ರಾಕಿಂಗ್ ಸ್ಟಾರ್ ಯಶ್ (Rocking star Yash) ತಮ್ಮ ಮುಂದಿನ ಸಿನಿಮಾ ಟಾಕ್ಸಿಕ್ (Toxic movie) ಬಗ್ಗೆ ಒಂದಷ್ಟು ಸೀಕ್ರೆಟ್ ಗಳನ್ನು ರಿವೀಲ್ ಮಾಡಿದ್ದು, ಅಭಿಮಾನಿಗಳಿಗೆ ಒಂದಷ್ಟು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸಿನಿಮಾ ಚಿತ್ರೀಕರಣ ಅದ್ಭುದತವಾಗಿ ಮೂಡಿಬಂದಿದ್ದು, ನಿರೀಕ್ಷೆಗಳನ್ನು ತಲುಪಲಿದ್ದೇವೆ ಎಂದು ಹೇಳಿದ್ದಾರೆ.

ಈ ಮುಂಚೆ KGF-2 ನಂತರ ತಮ್ಮ ಮುಂದಿನ ಸಿನಿಮಾ ಯಾವುದು ಎಂಬುದನ್ನು ಟೈಟಲ್ ಲಾಂಚ್ ಮೂಲಕ ರಿವೀಲ್ ಮಾಡಿದ್ದ ಚಿತ್ರ ತಂಡ, ಅದೇ ವೇಳೆ ಸಿನಿಮಾದ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಿತ್ತು (Toxic movie release date). 2025 ರ ಏಪ್ರಿಲ್ ನಲ್ಲಿ ಸಿನಿಮಾ ರಿಲೀಸ್ ಮಾಡಲಿದ್ದೇವೆ ಎಂದು ಟೈಟಲ್ ರಿವೀಲ್ ನಲ್ಲೇ ಪ್ರೇಕ್ಷಕರಿಗೆ ಗುಡ್ ನ್ಯೂಸ್ ನೀಡಿತ್ತು. ಆದ್ರೆ ಇದೀಗ ಅದು ಸಾಧ್ಯವಿಲ್ಲ ಎಂದಿದ್ದಾರೆ ರಾಕಿಂಗ್ ಸ್ಟಾರ್ ಯಶ್.
ಇತ್ತಿಚೇನ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಯಶ್, ಅಂದುಕೊಂಡಂತೆ ಏಪ್ರಿಲ್ ನಲ್ಲಿ ಸಿನಿಮಾ ತೆರೆಗೆ ಬರಲಿದ್ಯಾ ಎಂಬ ಸಂದರ್ಶಕರ ಪ್ರಶ್ನೆಗೆ, ನಾವು ಶೂಟಿಂಗ್ ಆರಂಭಿಸುವ ಸಂದರ್ಭದಲ್ಲಿ ಅದೇ ಭರವಸೆಯಿತ್ತು. ಹೀಗಾಗಿ ನಾನು ಆ ರೀತಿ ಅನೌನ್ಸ್ ಮಾಡಿದ್ವಿ. ಬಟ್ ಈಗ ಅದಕ್ಕೂ ಮೀರಿದ ಸಮಯವನ್ನ ಚಿತ್ರದ ಕೆಲಸಗಳು ಕೇಳುತ್ತಿವೆ. ಹೀಗಾಗಿ ಏಪ್ರಿಲ್ ನಲ್ಲಿ ಸಿನಿಮಾ ರಿಲೀಸ್ ಸಾಧ್ಯವಿಲ್ಲ ಎಂದಿದ್ದಾರೆ.






