಯ್ಯ

ಪ್ರತಿಧ್ವನಿ by ಪ್ರತಿಧ್ವನಿ
December 24, 2024
in Top Story, ಇತರೆ / Others, ಕರ್ನಾಟಕ
0
Share on WhatsAppShare on FacebookShare on Telegram

ಬೆಂಗಳೂರು: ಒಂದು ಯೂನಿಟ್‌ ವಿದ್ಯುತ್‌ ಉಳಿತಾಯ ಎರಡು ಯೂನಿಟ್‌ಗಳ ಉತ್ಪಾದನೆಗೆ ಸಮ ಎಂದು ಕ್ರೆಡಲ್‌ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ ರುದ್ರಪ್ಪಯ್ಯ ತಿಳಿಸಿದರು.ನಾಗರಬಾವಿಯ ಕ್ರೆಡಲ್‌ ಕೇಂದ್ರ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆಯಲ್ಲಿ ಪಾಲ್ಗೊಂಡು, ಹೆಗ್ಗನಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.

ADVERTISEMENT

“ಕೇಂದ್ರದ ಇಂಧನ ಸಚಿವಾಲಯದ ಅಡಿ ಕಾರ್ಯ ನಿರ್ವಹಿಸುವ ‘ಇಂಧನ ದಕ್ಷತೆಯ ಬ್ಯೂರೋ’ (ಬಿಇಇ), ಇಂಧನ ಸಂರಕ್ಷಣೆ ಮತ್ತು ಸುಸ್ಥಿರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮಹತ್ವವನ್ನು ಸಾರುವ ಉದ್ದೇಶದಿಂದ ಎಲ್ಲ ರಾಜ್ಯಗಳಲ್ಲಿ ಇಂಧನ ಇಲಾಖೆ ವತಿಯಿಂದ ಸಪ್ತಾಹದ ಆಚರಣೆಯನ್ನು ಕಡ್ಡಾಯಗೊಳಿಸಿದೆ.

ಇಂಧನ ಸಂರಕ್ಷಣಾ ಸಪ್ತಾಹದ ಸಂದರ್ಭದಲ್ಲಿ ಇಂಧನ ಬಳಕೆಯ ಪ್ರಮಾಣ ತಗ್ಗಿಸುವುದು, ಇಂಧನದ ದಕ್ಷ ಬಳಕೆಯನ್ನು ಉತ್ತೇಜಿಸುವುದು ಮತ್ತು ರಾಜ್ಯದಲ್ಲಿ ಸುಸ್ಥಿರ ಅಭ್ಯಾಸಗಳನ್ನು ಬೆಳೆಸುವ ಬಗ್ಗೆ ರಾಜ್ಯದ ನೋಡಲ್‌ ಏಜೆನ್ಸಿಯಾದ ಕ್ರೆಡಲ್‌ ಜಾಗೃತಿ ಮೂಡಿಸಲಿದೆ. ನಾವೆಲ್ಲರೂ ತಿಳಿದು, ಪಾಲಿಸಲೇಬೇಕಾದ ಸಂಗತಿ ಎಂದರೆ, ಒಂದು ಯೂನಿಟ್‌ ವಿದ್ಯುತ್‌ ಉಳಿತಾಯ ಎರಡು ಯೂನಿಟ್‌ಗಳ ಉತ್ಪಾದನೆಗೆ ಸಮ,”ಎಂದರು.

children health  : ಮಾನಸಿಕ ಸಮಸ್ಯೆಗಳ ಬಗ್ಗೆ ಡಂಗೂರ ಸಾರಬೇಡಿ #pratidhvani #mentalhealth #helath

“ಇಂಧನ ಸಂರಕ್ಷಣೆ ಹಾಗೂ ಇಂಧನ ದಕ್ಷತೆ ಮನೆಯಿಂದಲೇ ಆರಂಭವಾಗಬೇಕು. ಯಾರು ಇಲ್ಲದ ಸಮಯದಲ್ಲಿ ಕೊಠಡಿಯ ಫ್ಯಾನ್, ದೀಪ ಆರಿಸಬೇಕು. ಬಿಎಸ್‌ಇ 5 ಸ್ಟಾರ್‌ ರೇಟೆಡ್‌ನ ಎಸಿ, ಫ್ರಿಡ್ಜ್‌, ಫ್ಯಾನ್‌ ಹಾಗೂ ಇತರ ವಿದ್ಯುತ್‌ ಉಪಕರಣಗಳನ್ನು ಬಳಸಿ. ಸಾಧ್ಯವಾದಷ್ಟು ಸಮೂಹ ಸಾರಿಗೆ ಬಳಿಸಿ. ಮನೆಯಲ್ಲಿ ಮಕ್ಕಳು ಜಾಗೃತರಾದರೆ, ಮನೆಯ ಎಲ್ಲರಿಗೂ ಅರಿವು ಮೂಡಿಸಿದಂತೆ ಆಗುವುದು. ಇಂಧನ ಸಂರಕ್ಷಣೆ ಬಗ್ಗೆ ಪೋಷಕರಿಗೆ ತಿಳಿಸಬೇಕು, ಎಂದು ಅವರು ಮನವಿ ಮಾಡಿದರು.

“ಇಂಧನ ಸಚಿವ ಕೆ.ಜೆ. ಜಾರ್ಜ್‌ ಅವರ ನೇತೃತ್ವ ಹಾಗೂ ಕ್ರೆಡಲ್‌ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಇಂಧನ ಸಂರಕ್ಷಣಾ ದಿನ ಆಚರಿಸಲಾಗುತ್ತಿದೆ. ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತಾ ಅವರ ಪ್ರೋತ್ಸಾಹದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿದೆ. ಚಿತ್ರ ಬಿಡಿಸುವ ಸ್ಪರ್ಧೆಯ ಅತ್ಯುತ್ತಮ ಚಿತ್ರವನ್ನು ಇಂಧನ ಸಚಿವರಿಗೆ ಕೊಡುಗೆಯಾಗಿ ನೀಡಲಾಗುತ್ತದೆ,”ಎಂದು ಅವರು ಹೇಳಿದರು.

“ಕಾರ್ಯಕ್ರಮದ ಅಂಗವಾಗಿ ಇಂಧನ ಸಂರಕ್ಷಣೆ ಕುರಿತು ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಮಕ್ಕಳಿಗಿರುವ ಆಸಕ್ತಿ ನಿಬ್ಬೆರಗು ಮೂಡಿಸಿತು. ಸರ್ಕಾರಿ ಶಾಲೆಯ ಮಕ್ಕಳಿಗಿರುವ ಶಿಸ್ತು, ಸೃಜನಶೀಲತೆ ಹಾಗೂ ಜಾಣ್ಮೆಗೆ ಸರಿಸಾಟಿ ಇಲ್ಲ. ಅವರ ಆಗಮನದಿಂದ ಇಡೀ ಕ್ರೆಡಲ್‌ ಕಚೇರಿ ಇಂದು ಕಳೆ ಕಟ್ಟಿದೆ.

ಚಿತ್ರ ಸ್ಪರ್ಧೆಯಲ್ಲಿ ತೀರ್ಪುಗಾರರು ಆಯ್ಕೆ ಮಾಡಿದ ಅತ್ಯುತ್ತಮ ಚಿತ್ರಕ್ಕೆ ಮೊದಲ ಬಹುಮಾನವಾಗಿ 5 ಸಾವಿರ, ಎರಡನೇ ಬಹುಮಾನ 3ಸಾವಿರ, ಮೂರನೇ ಬಹುಮಾನವಾಗಿ 2 ಸಾವಿರ ಹಾಗೂ 7 ಸಮಾಧಾನಕರ ಚಿತ್ರಗಳಿಗೆ ತಲಾ 1 ಸಾವಿರ ನೀಡಲಾಯ್ತು. ಇಂಧನ ದಕ್ಷತೆಗಾಗಿ ಎಲ್‌ಇಡಿ ಬಲ್ಬ್‌ ಗಳನ್ನು ಬಳಸಬೇಕು ಎಂಬ ಸಂದೇಶ ಸಾರಲು ವಿದ್ಯಾರ್ಥಿಗಳಿಗೆ ಬಲ್ಬ್‌ ವಿತರಿಸಲಾಗಿದೆ,”ಎಂದರು.

ಕೆಎಸ್‌ಪಿಡಿಸಿಎಲ್‌ ಸಿಇಓ ಅಮರನಾಥ್, ಕ್ರೆಡಲ್‌ನ ಪ್ರಧಾನ ವ್ಯವಸ್ಥಾಪಕರಾದ ಜಗದೀಶ ಬೆಳಗಲಿ, ಉಪ ಪ್ರಧಾನ ವ್ಯವಸ್ಥಾಪಕರಾದ ಶ್ರೀನಾಥ್‌, ಕ್ರೆಡಲ್‌ನ ಹಿರಿಯ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು, ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಡಿಸೆಂಬರ್ 14 ರಿಂದ 20 ರವರೆಗೆ ಇಂಧನ ಸಂರಕ್ಷಣೆ ಸಪ್ತಾಹ ಆಚರಿಸಲಾಗುತ್ತದೆ. ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಕ್ರೆಡಲ್‌ನಲ್ಲಿ ಇಂದು ಸಂರಕ್ಷಣಾ ದಿನಾಚರಣೆ ಆಚರಿಸಲಾಗಿದೆ. ಇಂಧನ ಸಂರಕ್ಷಣೆ ಮತ್ತು ಇಂಧನ ದಕ್ಷತೆಯ ಕುರಿತು ಅರಿವು ಮೂಡಿಸುವ ಅಭಿಯಾನ ಇದಾಗಿದ್ದು, ಶಾಲಾ ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ನಮ್ಮ ಇಲಾಖೆ ವತಿಯಿಂದ ವಾಕಥಾನ್‌ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಸ್ಪರ್ಧೆಗಳು ಸೇರಿದಂತೆ ಹಲವು ಚಟುವಟಿಕೆಗಳನ್ನು ನಡೆಸಲಾಗಿದೆ. ಈ ಮೂಲಕ ಭವಿಷ್ಯದ ಪೀಳಿಗೆಗೆ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಲು ಪ್ರೇರೇಪಿಸಲಾಗುತ್ತದೆ” – ಕೆ.ಜೆ. ಜಾರ್ಜ್‌, ಇಂಧನ ಸಚಿವರು.

Tags: bengaluruCradle MD Rudrappaiah.Deputy General Manager SrinathGeneral Manager Jagdish BelagaliKSPDCLC CEO Amarnathminister for energy Sri KJ GeorgeOne unit of electricitysaving is equal to two units of production:
Previous Post

ನಟ ಅಲ್ಲು ಅರ್ಜುನ್ ಗೆ ಪೋಲಿಸ್ ಗ್ರಿಲ್ ! ಇಂದು ಮತ್ತೆ ವಿಚಾರಣೆ ಎದುರಿಸಿದ ಪುಷ್ಪ- ಮತ್ತೊಂದೆಡೆ ಬೌನ್ಸರ್ ಅಂದರ್ ! 

Next Post

ಸಾಹಿತ್ಯ ಸಮ್ಮೇಳನ – ಯಶಸ್ಸು ಸಾಫಲ್ಯಗಳ ನಡುವೆ

Related Posts

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ
ಕರ್ನಾಟಕ

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

by ಪ್ರತಿಧ್ವನಿ
April 25, 2026
0

ಮಂಡ್ಯ: ಹವಾಮಾನ  ವೈಪರಿತ್ಯಗಳು ಮತ್ತು ಹವಾಮಾನ ಬದಲಾವಣೆಗಳ ಬಗ್ಗೆ ಮುನ್ಸೂಚನೆ ನೀಡುತ್ತಾ ಬಂದಿರುವ ಅರಸೀಕೆರೆ ಶ್ರೀ ಕೋಡಿಮಠ ಮಹಾಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಇದೀಗ...

Read moreDetails
ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

April 24, 2026
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

April 24, 2026
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
Next Post

ಸಾಹಿತ್ಯ ಸಮ್ಮೇಳನ – ಯಶಸ್ಸು ಸಾಫಲ್ಯಗಳ ನಡುವೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada