
ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಒಂದೆಡೆ ಬಿಜೆಪಿ ಹಾಗೂ ಜೆಡಿಎಸ್ ಪಟ್ಟು ಹಿಡಿದು ಹೋರಾಟ ಮಾಡುತ್ತಿದ್ದರೆ, ಇನ್ನೊಂದೆಡೆ ಕಾಂಗ್ರೆಸ್ ನ ಹಿರಿಯ ನಾಯಕರೊಬ್ಬರು (senior Congress leader)ಸಿಎಂ ರಾಜೀನಾಮೆ ನೀಡಬೇಕು (Should resign)ಎಂದು ಒತ್ತಾಯಿಸಿದ್ದಾರೆ..

ಸಿಎಂ ಸ್ಥಾನಕ್ಕೆ ಕಂಟಕ ಬಂದಾಗಿನಿಂದ ಹಲವರು ನಾಯಕರ ಸಿಎಂ ಖರ್ಚಿಗೆ ನಾ ಮುಂದು – ತಾ ಮುಂದು ಎಂದು ಒಳಗಿಂದೊಳಗೆ ಸಂಚು ರೂಪಿಸಿತ್ತಿದ್ದರೆ..ಇತ್ತ ಸಿಎಂ ಸಿದ್ದರಾಮಯ್ಯ (CM Siddaramaiah)ರಾಜೀನಾಮೆಗೆ (resign)ಸ್ವಪಕ್ಷದ ಹಿರಿಯ ನಾಯಕ ಕೆ.ಬಿ ಕೋಳಿವಾಡ( KB Koliwada)ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಪಕ್ಷದ ಹಿತದೃಷ್ಟಿಯಿಂದ ಸಿದ್ದರಾಮಯ್ಯ ರಾಜೀನಾಮೆ ನೀಡಲಿ. ತನಿಖೆ ಬಳಿಕ ನಿಷ್ಕಳಂಕವಾಗಿ ಹೊರಬಂದು ಬಳಿಕ ಮತ್ತೆ ಸಿಎಂ ಆಗಲಿ. ಎಷ್ಟೇ ಕಳಂಕ ರಹಿತವಾದರೂ ಪಕ್ಷದ ದೃಷ್ಠಿಯಿಂದ ರಾಜೀನಾಮೆ ನೀಡಲಿ ಎಂದು ಹೇಳಿದರು.
ಸಿಎಂ ಸಿದ್ಧರಾಮಯ್ಯ ಜೊತೆ ಬರೋಬ್ಬರಿ 136 ಶಾಸಕರಿದ್ದಾರೆ..ಬೇರೆ ಬೇರೆ ರಾಜ್ಯಗಳಲ್ಲಿ ಚುನಾವಣೆಗಳು ನಡೆಯುತ್ತಿದೆ. ಅಲ್ಲಿ ಬಿಜೆಪಿಯವರು ಇದೇ ವಿಚಾರವನ್ನು ಇಟ್ಟುಕೊಂಡು ಕಾಂಗ್ರೆಸ್ ಗೆ ಮುಜುಗರವನ್ನುಂಟು ಮಾಡುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಪಕ್ಷ ರಾಜೀನಾಮೆ ನೀಡಲಿ ಎಂದು ಕೋಳಿವಾಡ ಆಗ್ರಹಿಸಿದರು.
ವಿಪಕ್ಷಗಳ ಕುತಂತ್ರದಿಂದ ಸಿಎಂ ವಿರುದ್ದ ಸುಳ್ಳು ಆರೋಪ ಮಾಡಲಾಗಿದೆ. ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತ ನಡೆಸುತ್ತಿದ್ದಾರೆ. ಸಿಎಂ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಮಾಡಲು ಬಿಜೆಪಿ ಕುತಂತ್ರ ಮಾಡುತ್ತಿದೆ. ಹೀಗಾಗಿ ಸಿದ್ದರಾಮಯ್ಯ ತನಿಖೆ ಎದುರಿಸಿ ನಿಷ್ಕಳಂಕವಾಗಿ ಬರಲಿ. ನಂತರ ಸಿಎಂ ಆಗಿ ಮುನ್ನಡೆಯಲಿ ಎಂದು ಹೇಳಿದರು.




