ದಾವಣಗೆರೆ ಗಣೇಶ ಗಲಾಟೆ ಪ್ರಕರಣದಲ್ಲಿ 20ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರನ್ನ ಬಂಧಿಸಲಾಗಿದೆ.. ಬಂಧನಕ್ಕೊಳಗಾದ ಹಿಂದೂ ಕಾರ್ಯಕರ್ತರ ಮನೆಗಳಿಗೆ ಬಿಜೆಪಿ ನಾಯಕರು ಭೇಟಿ ನೀಡಿ, ಜೈಲಿನಿಂದ ಬಿಡಿಸಿಕೊಂಡು ಬರುವ ಭರವಸೆ ನೀಡಿದ್ದಾರೆ.. ಮಟ್ಟಿಕಲ್ಲು ಬಡಾವಣೆಗೆ ಬಸನಗೌಡ ಪಾಟೀಲ್ ಯತ್ನಾಳ್, ಪ್ರತಾಪ್ ಸಿಂಹ ಭೇಟಿ ನೀಡಿ ಪೋಷಕರಿಗೆ ಧೈರ್ಯ ತುಂಬಿದ್ದಾರೆ.
ಅಮಾಯಕರನ್ನು ಬಂಧಿಸಿದ್ದಾರೆ ಅಂತಾ ಪೋಷಕರು ಕಣ್ಣೀರಾಕಿದ್ದಾರೆ.. ಗಂಡ ಮಕ್ಕಳಿಲ್ಲದೆ ಮಹಿಳೆಯರು ಏನು ಮಾಡಬೇಕು ಎಂದು ಬಿಜೆಪಿ ನಾಯಕರ ಬಳಿ ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ. ಪೋಷಕರ ಮಾತನ್ನು ಆಲಿಸಿದ ಬಳಿಕ ಮಾಜಿ ಸಂಸದ ಪ್ರತಾಪ್ ಸಿಂಹ, ಬಂಧನ ಆಗಿರುವ ಯುವಕರನ್ನ ಬಿಡಿಸುವ ಕೆಲಸ ಮಾಡುತ್ತೇವೆ. ಗಣೇಶ ಹಬ್ಬವನ್ನ ಹತ್ತಿಕ್ಕುವ ಕೆಲಸ ಆಗುತ್ತಿದೆ. ಹಿಂದೂಗಳು ಎಲ್ಲರೂ ಒಗ್ಗಟ್ಟಾಗಿರೋಣ ಎಂದಿದ್ದಾರೆ.
ಈ ಸರ್ಕಾರ ಇರುವ ತನಕ ಈ ರೀತಿಯ ಘಟನೆಗಳು ನಡೆಯುತ್ತಿರುತ್ತವೆ. ಎಲ್ಲರಿಗೂ ಬೇಲ್ ಕೊಡಿಸಿ ಕರೆದುಕೊಂಡು ಬರುವ ಜವಾಬ್ದಾರಿ ನಮ್ಮದು. ನಾವು ನಿಮ್ಮ ಮಕ್ಕಳನ್ನ ಕರೆದುಕೊಂಡು ಬರುತ್ತೇವೆ. ನಾವು ಎಲ್ಲರೂ ನಿಮ್ಮ ಜೊತೆಗೆ ಇರ್ತೀವಿ. ಕಾನೂನು ವೆಚ್ಚ ನಾವು ನೊಡಿಕೊಳ್ತೀವಿ. ಅಕ್ಟೋಬರ್ 5 ರಂದು ನಡೆಯುವ ಶೋಭ ಯಾತ್ರೆ ವೇಳೆಗೆ ಎಲ್ಲರನ್ನು ಹೊರ ತರುವ ಕೆಲಸ ಮಾಡ್ತಿವಿ ಎಂದಿದ್ದಾರೆ.