ಕೋಲಾರ: ಮದುವೆಯಾದ ಕೆಲವೇ ಗಂಟೆಗಳಲ್ಲಿ ನವದಂಪತಿ( Newlyweds)ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದು,Fought, ಗಾಯಗೊಂಡಿದ್ದ ವಧು ಚಿಕಿತ್ಸೆ ಫಲಕಾರಿಯಾಗದೇ ವಧು (bride) ಮೃತಪಟ್ಟಿದ್ದರೆ, ವರನ ಸ್ಥಿತಿ ಗಂಭೀರವಾಗಿದೆ. ಈ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿಯಲ್ಲಿ ನಡೆದಿದೆ.ವಧು ಲಿಖಿತ ಶ್ರೀ ಹಾಗೂ ನವೀನ್ ಇಂದು (ಆಗಸ್ಟ್ 07) ಸಪ್ತಪದಿ ತುಳಿದಿದ್ದಾರೆ. ಆದ್ರೆ, ಅದೇನಾಯ್ತೋ ಏನೋ ರೂಮ್ಗೆ ಹೋಗಿ ಇಬ್ಬರೂ ಹೊಡೆದಾಡಿಕೊಂಡಿದ್ದಾರೆ.
ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ವಧು ಲಿಖಿತ ಶ್ರೀ ಸಾವನ್ನಪ್ಪಿದ್ದಾಳೆ.ಮದ್ವೆಯಾಗಿ ಇನ್ನೇನು ಸುಖವಾಗಿ ಸಂಸಾರ ಸಾಗಿಸಬೇಕಿದ್ದ ವಧು ದುರಂತ ಅಂತ್ಯಕಂಡಿದ್ದರೆ,ವರ ನವೀನ್ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದಾನೆ. ಆದ್ರೆ, ಯಾವ ಕಾರಣಕ್ಕೆ ಜೀವ ಹೋಗುವಾಗೆ ಹೊಡೆದುಕೊಂಡರು ಎನ್ನುವುದು ತಿಳಿದುಬಂದಿಲ್ಲ.
ಸದ್ಯ ವಿಷಯ ತಿಳಿದು ಸ್ಥಳಕ್ಕೆ ಅಂಡರ್ ಸನ್ ಪೇಟೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.ಅದೇನೆ ಇರಲಿ ಗಲಾಟೆಗಳು ಇದ್ದರೆ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಆದ್ರೆ, ಪ್ರಾಣ ಹೋಗುವಾಗೇ ಹೊಡೆದಾಡಿಕೊಂಡಿರುವುದು ವಿಪರ್ಯಾಸವೇ ಸರಿ. ಮದುವೆ ಸಂಭ್ರಮದಲ್ಲಿದ್ದ ಎರಡೂ ಕುಟುಂಬಗಳಲ್ಲಿ ಈ ದುರಂತದಿಂದಾಗಿ ಸೂತಕದ ಛಾಯೆ ಆವರಿಸಿದೆ.