ಕಿವಿ ಚುಚ್ಚಿಸುವುದು ಅಥವಾ ಮೂಗು ಚುಚ್ಚಿಸುವುದು ಸರ್ವೇಸಾಮಾನ್ಯ. ಅದ್ರಲ್ಲೂ ಚಿಕ್ಕ ಮಕ್ಕಳಿರುವಾಗನೇ ಕಿವಿಯನ್ನು ಚುಚ್ಚಿಸುತ್ತಾರೆ. ಈ ಕಿವಿ ಚುಚ್ಚಿಸುವಾಗ ಆಗುವಂಥ ನೋವು ಯಮಯಾತನೆ. ಹಿಂದಲಾ ನಿಂಬೆ ಮುಳ್ಳುಗಳು ಅಥವಾ ಇತರೆ ಮುಳ್ಳುಗಳಿಂದ ಕಿವಿಯನ್ನು ಚುಚ್ಚಿಸುತ್ತಿದ್ದರು ಅದರ ನೋವು ಹೆಚ್ಚು ಇರುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ನೋವನ್ನ ಕಡಿಮೆ ಮಾಡಲು ಗನ್ ಬಳಸಿ ಕೆಳ ಸೆಕೆಂಡ್ಗಳಲ್ಲಿ ಕೆಲಸ ಮುಗಿಸುತ್ತಾರೆ..ಆದ್ರೂ ಕೂಡ ನೋವು ಇರುತ್ತದೆ..ಈ ಕಿವಿ ಚುಚ್ಚುವ ಮುನ್ನ ಹಾಗೂ ನಂತರ ಈ ರೀತಿ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ.
- ಕಿವಿ ಚುಚ್ಚಿಸುವ ಕೆಲ ನಿಮಿಷಗಳ ಮುನ್ನ ಒಂದು ಐಸ್ ಕ್ಯೂಬನ್ನು ಕಿವಿ ಚುಚ್ಚಿಸುವ ಜಾಗದಲ್ಲಿ ಕೆಲ ನಿಮಿಷಗಳ ಇಟ್ಟು ತೆಗೆಯ ಬೇಕು ಹೀಗೆ ೫-೬ ಬಾರಿ ಮಾಡಿ ನಂತರ ಕಿವಿ ಚುಚ್ಚಿಸುವುದರಿಂದ ನೋವು ಕಡಿಮೆ ಇರುತ್ತದೆ.
- ಮೆಡಿಕಲ್ ನಲ್ಲಿ ನಿಮಗೆ ನಂಬ್ ಕ್ರೀಮ್ ಸಿಗುತ್ತದೆ ಈ ಕ್ರೀಮ್ ಹಚ್ಚುವುದರಿಂದ ಚುಚ್ಚುಸುವ ಜಾಗ ಕೆಲ ನಿಮಿಷದವರೆಗೂ ಮರಗಟ್ಟುತ್ತದೆ. ಇದರಿಂದ ಚುಚ್ಚುವ ನೋವು ಗೊತ್ತಾಗುವುದಿಲ್ಲ, ಆದರೆ ಮರಗಟ್ಟಿದ್ದು ಕಡಿಮೆಯಾದ ಮೇಲೆ ನಿಮಗೆ ನೋವು ಕಾಣಿಸಿಕೊಳ್ಳುತ್ತದೆ.
- ಕಿವಿ ಚುಚ್ಚಿಸುವಾಗ ಭಯಪಡದೆ ಡೀಪ್ ಬ್ರಿಥಿಂಗ್ ಮಾಡಬೇಕು ಇದರಿಂದ ನೋವು ಗೊತ್ತಾಗುವುದಿಲ್ಲ ಇದೊಂದು ಸಿಂಪಲ್ ಹ್ಯಾಕ್.
ಕಿವಿ ಚುಚ್ಚಿಸಿದ ನಂತರ ನೋವನ್ನು ಕಡಿಮೆ ಮಾಡಲು ಹೀಗೆ ಮಾಡಿ:
- ಒಂದು ಬೌಲ್ ನಲ್ಲಿ ಐಸ್ ಕ್ಯೂಬ್ ಜೊತೆಗೆ ನೀರನ್ನ ಹಾಕಿ ಹಾಗೆ ಇಡಿ. ನಂತರ ಒಂದು ಕಾಟನ್ ಬಟ್ಟೆಯನ್ನ ಆ ನೀರಿನೊಳಗೆ ಎರಡು ನಿಮಿಷಗಳ ಕಾಲ ನೆನೆಯಲು ಬಿಡಿ .ನಂತರ ಆ ಬಟ್ಟೆಯನ್ನು ಚೆನ್ನಾಗಿ ಹಿಂಡಿ ಕಿವಿಯ ಚುಚ್ಚಿಸಿದ ಜಾಗದಲ್ಲಿ ನಿಧಾನವಾಗಿ ಇಡಿ. ಹೀಗೆ ಎರಡರಿಂದ ಮೂರು ಬಾರಿ ದಿನಕ್ಕೆ ಮಾಡುವುದರಿಂದ ನೋವು ಕಡಿಮೆ ಯಾಗುತ್ತದೆ.
- ತಣ್ಣೀರಿನ ಬದಲು ನೀವು ಬಿಸಿ ನೀರನ್ನು ಕೂಡ ಬಳಸಬಹುದು. ಇದರಿಂದ ನೋವು ಬೇಗನೆ ಕಡಿಮೆಯಾಗುತ್ತದೆ.
- ಒಂದು ಬಟ್ಟೆಯಲ್ಲಿ ಸ್ವಲ್ಪ ಕಲ್ಲುಪ್ಪನ್ನ ಹಾಕಿ ಬಿಸಿ ಮಾಡಿ ನಂತರ ಅದರ ಶಾಖವನ್ನು ಕಿವಿ ಚುಚ್ಚಿಸಿದ ಜಾಗಕ್ಕೆ ಕೊಡುವುದರಿಂದ ನೋವನ್ನ ಕಡಿಮೆ ಮಾಡುತ್ತದೆ.
- ಕಿವಿ ಅಥವಾ ಮೂಗು ಚುಚ್ಚಿದ ಜಾಗ ಬೇಗನೆ ಇನ್ಫೆಕ್ಷನ್ ಆಗುತ್ತದೆ. ಹಾಗಾಗಿ ಟಿ ಟ್ರೀ ಆಯಿಲ್ ಅನ್ನು ಹಚ್ಚುವುದರಿಂದ ಇದರಲ್ಲಿ ಆಂಟಿ ಇನ್ಫೆಕ್ಷನ್ ಹಾಗೂ ಆಂಟಿಬ್ಯಾಕ್ಟೀರಿಯಲ್ ಅಂಶ ಹೆಚ್ಚಿರುತ್ತದೆ ಇದು ಇನ್ಫೆಕ್ಷನ್ ಆಗುವುದನ್ನ ತಡೆಯುತ್ತದೆ.
- ಆಗಾಗ ಕಿವಿ ಚುಚ್ಚಿಸಿದ ಜಾಗ ಅಥವಾ ಮೂಗು ಚುಚ್ಚಿಸಿದ ಜಾಗವನ್ನು ಮುಟ್ಟಬಾರದು ಇದರಿಂದ ನೋವು ಹಾಗೂ ಇನ್ಫೆಕ್ಷನ್ ಜಾಸ್ತಿ ಆಗುತ್ತದೆ ಯಾವುದೇ ಕಾರಣಕ್ಕೂ ಉಗುರನ್ನು ತಾಕಿಸಬಾರದು.
- ಚುಚ್ಚಿಸಿದ ಜಾಗ ಒಣಗಿ ಕ್ಲಿಯರ್ ಆಗುವ ವರೆಗೂ ಯಾವುದೇ ಕಾರಣಕ್ಕೂ ಹಾಕಿರುವ ಓಲೆ ಅಥವಾ ಮೂಗುತ್ತಿಯನ್ನು ಪದೇಪದೇ ಬದಲಾಯಿಸಬಾರದು ಇದರಿಂದ ನೋವು ಹಾಗೂ ಇನ್ಫೆಕ್ಷನ್ ಹೆಚ್ಚಾಗುತ್ತದೆ.