
ಮಂಗಳೂರು ; ಮಂಗಳೂರಿನ ಬಜ್ಪೆ ಬಳಿಯ ಅದ್ಯಪಾಡಿ ಎಂಬಲ್ಲಿ ಭಾರೀ ಮಳೆಯಿಂದ ಮುಳುಗಡೆ ಆಗಿದ್ದ ಪ್ರದೇಶಕ್ಕೆ ದೋಣಿಯಲ್ಲಿ ತೆರಳಿ ವಿದ್ಯುತ್ ಲೈನ್ ನ್ನು ದುರಸ್ಥಿಪಡಿಸಿದ ಲೈನ್ ಮ್ಯಾನ್ ಕೆಲಸಕ್ಕೆ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಈ ಕುರಿತು ಎಕ್ಸ್ ನಲ್ಲಿ ಸಂದೇಶ ಪ್ರಕಟಿಸಿರುವ ಇಂಧನ ಸಚಿವ ಕೆ ಜೆ ಜಾರ್ಜ್ ಅವರು ನಮ್ಮ ನಿರ್ಭೀತ ಮತ್ತು ಕರ್ತವ್ಯಪರ ದಕ್ಷ ಲೈನ್‌ಮ್ಯಾನ್‌ಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಂಧನ ಇಲಾಖೆಯಲ್ಲಿ ಅತ್ಯಂತ ಕಠಿಣ ಮತ್ತು ಅಪಾಯಕಾರಿ ಪರಿಸ್ಥಿತಿಗಳಲ್ಲಿ ದಣಿವರಿಯಿಲ್ಲದೆ ಕೆಲಸ ಮಾಡುವ ಇವರು ಕರ್ನಾಟಕ ಸರ್ಕಾರದ ಅತ್ಯಮೂಲ್ಯ ಆಸ್ತಿಗಳು ಎಂಬುದಾಗಿ ಅವರು ಬಣ್ಣಿಸಿದ್ದಾರೆ. ಅವರ ಅಪ್ರತಿಮ ಸಮರ್ಪಣೆ ಮತ್ತು ಅಸಾಧಾರಣ ಶೌರ್ಯ ನಿಜವಾಗಿಯೂ ಅಮೂಲ್ಯವಾದುದು. ನಾವು ನಿಮ್ಮ ಬಗ್ಗೆ ತುಂಬಾ ಹೆಮ್ಮೆಪಡುತ್ತೇವೆ. ಎಂದು ಅವರು ಹೇಳಿದ್ದಾರೆ.












