ರಾಜ್ಯ ಬಿಜೆಪಿಯಲ್ಲಿ (BJP) ಬಹಿರಂಗವಾಗಿಯೇ ಭಿನ್ನಮತ ಸ್ಫೋಟಗೊಂಡಿದ್ದು, ಬಸನಗೌಡ ಪಾಟೀಲ್ ಯತ್ನಾಳ್ ಟೀಂ (Basanagiwda Patil yatnal) ನೇತೃತ್ವದ ಪ್ರತ್ಯೇಕ ವಕ್ಫ್ ವಿರುದ್ಧದ ಹೋರಾಟಕ್ಕೆ ಕೌಂಟರ್ ಕೊಡಲು ರಾಜ್ಯಾಧ್ಯಕ್ಷ ವಿಜಯೇಂದ್ರ (Vijayendra) ಟೀಂ ವಕ್ಫ್ ಹೋರಾಟಕ್ಕೆ ಮುಂದಾಗಿದೆ.
ಹೀಗಾಗಿ ಇಂದಿನಿಂದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಕ್ಫ್ ಬೋರ್ಡ್ (Waqf board) ನಡೆಯ ವಿರುದ್ಧ ರಾಜ್ಯ ಪ್ರವಾಸದ ಕೈಗೊಳ್ಳುವ ಮೂಲಕ ಪ್ರತಿಭಟನೆ ನಡೆಸಲಿದ್ದಾರೆ. ಇಂದು ಬೆಳಿಗ್ಗೆ 10.00ಕ್ಕೆ ಬೀದರ್‌ಗೆ (Bidar) ಆಗಮಿಸಲಿರೋ ವಿಜಯೇಂದ್ರ, ಗಾಂಧಿಗಂಜ್ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿದ್ದಾರೆ.
ಇಂದು ನಡೆಯುವ ಹೋರಾಟದಲ್ಲಿ ಬಿಜೆಪಿ ನಾಯಕರಾದ, ಮಾಜಿ ಡಿಸಿಎಂ ಸಿ.ಎನ್.ಅಶ್ವತ್‌ನಾರಾಯಣ (Ashwath Narayana), ಬೈರತಿ ಬಸವರಾಜ್ (Bairati Basavaraju) ಸೇರಿ ಜಿಲ್ಲೆಯ ಬಿಜೆಪಿ ಶಾಸಕರು, ಮುಖಂಡರು ಭಾಗಿಯಾಗಲಿದ್ದಾರೆ.