• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಮರ್ಜಾಲದ ಪುಟ್ಟು ಮರಿಯ ಪ್ರಾಣ ಉಳಿಸಿದ ಸತ್ಯ ಘಟನೆ…

ಪ್ರತಿಧ್ವನಿ by ಪ್ರತಿಧ್ವನಿ
August 9, 2024
in ಅಂಕಣ, ಇದೀಗ, ಕರ್ನಾಟಕ, ವಿಶೇಷ
0
ಮರ್ಜಾಲದ ಪುಟ್ಟು ಮರಿಯ ಪ್ರಾಣ ಉಳಿಸಿದ ಸತ್ಯ ಘಟನೆ…
Share on WhatsAppShare on FacebookShare on Telegram

ಬದುಕಿನ ಕಾಲಘಟ್ಟದಲ್ಲಿ ನಮಗೇ ತಿಳಿಯದಂತೆ ಘಟನೆಗಳು ನಡೆದುಹೋಗುತ್ತ್ವೆ … ಇಂದು ವಿಶ್ವ ಬೆಕ್ಕುಗಳ ದಿನ … ಬೆಕ್ಕಿನ ಬಗ್ಗೆ ಒಂದು ವಿಶೇಷ ಬರಹ

ADVERTISEMENT

ಜುಲೈ 10ರ ರಾತ್ರಿ ಬಡಾವಣೆಯ ಅನುಪಮಾ ಶೆಣೈ ಅವರು ಸಮಯಕ್ಕೆ ಬಂದು ಸ್ಪಂದಿಸದೆ ಹೋಗಿದ್ದರೆ ಬೆಕ್ಕಿನ ಮರಿ ಉಳಿಯುವುದೇ ಕಷ್ಟ ಆಗಿತ್ತು , ಒಂದು ಮುದ್ದಾದ ಬೆಕ್ಕಿನ ಮರಿ ಜುಲೈ 10 ರ ಬೆಳ್ಳಿಗ್ಗೆ ಎಲ್ಲಿಂದಲೂ ನಮ್ಮ ಮನೆಯ ಅಂಗಳಕ್ಕೆ ಬಂದು ಹಾಲಿಗಾಗಿ ಅದು ಚಿಕ್ಕ ಧ್ವನಿಯಲ್ಲಿ ಕೂಗುತ್ತ ಇದ್ದಾಗ ನನ್ನ ಧರ್ಮ ಪತ್ನಿ ಅದಕ್ಕೆ ಹಾಲು ಕೊಟ್ಟಾಗ ಅದು ಕುಡಿದು ನಮ್ಮ ಮನೆಯ ಅಂಗಳದ ಮೂಲೆಯಲ್ಲಿ ಹೋಗಿ ಕುಳಿತಿತ್ತು, ಸಂಜೆಯ ವೇಳೆಗೆ ಅದು ಕಾಣದೆ ಇದ್ದಾಗ ಅದರ ತಾಯಿ ಅದನ್ನು ಕರೆದುಕೊಂಡು ಹೋಗಿರಬೇಕು ಎಂದು ಭಾವಿಸಿದ ನನ್ನ ಹೆಂಡತಿ ನಳಿನಿ ಮನೆಯ ಗೇಟ್ ತೆಗೆದುಕೊಂಡು ಹೊರಗೆ ಹೋಗಿ ನೋಡಿದಾಗ ರಸ್ತೆಯ ಮಧ್ಯದಲ್ಲಿ ಅಸಾಹಾಯಕ ಸ್ಥಿತಿಯಲ್ಲಿ ಮಲಗಿತ್ತು…..

ಬೆಕ್ಕಿನ ಮರಿಗೆ ನಾಯಿಗಳು ದಾಳಿ ನಡೆಸಿವೇ ಅಂತ ಶ್ರೀನಿವಾಸ್ ಅವರು ಹೇಳಿದರು…. ಮತ್ತೆ ನಾಯಿಗಳು ಎಲ್ಲಿ ಬಂದು ದಾಳಿ ನಡೆಸುತ್ತದೆಯೋ ಎಂದು ವಾಹನಗಳಿಂದಲೂ ತೊಂದರೆ ಆಗುತ್ತೆ ಅಂತ ಕಾವಲಿದ್ದರು….

ನನ್ನ ಹೆಂಡತಿ ನಳಿನಿ ಕೋಲು ಹಿಡಿದು ರಸ್ತೆಯಲ್ಲಿ ನಿಂತು ನನಗೆ ಹತ್ತು ಬಾರಿ ಕರೆಮಾಡಿದ್ದಳು, ನಾನು ಮನೆ ಕಡೆ ಹೆಜ್ಜೆ ಹಾಕುತ್ತ ಬಂದಾಗ ರಸ್ತೆಯಲ್ಲಿ ಕೋಲು ಹಿಡಿದು ಬೆಕ್ಕಿನ ಮರಿಯ ರಕ್ಷಣೆ ಗೆ ನನ್ನ ಹೆಂಡತಿ ನಿಂತಿದ್ದಳು,

ನಾನು ಬಂದವನು ಅನೇಕ ಪ್ರಾಣಿ ರಕ್ಷಣೆ ಮಾಡುವವರಿಗೆ ಕರೆ ಮಾಡಿದರೆ ಕೆಲವರು ನಾವು ನಾಯಿಗಳನ್ನು ಮಾತ್ರ ರಕ್ಷಣೆ ಮಾಡುತ್ತೇವೆ ಬೆಕ್ಕಿನ ಮರಿ ರಕ್ಷಣೆ ಮಾಡುವುದಿಲ್ಲ ಅಂದರೆ, ಕೆಲವರು ನಾಳೆ ಬೆಳ್ಳಿಗೆ ಚಿಕೆತ್ಸೆ ನೀಡುವ ಕೇಂದ್ರಕ್ಕೆ ಕರೆದುಕೊಂಡು ಬನ್ನಿ ಅಂದರು,

ರಸ್ತೆಯಲ್ಲಿ ವಾಹನಗಳು ಸಾಗುವಾಗ ಬೆಕ್ಕಿನ ಮರಿಗೆ ಏನಾದರೂ ತೊಂದರೆ ಆದರೆ ಎಂದು ಭಾವಿಸಿ ಅದನ್ನು ರಸ್ತೆಯ ಬದಿಗೆ ಬಿಡಲು ಮುಟ್ಟಲು ಹೋದಾಗ ಸಿಟ್ಟು ತೋರಿಸಿ ಅದರ ಮುಂಬದಿಯ ಕಾಲು ಗಳಿಂದ ಮುಂದೆ ಹೋಗಲು ಪ್ರಯತ್ನ ಪಟ್ಟು ಅದರ ಅಸಹಾಯಕ ಸ್ಥಿತಿ ಹಾಗೂ ಕೋಪವನ್ನು ಹೊರಹಾಕಿತ್ತು, ಚಿಕಿತ್ಸೆ ಕೊಟ್ಟರೆ ಬದುಕುತ್ತದೆ ಎಂಬ ವಿಶ್ವಾಸ ಬಂದಿತ್ತು .

“ ಚಂದ್ರಣ್ಣ, ಮಗ ಭೂಷಣ್ ಅನು ಅಕ್ಕನಿಗೆ ಕರೆ ಮಾಡಿದ ಕ್ಷಣ “

ಈ ಎಲ್ಲಾ ಘಟನೆಗಳು ನಡೆಯುತ್ತಾ ನಮ್ಮ ಮನೆಯ ಮುಂಭಾಗದಲ್ಲಿ ಇರುವ ಶ್ರೀನಿವಾಸ್ ಅವರು ಸಹ ಅನೇಕ ಪ್ರಾಣಿ ರಕ್ಷಣೆ ಮಾಡುವವರಿಗೆ ಕರೆ ಮಾಡಿದ್ದರು, ಆದರೆ ಯಾರು ಸಹ ಸರಿಯಾಗಿ ಸ್ಪಂದನೆ ಮಾಡಿರಲಿಲ್ಲ, ಅದೇ ಸಮಯಕ್ಕೆ ಸರಿಯಾಗಿ ಚಂದ್ರಣ್ಣ ಬಂದಿದ್ದರು, ಆಗ ಅವರನ್ನು ಕರೆದು ಬೆಕ್ಕಿನ ಮರಿ ಉಳಿಸಲು, ಚಿಕೆತ್ಸೆ ಕೊಡಿಸಲು ನಿಮಗೆ ಯಾರಾದರೂ ಗೊತ್ತಿದ್ದರೆ ತಿಳಿಸಿ ಎಂದಾಗ ಚಂದ್ರಣ್ಣ, ಮಗ ಭೂಷಣ್ ಅನು ಅಕ್ಕನಿಗೆ ಕರೆ ಮಾಡಿ ಅಂತ ನನಗೆ ಮಾತನಾಡಲು ಕೊಟ್ಟಾಗ ಅನು ಅವರಿಗೆ ನಾಲ್ಕನೇ ತಿರುವಿನಲ್ಲಿ ಬೆಕ್ಕಿನ ಮರಿಗೆ ಆಗಿರುವ ಪರಿಸ್ಥಿತಿ ಬಗ್ಗೆ ತಿಳಿಸಿದಾಗ ಅವರು ಬಂದು ಸ್ಪಂದಿಸಿ ಜೆ. ಪಿ ನಗರದ ಪಶು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬರುವುದಾಗಿ ತಿಳಿಸಿ , ಬೆಕ್ಕಿನ ಮರಿಯ ಹಿಂಭಾಗ ದ ಕಾಲು ಮೂಳೆ ಮುರಿದು ಹೋಗಿದೆ ಹಾಗೂ ಬಾಯಿಯ ಹತ್ತಿರ ಸ್ವಲ್ಪ ರಕ್ತ ಬಂದಿದೆ ಎಂದು ಅದನ್ನು ಚಿಕಿತ್ಸೆಗೆ ಕರೆದುಕೊಂಡು ಹೋದರು.

ಒಟ್ಟಿನಲ್ಲಿ ಕರೆಗೆ ಸ್ಪಂದಿಸಿ ಬಂದ ಅನುಪಮಾ ಶೆಣೈ ಅವರಿಗೆ ಹೃದಯ ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತ ,

ನಾಯಿಗಳು ಹೆಚ್ಚು ದಾಳಿ ಮಾಡದ ಹಾಗೆ ಬೆಕ್ಕಿನ ಮರಿಯನ್ನ ರಕ್ಷಿಸಿದ ಶ್ರೀನಿವಾಸ್ ಗೂ ಬೆಕ್ಕಿನ ಮರಿಯ ಪ್ರಾಣಕ್ಕೆ ನಾಯಿಗಳಿಂದ ವಾಹನಗಳಿಂದ ಎಲ್ಲಿ ತೊಂದರೆ ಆಗತ್ತೊ ಎಂದು ರಸ್ತೆಯಲ್ಲಿ ಕೋಲು ಹಿಡಿದು ನಿಂತಿದ್ದ ನನ್ನ ಧರ್ಮಪತ್ನಿ ನಳಿನಿಗೂ ಹಾಗೂ ನಮ್ಮ ಮನೆಯ ಮುಂಭಾಗದಿಂದ ಕೊಂಚ ದೂರದಲ್ಲಿ ಇರುವ ಮನೆಯ ಅಜ್ಜಿಗೂ ಹಾಗೂ ನಾವೆಲ್ಲರೂ ಅನು ಅವರು ಬೆಕ್ಕಿನ ಮರಿಯನ್ನು ಚಿಕಿತ್ಸೆ ಕೊಡಿಸಲು ತೆಗೆದುಕೊಂಡು ಹೋದಾಗ ಮನಸ್ಸಿನಲ್ಲಿ ಒಂದು ರೀತಿಯ ನಿರಾಳ ಭಾವನೆ…..

ಯಾಕೆಂದರೆ ಒಂದು ಜೀವಿಯ ಪ್ರಾಣ ಉಳಿಸಲು ನಮ್ಮ ಚಿಕ್ಕ ಪ್ರಯತ್ನ …. ಅನುಪಮ ಶೆಣೈ ಎಂಬ ವಿಶಾಲ ಹೃದಯ ಇರುವ ಹೆಣ್ಣು ಮಗಳಿಂದ ನೆರವೇರಿತ್ತು……
(ಇವರು ಬನಶಂಕರಿ 3 ನೇ ಹಂತದ ಗುರುದತ್ತ ಬಡಾವಣೆ ಯ ನಿವಾಸಿ ಹಾಗೂ ಇವರಿಗೆ ನಾಯಿಗಳು, ಬೆಕ್ಕು ಗಳು ಅಂದರೆ ಅಚ್ಚು ಮೆಚ್ಚು…. ಪ್ರಾಣಿಗಳ ಬಗ್ಗೆ ವಿಶೇಷ ಕಾಳಜಿ…. ಇವರು ಅನೇಕ ಬೀದಿ ಬದಿ ನಾಯಿಗಳಿಗೆ ಆಹಾರ ನೀಡಿ ಅವುಗಳ ಅರೋಗ್ಯ ದಲ್ಲಿ ವ್ಯತ್ಯಾಸ ಆದಾಗ ಚಿಕೆತ್ಸೆ ಸಹ ಕೊಡಿಸುತ್ತಾ ಇರುತ್ತಾರೆ

ವಿಶೇಷ ಬರಹ : : ತೀರ್ಥಹಳ್ಳಿ ಅನಂತ ಕಲ್ಲಾಪುರ

Tags: Ananth kallapurCatsPratidhvaniWorld Cats Day
Previous Post

ಸಿಎಂ & ನನ್ನನ್ನು ಒಳಗೆ ಕಳುಹಿಸುವ ಸಂಚು- ಡಿಕೆಶಿ ಸ್ಫೋಟಕ ಹೇಳಿಕೆ

Next Post

ಸಂಭವಾಮಿ ಯುಗೇಯುಗೇ ಚಿತ್ರದ ನಾಯಕನ ಮುಂದಿನ ಚಿತ್ರ “ಸತ್ವಿ”

Related Posts

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!
Top Story

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

by ಪ್ರತಿಧ್ವನಿ
April 22, 2026
0

ಮುಂಬೈ : ಟ್ರಾಪೀಕ್‌ ಕಿರಿ ಕಿರಿ ಅನುಭವಿಸಿದ ಮಹಿಳೆಯೊಬ್ಬಳು ಪೊಲೀಸ್‌ ಅಧಿಕಾರಿ ಹಾಗೂ ಇಲ್ಲಿನ ಸಚಿವರಿಗೆ ಖಡಕ್‌ ಕ್ಲಾಸ್‌ ತೆಗೆದುಕೊಂಡ ಘಟನೆ ನಡೆದಿದೆ. ಮಂಗಳವಾರ ವರ್ಲಿ ಪ್ರದೇಶದಲ್ಲಿ...

Read moreDetails
ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

April 22, 2026
ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

April 22, 2026
ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

April 22, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

April 21, 2026
Next Post
ಸಂಭವಾಮಿ ಯುಗೇಯುಗೇ ಚಿತ್ರದ ನಾಯಕನ ಮುಂದಿನ ಚಿತ್ರ “ಸತ್ವಿ”

ಸಂಭವಾಮಿ ಯುಗೇಯುಗೇ ಚಿತ್ರದ ನಾಯಕನ ಮುಂದಿನ ಚಿತ್ರ "ಸತ್ವಿ"

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada