
ವಕ್ಫ್ ವಿಚಾರದಲ್ಲಿ ಮುಸ್ಲಿಂ ನಾಯಕರು ತೆಗೆದುಕೊಳ್ಳತ್ತಿರುವ ನಿರ್ಧಾರಕ್ಕೆ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಎಚ್ಚರಿಕೆ ನೀಡುವ ಕೆಲಸ ಮಾಡಿದ್ದಾರೆ. ಅವರಿಗೆ ಕೇಡುಗಾಲ ಬಂದಿದೆ, ಅದರಲ್ಲಿ ಯಾವುದೇ ಅನುಮಾನವಿಲ್ಲ.ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ಬರೆದು ಹಿಂದೂ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ.ರೈತರಿಗೆ, ದಲಿತ ವರ್ಗಕ್ಕೆ ಅನ್ಯಾಯ ಆಗಿದೆ ಎಂದು ಮಠಾಧೀಶರು ನನಗೆ ಹೇಳುತ್ತಿದ್ದಾರೆ ಎಂದಿದ್ದಾರೆ ಈಶ್ವರಪ್ಪ.

ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಎಲ್ಲೆಲ್ಲಿ ಈ ರೀತಿ ಆಗಿದೆ ಅದನ್ನು ನೋಡಲು ನಾನೂ ಕೂಡ ಪ್ರವಾಸ ಮಾಡುತ್ತಿದ್ದೇನೆ. ಒಂದು ಲಕ್ಷದ ಹತ್ತು ಸಾವಿರ ಎಕರೆ ಜಮೀನು ವಕ್ಫ್ ಆಸ್ತಿಯಾಗಿದೆ ಎಂದು ಜಮೀರ್ ಅಹಮದ್ ಖಾನ್ ಹೇಳುತ್ತಿದ್ದಾರೆ. ಬೇರೆ ಯಾವುದೇ ಕೋರ್ಟ್ಗೂ ಹೋಗಲು ಆಗುವುದಿಲ್ಲ. ಯಾರು ತಪ್ಪು ಮಾಡಿರುತ್ತಾರೋ ಅವರ ಕೋರ್ಟ್ಗೇ ಹೋಗಬೇಕಿದೆ.ಸರ್ಕಾರಿ ಶಾಲೆಯ ಜಮೀನು ಕೂಡ ವಕ್ಫ್ ಆಸ್ತಿ ಎಂದು ಮಾಡಿದ್ದಾರೆ. ಮಠ, ಪುರಾತತ್ವ ಇಲಾಖೆಯ ಆಸ್ತಿಗಳು ಕೂಡ ವಕ್ಫ್ ಆಸ್ತಿ ಎಂದು ಹೇಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮುಖ್ಯಮಂತ್ರಿಗಳು ಯಾರಿಗೂ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಬೇರೆ ಬೇರೆ ಹಗರಣಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ನಿಮಗೆ ಹಿಂದೂ ಧರ್ಮದ ಮೇಲೆ ಅಭಿಮಾನ ಇದ್ದರೆ ಕೂಡಲೇ ಇದನ್ನು ರದ್ದು ಮಾಡಬೇಕು.ದೇಶದ್ರೋಹಿ ಜಮೀರ್ ಅಹಮದ್ ಅವರ ಬಾಲವನ್ನು ಹಿಡಿದುಕೊಂಡು ಹೋಗಬೇಡಿ. ನೀವು ಇದೇ ರೀತಿ ಮುಂದುವರಿದರೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಕ್ಯಾಬಿನೆಟ್ನಲ್ಲಿ ಸಚಿವ ಕೆ.ಎನ್ ರಾಜಣ್ಣ ಒಬ್ಬರೇ ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅವರು ಮಾತ್ರ ನಿಮ್ಮ ಕ್ಯಾಬಿನೆಟ್ನಲ್ಲಿ ಗಂಡುಗಲಿ ಎಂದು ಅನಿಸುತ್ತಿದೆ. ಕುರುಬ ದೇವಸ್ಥಾನವನ್ನು ವಕ್ಪ್ ಎಂದು ಹೇಳುತ್ತಾರೆ. ಇದರಿಂದ ಕುರುಬರಿಗೂ ಸಿಟ್ಟು ಬಂದಿದೆ. ಕೂಡಲೇ, ಇದನ್ನು ನಿಲ್ಲಿಸಿ ಮೊದಲಿದ್ದ ಹಾಗೆ ಇರಬೇಕು. ಇಲ್ಲವೆಂದರೇ ರಕ್ತ ಕ್ರಾಂತಿ ಆಗುತ್ತದೆ. ಹೀಗಾಗಿ ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಗಮನಹರಿಸ ಬೇಕು. ಪ್ರಧಾನ ಮಂತ್ರಿಗಳು ಮುಂದಿನ ಪಾರ್ಲಿಮೆಂಟ್ ಸಭೆಯಲ್ಲಿ ಈ ವಕ್ಫ್ ಬಿಲ್ ಅನ್ನು ತಿದ್ದುಪಡಿ ಮಾಡಬೇಕು. ಕಾಂಗ್ರೆಸ್ನ ಒಬ್ಬ ಗಂಡು ಈ ಬಗ್ಗೆ ಮಾತನಾಡಿದ್ದಕ್ಕೆ ನಾನೂ ರಾಜಣ್ಣಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.




