• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಹುಬ್ಬಳ್ಳಿ ಕೇಸ್​ ವಾಪಸ್​​ ಬಗ್ಗೆ ಸಚಿವರ ಸಮರ್ಥನೆ.. ಬಿಜೆಪಿಗೆ ಗುನ್ನಾ..

ಕೃಷ್ಣ ಮಣಿ by ಕೃಷ್ಣ ಮಣಿ
October 15, 2024
in Top Story, ಕರ್ನಾಟಕ, ರಾಜಕೀಯ, ವಿಶೇಷ
0
ಹುಬ್ಬಳ್ಳಿ ಕೇಸ್​ ವಾಪಸ್​​ ಬಗ್ಗೆ ಸಚಿವರ ಸಮರ್ಥನೆ.. ಬಿಜೆಪಿಗೆ ಗುನ್ನಾ..
Share on WhatsAppShare on FacebookShare on Telegram

ಕಾಂಗ್ರೆಸ್​ ಸರ್ಕಾರ ಕೆಲವೊಂದು ವಿಚಾರಗಳನ್ನು ತನ್ನಷ್ಟಕ್ಕೆ ತಾನೇ ಮೈಮೇಲೆ ಎಳೆದುಕೊಳ್ತಿದ್ಯಾ ಅನ್ನೋ ಶಂಕೆ ವ್ಯಕ್ತವಾಗ್ತಿದೆ. ಹುಬ್ಬಳ್ಳಿ ಗಲಭೆ ಕೇಸ್​ನಲ್ಲಿ ಭಾಗಿಯಾದವರ ವಿರುದ್ಧದ ಕೇಸ್​ ವಾಪಸ್​ ಪಡೆಯುವ ಮೂಲಕ ಕಾಂಗ್ರೆಸ್​ ಮುಸ್ಲಿಮರನ್ನು ಓಲೈಸುವ ಕೆಲಸ ಮಾಡ್ತಿದೆ ಅನ್ನೋ ಆರೋಪಕ್ಕೆ ಗುರಿಯಾಗಿದೆ. ಅದರಲ್ಲೂ ಮುಸ್ಲಿಂ ಸಮುದಾಯ ಪೊಲೀಸರ ಮೇಲೆ ಹಲ್ಲೆ ಮಾಡಿ, ವಾಹನಗಳನ್ನು ಜಖಂ ಮಾಡಿದ್ದ ಕೇಸ್​ ವಾಪಸ್​ ಪಡೆದಿರುವ ಬಗ್ಗೆ ಆಕ್ರೋಶ ವ್ಯಕ್ತವಾಗ್ತಿದೆ. ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಕಾಂಗ್ರೆಸ್​ ಸರ್ಕಾರ ಸಮರ್ಥನೆಗೆ ಮುಂದಾಗಿದೆ.

ADVERTISEMENT

ಹುಬ್ಬಳ್ಳಿ ಕೇಸ್​​ ವಾಪಸ್​​ ಪಡೆದ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿದ್ದು, ರಾಜ್ಯದಲ್ಲಿ ಕೇಸ್ ವಾಪಸ್ ಪಡೆಯುವ ಅಧಿಕಾರ ಸೆಕ್ಷನ್ 321ರ ಅನ್ವಯ ಎಲ್ಲಾ ಸರ್ಕಾರಗಳಿಗೂ ಅಧಿಕಾರವಿದೆ. ಸಹಜವಾಗಿ ಸಾಮಾನ್ಯ ಜನರು ಗೃಹ ಇಲಾಖೆಗಳಿಗೆ ಮನವಿಯನ್ನ ಸಲ್ಲಿಸುತ್ತಾರೆ. ಅನೇಕ ಸಂದರ್ಭದಲ್ಲಿ ಉದ್ದೇಶ ಪೂರ್ವಕವಾಗಿ ಕೇಸ್ ಹಾಕಿರುತ್ತಾರೆ. ರೈತರ ಚಳುವಳಿಯಲ್ಲಿ ಅನೇಕ ಮಂದಿ ಭಾಗಿಯಾಗಿರುತ್ತಾರೆ. ಪ್ಯಾಂತ್ಯ, ಭಾಷಾ, ನೀರಿಗಾಗಿ ಹೋರಾಟ ಮಾಡಿದವರೂ ಇದ್ದಾರೆ. ಕೆಲವೊಂದು ಚಳುವಳಿಗಳು ಸಹ ನಡೆದಿವೆ. ಆಗ ಅವರು ಕೇಸ್ ವಾಪಸ್ ತೆಗೆದುಕೊಳ್ಳಿ. ನಾವು ಹೋರಾಟ ಮಾಡಿದ್ದು ರಾಜ್ಯದ ಹಿತಕ್ಕಾಗಿ ಎಂದು ಮನವಿ ಮಾಡ್ತಾರೆ. ಆಗ ಸರ್ಕಾರ ಬಹಳ ಹಿಂದಿನಿಂದಲೂ ಸಹ ಕೇಸ್​​ ವಾಪಸ್​ ಪಡೆಯುವ ಕೆಲಸ ಮಾಡ್ತಿದೆ ಎಂದಿದ್ದಾರೆ.

ಈಗ ನಮ್ಮ ಸರ್ಕಾರ ಸುಮಾರು 43 ಕೇಸ್​ಗಳನ್ನು ವಾಪಸ್​​ ಪಡೆಯುವ ಕೆಲಸ ಮಾಡಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಮಾರು 365 ಕೇಸ್​ಗಳನ್ನ ವಾಪಸ್ ಪಡೆಯಲಾಗಿದೆ. ಅದರಲ್ಲಿ 183 ಕೇಸ್ ಪೊಲೀಸ್ ಗಿರಿ, ಹಿಜಾಬ್ ಪ್ರಕರಣ ಆಗಿದೆ. ಒಟ್ಟು ಎರಡು ಸಾವಿರ ಆರೋಪಿಗಳನ್ನ ಬಿಜೆಪಿ ಅವರು ವಿಥ್ ಡ್ರಾ ಮಾಡಿಕೊಂಡಿದ್ದಾರೆ. 2020 ರಲ್ಲಿ 67 ಪ್ರಕರಣಗಳನ್ನ ವಿಥ್ ಡ್ರಾ ಮಾಡ್ತಾರೆ. ಅದನ್ನು ಜೆ.ಸಿ ಮಾಧುಸ್ವಾಮಿ ಡಿಫೆಂಡ್ ಮಾಡಿಕೊಳ್ತಾರೆ. ಸಿ.ಟಿ.ರವಿ, ಆನಂದ್ ಸಿಂಗ್, ರಮೇಶ್ ಜಾರಕಿಹೊಳಿ, ಪ್ರತಾಪ್ ಸಿಂಹ, ಸುಮಲತಾ ಅಂಬರೀಶ್, ಹಾಲಪ್ಪ ಆಚಾರ್​ ಕೇಸ್​ಗಳನ್ನೂ ವಿಥ್ ಡ್ರಾ ಮಾಡಿಕೊಂಡಿದ್ದಾರೆ. ನಮ್ಮ ರಾಜ್ಯದಲ್ಲಿರುವ ಬಲಪಂಥಿಯರಾದ ಶ್ರೀರಾಮಸೇನೆ, ಭಜರಂಗದಳ ಹಾಗೂ ಬಿಜೆಪಿಯ ಬಹುತೇಕ ಕಾರ್ಯಕರ್ತರ ಕೇಸ್​ ವಾಪಸ್​ ಪಡೆದಿದ್ದಾರೆ. 2018 ರಿಂದ 2020 ರವರೆಗೆ 128 ಕೇಸ್​​ಗಳನ್ನ ಬಿಜೆಪಿ ವಿಥ್ ಡ್ರಾ ಮಾಡಿದ್ದಾರೆ ಎಂದಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲೂ ಕೇಸ್ ವಾಪಸ್ ಪಡೆಯಲಾಗಿದೆ ಎಂದಿರುವ ಸಚಿವರು, ಪೊಲೀಸರ ಮೇಲೆ ದೊಂಬಿ ಮಾಡಿದ ಕೇಸ್ ವಾಪಸ್, ಎಸ್​ಡಿಪಿಐ, ಪಿಎಫ್​ಐ ಕೇಸ್ ವಾಪಸ್ ಪಡೆದಿದ್ರು. ಬಿಜೆಪಿಯವರು ಹುಡುಕಿ ಹುಡುಕಿ ಕೇಸ್ ಹಾಕ್ತಿದ್ರು. ಬಲ್ಕಿಷ್ ಬಾನು ಕೇಸ್ ವಾಪಸ್ ಪಡೆದುಕೊಂಡ್ರು. ಅತ್ಯಾಚಾರ ಮಾಡಿದವರ ಕೇಸ್ ವಾಪಸ್ ಪಡೆದ್ರು. ಅಂತವರಿಗೆ ಬಿಜೆಪಿ ಸನ್ಮಾನ ಮಾಡ್ತು. ನಮ್ಮ ಬಗ್ಗೆ ಮಾತನಾಡೋಕೆ ಬಿಜೆಪಿ ನಾಯಕರಿಗೆ ನೈತಿಕತೆ ಇದ್ಯಾ? ಅವರಿಗೆ ದೇಶದ ಬಗ್ಗೆ ಭಕ್ತಿ ಇಲ್ಲ. ಸುಮ್ಮನೆ ನಮ್ಮ ಮೇಲೆ ಆರೋಪ ಮಾಡ್ತಾರೆ. ಯಾಕೆ ಎಸ್​ಡಿಪಿಐ, ಪಿಎಫ್ಐ ಕೇಸ್ ವಾಪಸ್ ಪಡೆದ್ರು..? ಯಾವ ಕಾರಣಕ್ಕೆ ಬಿಜೆಪಿ ವಾಪಸ್ ಪಡೆಯಿತು ಎಂದು ಪ್ರಶ್ನಿಸಿದ್ದಾರೆ.

Tags: BJPbjp attacks congressbjp congress indian militarybjp newsbjp programbjp vs congressbjp vs congress - indian defencebjp vs congress clashbjp vs congress in haryana livebjp vs congress over hijab ban in karnatakabjp vs inccongresscongress bjp in indian defencecongress in haryanaCongress NewsCongress Partycongress vs bjpharyana bjp resultharyana congress resultmallikarjun kharge on bjpyediyurappa vs congressಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಜಂಟಿ ಮಾಧ್ಯಮಗೋಷ್ಠಿ, ಕೆಪಿಸಿಸಿ ಕಚೇರಿ.

Next Post

ವಿಜಯ್ ಟಾಟಾ ಬೆದರಿಕೆ ಪ್ರಕರಣ – ಕುಮಾರಸ್ವಾಮಿ ವಿರುದ್ಧದ FIR ರದ್ದುಕೋರಿ ಕೋರ್ಟ್ ಗೆ ಅರ್ಜಿ ! 

Related Posts

ಕೃಷಿಯನ್ನು ಲಾಭದಾಯಕವಾಗಿಸಲು ವೈಜ್ಞಾನಿಕ ನೆರವನ್ನು ನೀಡಲು ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ..
Top Story

ಕೃಷಿಯನ್ನು ಲಾಭದಾಯಕವಾಗಿಸಲು ವೈಜ್ಞಾನಿಕ ನೆರವನ್ನು ನೀಡಲು ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ..

by ಪ್ರತಿಧ್ವನಿ
May 2, 2026
0

ಬೆಂಗಳೂರು : ಕೃಷಿಯನ್ನು ಲಾಭದಾಯಕವಾಗಿಸಲು ವೈಜ್ಞಾನಿಕ ನೆರವನ್ನು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಇಂದು ನಗರದ ಓಕಳೀಪುರಂನಲ್ಲಿ ರೇಷ್ಮೆ ಮತ್ತು ಖನಿಜ ಭವನ...

Read moreDetails
ಜೀವಾವಧಿ ಶಿಕ್ಷೆ ಹಿನ್ನೆಲೆ ವಿನಯ್ ಕುಲಕರ್ಣಿ ಶಾಸಕ ಸ್ಥಾನ ಅಮಾನ್ಯ – ಧಾರವಾಡ ಕ್ಷೇತ್ರ ಖಾಲಿ

ಜೀವಾವಧಿ ಶಿಕ್ಷೆ ಹಿನ್ನೆಲೆ ವಿನಯ್ ಕುಲಕರ್ಣಿ ಶಾಸಕ ಸ್ಥಾನ ಅಮಾನ್ಯ – ಧಾರವಾಡ ಕ್ಷೇತ್ರ ಖಾಲಿ

May 2, 2026
ಕೊಹಿನೂರ್ ವಿಚಾರದಿಂದ ವಿವಾದ: ನ್ಯೂಯಾರ್ಕ್ ಮೇಯರ್ ಮಮ್ದಾನಿ ಹೇಳಿಕೆಗೆ ಟೀಕೆಗಳ ಮಳೆ

ಕೊಹಿನೂರ್ ವಿಚಾರದಿಂದ ವಿವಾದ: ನ್ಯೂಯಾರ್ಕ್ ಮೇಯರ್ ಮಮ್ದಾನಿ ಹೇಳಿಕೆಗೆ ಟೀಕೆಗಳ ಮಳೆ

May 2, 2026
ಮಿತಿಮೀರಿದ ವ್ಹೀಲಿಂಗ್‌ ಪುಂಡರ ಅಟ್ಟಹಾಸ : ಬುದ್ಧಿವಾದ ಹೇಳಿದ ದಂಪತಿ ಮೇಲೆ ಮನಸೋ ಇಚ್ಚೆ ಹಲ್ಲೆ..

ಮಿತಿಮೀರಿದ ವ್ಹೀಲಿಂಗ್‌ ಪುಂಡರ ಅಟ್ಟಹಾಸ : ಬುದ್ಧಿವಾದ ಹೇಳಿದ ದಂಪತಿ ಮೇಲೆ ಮನಸೋ ಇಚ್ಚೆ ಹಲ್ಲೆ..

May 2, 2026
ನಗರ ಸಂಚಾರಕ್ಕೆ ತಾತ್ಕಾಲಿಕ ತಡೆ: ಪ್ರಮುಖ ಮೇಲ್ಸೇತುವೆ ಬಂದ್, ವಾಹನ ಸವಾರರಿಗೆ ಎಚ್ಚರಿಕೆ

ನಗರ ಸಂಚಾರಕ್ಕೆ ತಾತ್ಕಾಲಿಕ ತಡೆ: ಪ್ರಮುಖ ಮೇಲ್ಸೇತುವೆ ಬಂದ್, ವಾಹನ ಸವಾರರಿಗೆ ಎಚ್ಚರಿಕೆ

May 2, 2026
Next Post
ವಿಜಯ್ ಟಾಟಾ ಬೆದರಿಕೆ ಪ್ರಕರಣ – ಕುಮಾರಸ್ವಾಮಿ ವಿರುದ್ಧದ FIR ರದ್ದುಕೋರಿ ಕೋರ್ಟ್ ಗೆ ಅರ್ಜಿ ! 

ವಿಜಯ್ ಟಾಟಾ ಬೆದರಿಕೆ ಪ್ರಕರಣ - ಕುಮಾರಸ್ವಾಮಿ ವಿರುದ್ಧದ FIR ರದ್ದುಕೋರಿ ಕೋರ್ಟ್ ಗೆ ಅರ್ಜಿ ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada