ಜಮ್ಮು ಕಾಶ್ಮೀರ:ಮಂಗಳವಾರ ಮುಂಜಾನೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ 4.9 ಮತ್ತು 4.8 ತೀವ್ರತೆಯ ಎರಡು ಭೂಕಂಪಗಳು ಸಂಭವಿಸಿವೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (ಎನ್ಸಿಎಸ್) ತಿಳಿಸಿದೆ. ಯಾವುದೇ ಪ್ರಾಣಾಪಾಯದ ಬಗ್ಗೆ ವರದಿಯಾಗಿಲ್ಲ.ಬೆಳಿಗ್ಗೆ 6:45ರ ವೇಳೆಗೆ ರಿಚರ್ ಮಾಪಕದಲ್ಲಿ 4.9 ತೀವ್ರತೆಯ ಮೊದಲ ಭೂಕಂಪವು ದಾಖಲಾಗಿದೆ.ಎರಡನೇ ಬಾರಿಗೆ ಹತ್ತು ನಿಮಿಷದ ಒಳಗಾಗಿ 4.8 ತೀವ್ರತೆಯಲ್ಲಿ ಭೂಕಂಪವಾಗಿದೆ. ಸುಮಾರು 10 ಕಿಮೀ ಆಳದಲ್ಲಿ ಸಂಭವಿಸಿದೆ ಎಂದು ಭೂಕಂಪನಶಾಸ್ತ್ರದ ರಾಷ್ಟ್ರೀಯ ಕೇಂದ್ರ (ಎನ್ಸಿಎಸ್) ತಿಳಿಸಿದೆ.
EQ of M: 4.8, On: 20/08/2024 06:52:29 IST, Lat: 34.20 N, Long: 74.31 E, Depth: 10 Km, Location: Baramulla, Jammu & Kashmir.
— National Center for Seismology (@NCS_Earthquake) August 20, 2024
For more information Download the BhooKamp App https://t.co/5gCOtjdtw0 @DrJitendraSingh @OfficeOfDrJS @Ravi_MoES @Dr_Mishra1966 @ndmaindia pic.twitter.com/1jR05IoOUI
ಯಾವುದೇ ಪ್ರಾಣಹಾನಿ ಅಥವಾ ಗಮನಾರ್ಹ ಹಾನಿಯ ಬಗ್ಗೆ ವರದಿಯಾಗಿಲ್ಲ. ಆದರೆ ಅಧಿಕಾರಿಗಳು ಹಾನಿಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.ಭಾರತದಲ್ಲಿ ಹೆಚ್ಚಾಗಿ ಉತ್ತರ ಮತ್ತು ಈಶಾನ್ಯ ಪ್ರದೇಶಗಳಲ್ಲಿ ಭೂಕಂಪ ಕಾಣಿಸಿಕೊಳ್ಳುತ್ತದೆ. ನಿನ್ನೆಯಷ್ಟೆ ಅಸ್ಸಾಂನ ನಾಗಾನ್ ಪ್ರದೇಶದಲ್ಲಿ 3.0 ತೀವ್ರತೆಯ ಭೂಕಂಪವಾಗಿದೆ.