ಕೇಂದ್ರ ಸರ್ಕಾರ ಹಿಂದಿನ ಬ್ರಿಟಿಷ್ಕಾಲದ ಐಪಿಸಿ ಯನ್ನು ರದ್ದುಪಡಿಸಿ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ನ್ನು ಜುಲೈ ಒಂದರಿಂದ ದೇಶಾದ್ಯಂತ ಜಾರಿಗೊಳಿಸಿದ ನಂತರ ಯಾರಾದರೂ ಆತ್ಮಹತ್ಯೆಗೆ ಯತ್ನಿಸಿದರೆ ಅದು ಅಪರಾಧ ಆಗುವುದಿಲ್ಲ.
ಭಾರತೀಯ ದಂಡ ಪ್ರಕ್ರಿಯೆ (ಐಪಿಸಿ)ಯಡಿ ಇದ್ದ ಆತ್ಮಹತ್ಯೆ ಯತ್ನಕ್ಕೆ ಸಂಬಂಧಿಸಿದ ಸೆಕ್ಷನ್309ನ್ನು ಜುಲೈ ಒಂದರಿಂದ ಜಾರಿಗೆ ಬರಲಿರುವ ಭಾರತೀಯ ನ್ಯಾಯಸಂಹಿತೆ (ಬಿಎನ್ಎಸ್)ಯಡಿ ಕೈಬಿಡಲಾಗಿದೆ. 1860ರಲ್ಲಿ ಬ್ರಿಟಿಷರಿಂದ ರೂಪಿತ ಭಾರತೀಯ ದಂಡ ಪ್ರಕ್ರಿಯೆ (ಐಪಿಸಿ ಸೆಕ್ಷನ್309) ಪ್ರಕಾರ ಅಪರಾಧವಾಗಿದ್ದ ಆತ್ಮಹತ್ಯೆ ಯತ್ನಕ್ಕೆ 1 ವರ್ಷ ಜೈಲು, ದಂಡ ಅಥವಾ ಇವೆರಡನ್ನೂ ವಿಧಿಸಬಹುದಾಗಿತ್ತು. 1971 ಹಾಗೂ 2008ರಲ್ಲಿ ಭಾರತೀಯ ಕಾನೂನು ಆಯೋಗ ಆತ್ಮಹತ್ಯೆ ಯತ್ನಕ್ಕೆ ಶಿಕ್ಷೆ ವಿಧಿಸುವ ವಿಧಿ 309 ಕೈಬಿಡಲು ಶಿಫಾರಸು ಮಾಡಿತ್ತು. ಸುಪ್ರೀಂ ಕೋರ್ಟ್ಕೂಡ ಹಲವು ಸಂದರ್ಭಗಳಲ್ಲಿ ಹಳೆಯ ಕಾಲದ ಕಾನೂನಿನಲ್ಲಿ ಬದಲಾವಣೆಗೆ ನಿರ್ದೇಶನವನ್ನೂ ನೀಡಿತ್ತು.
ಕೇಂದ್ರ ಸರಕಾರ ಮಾನಸಿಕ ಆರೋಗ್ಯ ಸುರಕ್ಷಾ ಕಾಯಿದೆ 2017(ಸೆಕ್ಷನ್115) ಪ್ರಕಾರ ಆತ್ಮಹತ್ಯೆ ಯತ್ನವನ್ನು ಅಪರಾಧವಾಗಿ ಪರಿಗಣಿಸದಿರಲು ಕಾನೂನಿಗೆ ಮಾಡಿದ ತಿದ್ದುಪಡಿ 2018ರ ಜುಲೈನಲ್ಲಿ ಜಾರಿ ಹೊರತಾಗಿಯೂ ಎರಡು ಕಾನೂನುಗಳ ನಡುವೆ ದ್ವಂದ್ವ ಇತ್ತು. ಭಾರತೀಯ ದಂಡ ಪ್ರಕ್ರಿಯೆ 1860 (ಐಪಿಸಿ) ಇನ್ನು ಮುಂದೆ ಭಾರತೀಯ ನ್ಯಾಯಸಂಹಿತೆ (ಬಿಎನ್ಎಸ್) ಕ್ರಿಮಿನಲ್ಪ್ರೊಸೀಜರ್ಕೋಡ್1898 (ಸಿಪಿಸಿ) ಇನ್ನು ಮುಂದೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಹಾಗೂ ಇಂಡಿಯನ್ಎವಿಡೆನ್ಸ್ಆ್ಯಕ್ಟ್ 1872(ಐವಿಎ) ಭಾರತೀಯ ಸಾಕ್ಷ್ಯ ಅಧಿನಿಯಮವಾಗಲಿದೆ. ಇದರಡಿಯಲ್ಲಿ ಹಲವು ಕಾನೂನುಗಳನ್ನು ಕೈಬಿಡಲಾಗಿದೆ, ಕೆಲವಕ್ಕೆ ತಿದ್ದುಪಡಿ ಮಾಡಲಾಗಿದ್ದು ಹೊಸ ವಿಧಿಗಳ ಸೇರ್ಪಡೆಯನ್ನೂ ಮಾಡಲಾಗಿದೆ.
ಐಪಿಸಿ ಪ್ರಕಾರ ಯಾರಾದರೂ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದರೆ ಅಂತವರ ವಿರುದ್ದ ಪೋಲೀಸರು ಸೆಕ್ಷನ್309 ರ ಅಡಿಯಲ್ಲಿ ಪ್ರಕರಣ ದಾಖಲಿಸುತಿದ್ದರು. ಜುಲೈ ಒಂದರಿಂದ ಯಾವುದೆ ರೀತಿಯ ಮೊಕದ್ದಮೆ ದಾಖಲಿಸಲು ಅವಕಾಶವಿಲ್ಲ.
ವಿಶ್ವದಲ್ಲಿ ವರ್ಷಕ್ಕೆ 7.03 ಲಕ್ಷ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಮಲೇರಿಯಾ, ಎಚ್ಐವಿ/ಏಡ್ಸ್, ಸ್ತನ ಕ್ಯಾನ್ಸರ್, ಯುದ್ಧ ದ ಸಾವಿನ ಬಳಿಕ ಆತ್ಮಹತ್ಯೆ ಸಾವು ವಿಶ್ವದಲ್ಲಿ ಹೆಚ್ಚು. ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ವಾರ್ಷಿಕ ಸರಾಸರಿ 1,73,347 ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. 1 ಲಕ್ಷ ಜನರಲ್ಲಿ ಆತ್ಮಹತ್ಯೆ ಪ್ರಮಾಣ 12.7 ಆಗಿದ್ದು ಮಹಿಳೆಯರ ಆತ್ಮಹತ್ಯೆ ಪ್ರಮಾಣ ಲಕ್ಷಕ್ಕೆ 11.1, ಪುರುಷರ ಆತ್ಮಹತ್ಯೆ ಪ್ರಮಾಣ ಲಕ್ಷಕ್ಕೆ 14.1 ಆಗಿದೆ.
ದಕ್ಷಿಣ ಆಫ್ರಿಕದ ಲೆಸೆಥೊದಲ್ಲಿ 1 ಲಕ್ಷಕ್ಕೆ 87.5 ಜನರ ಆತ್ಮಹತ್ಯೆ ಜಗತ್ತಿನಲ್ಲೇ ಅತ್ಯಧಿಕವಾಗಿದೆ.
ಭಾರತದಲ್ಲಿ ಆತ್ಮಹತ್ಯೆಯನ್ನು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಪರಿಗಣಿಸಲಾಗುತ್ತಿದೆ.
ಭಾರತದಲ್ಲಿ ಕೌಟುಂಬಿಕ ಸಮಸ್ಯೆ: ಶೇ.32.4,ಅನಾರೋಗ್ಯ: ಶೇ.17.1,ಮದ್ಯ, ಮಾದಕ: ಶೇ.5.6
ವೈವಾಹಿಕ: ಶೇ.5.5,ಪ್ರೇಮ ವೈಫಲ್ಯ: ಶೇ.4.5,ಹಣಕಾಸು: ಶೇ.4.2,ಪರೀಕ್ಷೆ ಅನುತ್ತೀರ್ಣ: ಶೇ.2
ನಿರುದ್ಯೋಗ: ಶೇ.2,ವೃತ್ತಿಪರ: ಶೇ.1.2,ಆಸ್ತಿ ವಿವಾದ: ಶೇ.1.1,ಪ್ರೀತಿಪಾತ್ರರ ಸಾವು: ಶೇ.0.9
ಬಡತನ: ಶೇ.0.8,ಸಾಮಾಜಿಕ ಗೌರವಕ್ಕೆ ಕುಂದು: ಶೇ.0.4,ಅಕ್ರಮ ಸಂಬಂಧ: ಶೇ.0.5
ಬಂಜೆತನ: ಶೇ.0.3,ಇತರೆ: ಶೇ.11.1,ಅವ್ಯಕ್ತ ಕಾರಣ: ಶೇ.10.3 ರಷ್ಟು ಜನರು ಆತ್ಮಹತ್ಯೆಗೆ ಶರಣಾಗುತಿದ್ದಾರೆ.
ಕರ್ನಾಟಕದಲ್ಲಿ 2023 ರಲ್ಲಿ ಒಟ್ಟು 12,896 ಜನ ಆತ್ಮಹತ್ಯೆಗೆ ಶರಣಾಗಿದ್ದರೆ ದೇಶದಲ್ಲಿ ಇದೇ ಅವಧಿಯಲ್ಲಿ 1,82,642 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.