ಸಚಿವ ಜಮೀರ್ ಅಹ್ಮದ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರ ವಿಚಾರಣೆಗೆ ಹಾಜರಾಗಿದ್ದ ಸಚಿವ ಜಮೀರ್ ಅಹಮದ್ ಖಾನ್, ಖುದ್ದು ವಿಚಾರಣೆಗೆ ಹಾಜರಾಗಿ ಸತತ 2 ಗಂಟೆಗಳ ಕಾಲ ಲೋಕಾಯುಕ್ತ ಪೊಲೀಸರ ವಿಚಾರಣೆ ಮುಗಿಸಿ ಹೊರ ಬಂದಿದ್ದಾರೆ ಸಚಿವ ಜಮೀರ್ ಅಹ್ಮದ್ ಖಾನ್.
ಲೋಕಾಯುಕ್ತ ಕಚೇರಿಗೆ ವಿಚಾರಣೆಗೆ ಹಾಜರಾದ ಸಚಿವ ಜಮೀರ್ ಅಹ್ಮದ್ ಖಾನ್, ಡಿವೈಎಸ್ಪಿ ಸತೀಶ್ ಸಚಿವ ಜಮೀರ್ ವಿಚಾರಣೆ ನಡೆಸಿದ್ದಾರೆ. ಮೂರು ಬಾರಿ ನೋಟಿಸ್‌ಗೆ ಉತ್ತರ ನೀಡದ ಸಚಿವ ಜಮೀರ್ ಖಾನ್‌ಗೆ ಸಮನ್ಸ್ ನೀಡಲಾಗಿತ್ತು.ದಾಖಲೆ ಸಮೇತ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದರಿಂದ ಡಿವೈಎಸ್ಪಿ ಎದುರು ಹಾಜರಾಗಿದ್ದರು.
ಎಸಿಬಿಯಲ್ಲಿ ದಾಖಲಾಗಿದ್ದ ಪ್ರಕರಣ ಇದೀಗ ಲೋಕಾಯುಕ್ತಕ್ಕೆ ವರ್ಗಾವನೆ ಆಗಿದೆ. ಪ್ರಕರಣ ದಾಖಲಾದಾಗ ಜಮೀರ್ ಅಹ್ಮದ್ ಖಾನ್ ಮನೆ ಮೇಲೆ ಎಸಿಬಿ ದಾಳಿ ನಡೆಸಿತ್ತು. ಜಮೀರ್ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಿತ್ತು.ಪ್ರಕರಣ ರದ್ದು ಕೋರಿ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗೆ ಹೋಗಿದ್ದ ಜಮೀರ್ ಅರ್ಜಿ ವಜಾ ಆಗಿತ್ತು.
ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಜಮೀರ್ ಅರ್ಜಿ ವಜಾಗೊಂಡ ಬಳಿಕ ತನಿಖೆಗೆ ಗ್ರೀನ್ ಸಿಗ್ನಲ್ ಪಡೆದ ಲೋಕಾಯುಕ್ತ ಪೊಲೀಸರು, ವಿಚಾರಾಣೆಗೆ ಕರೆದಿದ್ದರು. ಸುಪ್ರೀಂ ಕೋರ್ಟ್ ಆದೇಶದ ಬಳಿಕವೂ ಜಮೀರ್ ವಿಚಾರಣೆಗೆ ಹಾಜರಾಗಿರಲಿಲ್ಲ/. ಮಂಗಳವಾರ ವಿಚಾರಣೆಗೆ ಹಾಜರಾಗಿದ್ದಾರೆ.
2022 ಮೇ 5 ರಂದು ಎಸಿಬಿ ದಾಳಿ ನಡೆಸಿ ತನಿಖೆ ಆರಂಭಿಸಿತ್ತು. ಎಸಿಬಿ ರದ್ದು ಬಳಿಕ ಪ್ರಕರಣ ಲೋಕಾಯುಕ್ತಕ್ಕೆ ವರ್ಗಾವಣೆ ಆಗಿತ್ತು. ಆರೋಪದ ಬಗ್ಗೆ ದಾಖಲೆಗಳನ್ನ ನೀಡಲು ಲೋಕಾಯುಕ್ತ ಅಧಿಕಾರಿಗಳು ನೋಟಿಸ್ ನೀಡಿದ್ದರು. ಕಳೆದ ಒಂದು ವರ್ಷ 3 ತಿಂಗಳಿಂದ 3 ಬಾರಿ ನೋಟಿಸ್ ಜಾರಿ ಮಾಡಿದರೂ ಸಚಿವರಾಗಿರುವ ಜಮೀರ್ ಅಹಮದ್ ಖಾನ್ ಹಾಜರಾಗಿರಲಿಲ್ಲ.
ನೋಟಿಸ್‌ಗೆ ಉತ್ತರ ನೀಡದ ಹಿನ್ನಲೆ ಖುದ್ದು ಹಾಜರಿಗೆ ಸಮನ್ಸ್ ನೀಡಲಾಗಿತ್ತು. ತಮ್ಮ ಆದಾಯ & ಖರ್ಚಿನ ದಾಖಲೆ ನೀಡುವಂತೆ ಲೋಕಾಯುಕ್ತರು ಸೂಚನೆ ನೀಡಿದ್ದರು. ಹೀಗಾಗಿ ಮಂಗಳವಾರ ದಾಖಲೆಗಳ ಸಮೇತ ಲೋಕಾಯುಕ್ತ ಮುಂದೆ ಜಮೀರ್ ಹಾಜರ್ ಖಾನ್ ಹಾಜರಾಗಿದ್ದರು. ಭದ್ರತಾ ರಹಿತವಾಗಿ ಕೋಟ್ಯಾಂತರ ರೂಪಾಯಿ ಸಾಲ ಪಡೆದಿರುವ ಆರೋಪ ಎದುರಾಗಿತ್ತು.
2021ರಲ್ಲಿ ಐಎಂಎ ಅಕ್ರಮ ಹಣ ವರ್ಗಾವಣೆ ಕುರಿತ ತನಿಖಾ ಭಾಗವಾಗಿ ಇಡಿ ದಾಳಿ ಮಾಡಿತ್ತು. ದಾಳಿ ನಡೆಸಿ ಆದಾಯ ಮೀರಿ ಆಸ್ತಿ ಗಳಿಸಿರುವ ಕುರಿತು ಶಂಕೆ ವ್ಯಕ್ತಪಡಿಸಿ ವರದಿ ನೀಡಿತ್ತು. ಆ ವರದಿ ಬೆನ್ನಲ್ಲೇ ಜಮೀರ್ ವಿರುದ್ಧ ಪ್ರತ್ಯೇಕ ಕೇಸ್ ದಾಖಲಿಸಿದ್ದರು ಅಂದಿನ ಎಸಿಬಿ ಅಧಿಕಾರಿಗಳು. ತನಿಖೆ ನಡೆಸಿ ಜಮೀರ್‌ಗೆ ಸಂಬಂಧಿಸಿದ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಿದ್ದರು.
ಎಸಿಬಿ ದಾಖಲಿಸಿರುವ ಪ್ರಕರಣ ರದ್ದು ಕೋರಿ 2022ರಲ್ಲಿ ಜಮೀರ್ ರಿಟ್ ಅರ್ಜಿ ಸಲ್ಲಿಸಿದ್ರು. ಹೈಕೋರ್ಟ್ 2023 ನವೆಂಬರ್‌ನಲ್ಲಿ ಅರ್ಜಿ ರದ್ದುಗೊಳಿಸಿತ್ತು. ಈ ಅರ್ಜಿ ವಿಚಾರಣೆ ವೇಳೆ ಎಸಿಬಿ ಅಧಿಕಾರಿಗಳು ಜಮೀರ್ ಆಸ್ತಿಯ ಮಾಹಿತಿ ಕೋರ್ಟ್‌ಗೆ ನೀಡಿದ್ರು. ದಾಳಿ ವೇಳೆ ಪತ್ತೆಯಾದ ಆಸ್ತಿ ಮೌಲ್ಯಮಾಪನ ಮಾಡಿದಾಗ ಹೆಚ್ಚಿನ ಆಸ್ತಿ ಪತ್ತೆಯಾಗಿದೆ ಎಂದಿತ್ತು. ಶೇಕಡ 2031ರಷ್ಟು ಹೆಚ್ಚಿನ ಆಸ್ತಿ ಹೊಂದಿರುವುದು ಗೊತ್ತಾಗಿದೆ ಎಂದು ಹೈಕೋರ್ಟ್‌ಗೆ ಮಾಹಿತಿ ನೀಡಿತ್ತು.
ಎಸಿಬಿ ದಾಳಿ ಮಾಡಿದಾಗ ಜಮೀರ್ ಮನೆ ಹಾಗೂ ಕಚೇರಿಯಲ್ಲಿ ಚಿನ್ನಾಭರಣ, ಬೆಳ್ಳಿ ಪತ್ತೆಯಾಗಿತ್ತು. ಯುಬಿ ಸಿಟಿ ಫ್ಲ್ಯಾಟ್‌ನಲ್ಲಿ 24 ಜೀವಂತ ಗುಂಡುಗಳು ಪತ್ತೆಯಾಗಿತ್ತು. ಯುಬಿ ಸಿಟಿ ಫ್ಲ್ಯಾಟ್‌ನಲ್ಲಿ 30ಕ್ಕೂ ಅಧಿಕ ಡಾಕ್ಯುಮೆಂಟ್ಸ್ ಸಹ ಪತ್ತೆಯಾಗಿತ್ತು. ಹಲವು ದಾಖಲೆಗಳು ಇರೋದು ಬೇರೆಯವರ ಹೆಸರಲ್ಲಿತ್ತು. ಸೇಲ್ ಡೀಡ್, ಸೇಲ್ ಅಗ್ರಿಮೆಂಟ್ ಡಾಕ್ಯುಮೆಂಟ್ಸ್ ಕೂಡ ಸಿಕ್ಕಿದ್ದವು. ಆನೇಕಲ್, ತುಮಕೂರು, ಹೆಬ್ಬಾಳ ಸೇರಿ ವಿವಿಧೆಡೆ ಎಕರೆಗಟ್ಟಲೆ ಜಮೀನಿನ ದಾಖಲೆ ಪತ್ತೆಯಾಗಿತ್ತು. ಕೋಟ್ಯಂತರ ಮೌಲ್ಯದ ಆಸ್ತಿ ಬೇನಾಮಿ ಹೆಸರಲ್ಲಿರೋ ದಾಖಲೆಗಳು ಪತ್ತೆಯಾಗಿತ್ತು.