ಕೂದಲು ಉದ್ದವಾಗಿ ದಟ್ಟವಾಗಿ ಬೆಳೆಯಬೇಕು ಅಂದ್ರೆ ನಾವು ಕೂದಲನ್ನು ಆರೋಗ್ಯವಾಗಿ ಇಡಬೇಕು,ಪ್ರತಿದಿನ ಕಾಳಜಿಯನ್ನ ವಹಿಸುವುದು ಕೂಡ ಪ್ರಮುಖ ಪಾತ್ರವಾಗಿರುತ್ತದೆ. ಅನೇಕ ಬಾರಿ ಕೂದಲನ್ನು ಸರಿಯಾಗಿ ಆರೈಕೆ ಮಾಡದೆ ನಿರ್ಲಕ್ಷಿಸಿದಾಗ ಕೂದಲು ಡ್ರೈ ಆಗುವುದು ,ಸುಕ್ಕುಗಟ್ಟುವುದು ,ಡ್ಯಾಮೇಜ್ ಆಗೋದು ,ಹಾಗೂ ಸ್ಪ್ಲಿಟ್ ಅಂಡ್ ಹೆಚ್ಚಾಗುತ್ತದೆ. ನಮ್ಮ ಕೈಯಾರೆ ಕೂದಲನ್ನ ಹಾಳು ಮಾಡಿಕೊಂಡಂತಾಗುತ್ತದೆ. ಹೆಚ್ಚು ಜನಕ್ಕೆ ಕೂದಲ ಬೆಳವಣಿಗೆಗೆ ಅಡ್ಡಿ ಆಗ್ತಾ ಇರುವ ಒಂದು ಸಮಸ್ಯೆ ಅಂದ್ರೆ ಸ್ಪ್ಲಿಟ್ ಎಂಡ್ಸ್,ಈ ಸಮಸ್ಯೆಯನ್ನ ನಿವಾರಣೆ ಮಾಡುವುದಕ್ಕೆ ಈ ಸಿಂಪಲ್ ಟಿಪ್ಸ್ ನ ಫಾಲೋ ಮಾಡಿ.

ಟ್ರಿಮ್ ಮಾಡಿಸಿ
ಸ್ಪ್ಲೈಟೆಂಡ್ಸ್ ಆದಾಗ ಕೂದಲನ್ನು ಟ್ರಿಮ್ ಮಾಡಿಸುವುದು ಅಗತ್ಯ . ಕೂದಲನ್ನ ಎರಡು ಭಾಗವಾಗಿ ವಿಂಗಡಿಸಿ ಒಂದಿಷ್ಟು ಕೂದಲ ಎಳೆಗಳನ್ನು ಹಿಡಿದು ತುದಿಯಲ್ಲಿ ಕಟ್ ಮಾಡಿ, ಹೀಗೆ ಒಂದೊಂದೇ ಭಾಗವನ್ನ ನೋಡಿಕೊಂಡು ಟ್ರಿಮ್ ಮಾಡುವುದರಿಂದ ಸ್ಪ್ಲೈಟೆಂಡ್ಸ್ ಕಡಿಮೆಯಾಗುತ್ತದೆ.

ಎಣ್ಣೆ ಹಚ್ಚಿ
ಕೂದಲ ಬೆಳವಣಿಗೆಗೆ ಡ್ಯಾಮೇಜ್ನ ತಡೆಯುವುದಕ್ಕೆ ಹಾಗೂ ಸ್ಪ್ಲಿಟ್ ಎಂಡ್ಸ್ ಆಗದೆ ಇರುವುದಕ್ಕೆ ನಾವು ಎಣ್ಣೆಯನ್ನು ಹಚ್ಚಬೇಕು. ಅದರಲ್ಲೂ ವಾರಕ್ಕೆ ಎರಡರಿಂದ ಮೂರು ಬಾರಿ ಎಣ್ಣೆ ಹಚ್ಚುವುದು ಉತ್ತಮ. ತಲೆಗೆ ಸ್ನಾನ ಮಾಡುವ ಒಂದೆರಡು ಗಂಟೆಗಳ ಮುನ್ನ ಎಣ್ಣೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ನಂತರ ತಲೆಗೆ ಸ್ನಾನ ಮಾಡುವುದರಿಂದ ಕೂದಲ ಬೆಳವಣಿಗೆ ಚೆನ್ನಾಗಿರುತ್ತದೆ ಮೃದುವಾದ ಕೂದಲು ನಿಮ್ಮದಾಗುತ್ತದೆ.

ಮೊಟ್ಟೆ
ಕೂದಲಿರುವ ಯಾವುದೇ ತೊಂದರೆಗಳನ್ನ ನಿವಾರಣೆ ಮಾಡಲು ಮೊಟ್ಟೆ ತುಂಬಾನೆ ಒಳ್ಳೆಯದು ಮೊಟ್ಟೆಯಲ್ಲಿರುವ ಬಿಳಿಯ ಭಾಗವನ್ನು ಎಣ್ಣೆಯೊಂದಿಗೆ ಮಿಕ್ಸ್ ಮಾಡಿ ನಂತರ ಕೂದಲಿಗೆ ಹಚ್ಚಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ತೊಳೆಯುವುದರಿಂದ ಕೂದಲು ಉದ್ದವಾಗಿ ದಟ್ಟವಾಗಿ ಬೆಳೆಯುತ್ತದೆ ಹಾಗೂ ಸ್ಪ್ಲಿಟ್ ಎಂಡ್ಸ್ ಕಡಿಮೆಯಾಗುತ್ತದೆ.

ಫ್ರೀ ಹೇರ್
ಹೆಚ್ಚಿನ ಜನ ಕೂದಲನ್ನ ಕಟ್ಟದೆ ಫ್ರೀ ಹೇರ್ ಬಿಟ್ಟಿರುತ್ತಾರೆ ಆದರೆ ಟ್ರಾವೆಲ್ ಮಾಡುವಾಗ ಫ್ರೀ ಹೇರ್ ಬಿಟ್ಟರೆ ಗಾಳಿಗೆ ನಿಮ್ಮ ಕೂದಲು ಸುಕ್ಕಾಗುತ್ತದೆ ಹಾಗೂ ಸ್ಪ್ಲಿಟ್ ಎಂಡ್ ಆಗುವುದಕ್ಕೆ ಪ್ರಮುಖ ಕಾರಣ.






