ಜಮ್ಮು-ಕಾಶ್ಮೀರ (Jammu & Kashmir) ವಿಧಾನಸಭೆ ಫಲಿತಾಂಶದ ಸಂಪೂರ್ಣ ಚಿತ್ರಣ ಇನ್ನೇನು ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದೆ. ಬರೋಬ್ಬರಿ 10 ವರ್ಷಗಳ ನಂತರ ಜಮ್ಮು ಕಾಶ್ಮೀರದಲ್ಲಿ ಚುನಾವನೆ ನಡೆಯುತ್ತಿದ್ದು, ಮತದಾರ ಯಾರ ಪರವಾಗಿದ್ದಾನೆ ಎಂಬುದು ಕೆಲವೇ ಕ್ಷಣಗಳಲ್ಲಿ ತಿಳಿಯಲಿದೆ.
ಸದ್ಯದ ಕೌಂಟಿಂಗ್ ಪ್ರಕಾರ ಕಾಂಗ್ರೆಸ್ ಮತ್ತು ಎನ್ಸಿ ಮೈತ್ರಿ (congress – NC) ಮುನ್ನಡೆ ಮುನ್ನಡೆ ಸಾಧಿಸಿದ್ದು, ಬಹುಮತ ಪಡೆಯುವ ವಿಶ್ವಾಸದಲ್ಲಿದೆ. ಇತ್ತ ಬಿಜೆಪಿಗೆ (Bjp) ಜಮ್ಮುವಿನ ಭಾಗದಲ್ಲಿ ಮುನ್ನಡೆಯಿದ್ದು, ಕಾಶ್ಮೀರದಲ್ಲಿ ಹಿನ್ನಡೆ ಅನುಭವಿಸಿದೆ. ಹೀಗಾಗಿ ಕಾಂಗ್ರೆಸ್ ಹಾಗೂ ಎನ್ಸಿ ಮೈತ್ರಿ ಅಧಿಕಾರ ಹಿಡಿಯುವುದು ದಟ್ಟವಾಗಿದೆ.
ಇನ್ನುಳಿದಂತೆ ಮೆಹಬೂಬಾ ಮುಫಿ ಪುತ್ರಿ ಇಲ್ತಿಜಾ ಮುಪ್ಪಿ, ಸಲೀಂ ಗಿಲಾನಿ, ಸಂಸತ್ ದಾಳಿಯ ಅಪರಾಧಿ ಅಪ್ಟಲ್ ಗುರು ಸಹೋದರ ಎಜಾಜ್, ಒಮರ್ ಅಬ್ದುಲ್ಲಾ ಸೇರಿ ಹಲವರ ಭವಿಷ್ಯ ನಿರ್ಧಾರವಾಗಲಿದೆ. 90 ಕ್ಷೇತ್ರಗಳ ಪೈಕಿ ಬಹುಮತ ತಲುಪಲು ಎರಡೂ ಪಕ್ಷಗಳು ತಿಣುಕಾಟ ನಡೆಸಿವೆ. ಕಾಂಗ್ರೆಸ್ ಮೈತ್ರಿಕೂಟ 45 ಸ್ಥಾನ ಗಳಿಸಿದ್ದು, ಬಿಜೆಪಿ 31 ಸ್ಥಾನದಲ್ಲಿ ಮುನ್ನಡೆ ಸಾಧಿಸಿದ್ದು ಠಕ್ಕರ್ ಕೊಡ್ತಿದೆ.