
ಬೆಂಗಳೂರು:BJP-JDS Padayatra ಮುಡಾ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ವಿರೋಧಿಸಿ ದೋಸ್ತಿ ನಾಯಕರ ಬೆಂಗಳೂರು-ಮೈಸೂರು ಪಾದಯಾತ್ರೆ ಇಂದಿನಿಂದ ಆರಂಭವಾಗಿದ್ದು, ಹಾಸನದ ಬಿಜೆಪಿಯ ಮಾಜಿ ಶಾಸಕಪ್ರೀತಂಗೌಡ ಹಾಗೂ ಶಾಸಕ ಎಸ್.ಟಿ.ಸೋಮಖರ್ ಅವರು ಕಾಣಿಸಿಕೊಂಡಿಲ್ಲ.
ಪಾದಯಾತ್ರೆ ಮುಖ್ಯಸ್ಥರನ್ನಾಗಿ ಪ್ರೀತಂಗೌಡ ಅವರನ್ನು ಬಿಜೆಪಿ ನೇಮಕ ಮಾಡಿದ್ದಕ್ಕೆ ಮೊನ್ನೆಯಷ್ಟೇ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಕೆಂಡಾಮಂಡಲರಾಗಿ ವಿರೋಧಿಸಿದ್ದರು.ಹಾಸನದಲ್ಲಿ ಪೆನ್ಡ್ರೈವ್ ಹಂಚಿದವರನ್ನು ನನ್ನ ಜತೆ ಕೂರಿಸಿ ಸಭೆ ಮಾಡುತ್ತಾರೆ. ನಮ್ಮ ಕುಟುಂಬಕ್ಕೆ ವಿಷ ಹಾಕಿದವರ ಜೊತೆ ಪಾದಯಾತ್ರೆಯಲ್ಲಿ ಭಾಗಿಯಾಗಲ್ಲ. ಪ್ರೀತಂಗೌಡರನ್ನು ಹೊರಗಿಡುವಂತೆ ಹೆಚ್ಡಿಕೆ ಬಿಜೆಪಿಗೆ ಒತ್ತಡ ಹಾಕಿದ್ದರು.
ಈ ಹಿನ್ನೆಲೆ ಕುಮಾರಸ್ವಾಮಿಯವರ ಒತ್ತಡಕ್ಕೆ ಮಣಿದ ಬಿಜೆಪಿ ಪ್ರೀತಂಗೌಡರನ್ನು ಪಾದಯಾತ್ರೆಯಿಂದ ದೂರ ಇಟ್ಟಿದೆ ಎಂದು ತಿಳಿದುಬಂದಿದೆ.ಅತ್ತ ಪಾದಯಾತ್ರೆಯಲ್ಲಿ ಎಲ್ಲೂ ಕಾಣಿಸಿಕೊಳ್ಳದ ಕಮಲಪಡೆಯ ರೆಬೆಲ್ ಶಾಸಕ ಎಸ್.ಟಿ ಸೋಮಶೇಖರ್ ಕೂಡ ಪಾದಯಾತ್ರೆಯ ವಿರುದ್ಧ ಕಾಂಗ್ರೆಸ್ ಆರಂಭಿಸಿ ಹಾಕಿರುವ ಜನಾಂದೋಲನದ ಬ್ಯಾನರ್ಗಳಲ್ಲಿ ಕಾಣಿಸಿಕೊಂಡಿದ್ದು ಬಿಜೆಪಿಗೆ ಮುಜುಗರ ಉಂಟಾದಂತಿದೆ.