ಚನ್ನಪಟ್ಟಣ ಉಪ ಚುನಾವಣೆಯ (Channapattana Bi election) ಹಿನ್ನಲೆ ಉಂಟಾದ ಧಿಡೀರ್ ರಾಜಕೀಯ ಬೆಳವಣಿಗೆಯಲ್ಲಿ ಸದ್ಯ ಟಿಕೆಟ್ ಸಿಗದ ಕಾರಣ BJP ತೊರೆದು ಕಾಂಗ್ರೆಸ್ (Congress) ಕಡೆ ಒಲವು ತೋರಿರುವ ಸಿ.ಪಿ.ಯೋಗೇಶ್ವರ್ (Cp Yogeshwar) ಅಕ್ಷರಶಃ ರಾಜಕೀಯ ಸಂಚಲನ ಸೃಷ್ಟಿಸಿದ್ದಾರೆ.

ಈಗ ಬಹುತೇಕ ಸಿಪಿ ಯೋಗೇಶ್ವರ್ ಚನ್ನಪಟ್ಟಣ ಕಣದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸೋದು ಖಾತ್ರಿಯಾಗಿದ್ದು, ಇತ್ತ BJP-JDS ಮೈತ್ರಿ ಅಭ್ಯರ್ಥಿ ಯಾರಾಗುತ್ತಾರೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಆಗ್ಗಾಗ್ಗೆ ಎಲ್ಲಿ ನಿಖಿಲ್ ರ (Nikhil Kumaraswamy) ಹೆಸರು ಕೇಳಿಬರುತ್ತಿದ್ದರೂ, ಈಗಾಗಲೇ 2 ಸಲ ಚುನಾವಣೆಯಲ್ಲಿ ಸೋತಿರುವ ನಿಖಿಲ್ ಕುಮಾರಸ್ವಾಮಿ ಅವರನ್ನು ಯೋಗೇಶ್ವರ್ ವಿರುದ್ಧ ಜೆಡಿಎಸ್ ಕಣಕ್ಕಿಳಿಸುತ್ತಾ ಎಂಬ ಗೊಂದಲವೂ ಇದೆ.
ಈ ಜೊತೆಗೆ ಒಂದು ವೇಳೆ ಜೆಡಿಎಸ್ ನಿಂದ (Jds) ಚುನಾವಣೆಗೆ ನಿಂತು ಈ ಬಾರಿಯೂ ಯೋಗೇಶ್ವರ್ ವಿರುದ್ಧ ಸೋತಲ್ಲಿ, ಅಲ್ಲಿಗೆ 3ನೇ ಸಲ ಸೋತಂತಾಗಲಿದೆ. ಈ ಭೀತಿ ನಿಖಿಲ್ ಮತ್ತು ಜೆಡಿಎಸ್ ಪಾಳಯವನ್ನು ಕಾಡುತ್ತಿದೆ. ಹೀಗಾಗಿ ತಮ್ಮ ಭದ್ರಕೋಟೆ ರಾಮನಗರದಲ್ಲಿ (Ramanagar) ಜೆಡಿಎಸ್ ಹಿಡಿತವನ್ನು ಹಾಗೇ ಕಾಯ್ದುಕೊಳ್ಳಲು ಕುಮಾರಸ್ವಾಮಿ ಯಾವ ರಣತಂತ್ರ ಹೂಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.