ವಾಲ್ಮೀಕಿ ಅಭಿವೃದ್ದಿ ನಿಗಮದ ಹಣ ಅಕ್ರಮ ವರ್ಗಾವಣೆ ಕೇಸ್ ಗೆ ಸಂಬಂಧಪಟ್ಟಂತೆ ರೋಚಕ ಬೆಳವಣಿಗೆಯಾಗಿದೆ. ಸಚಿವ ಬಿ ನಾಗೇಂದ್ರ (B nagendra) ಆಪ್ತನನ್ನ ಎಸ್.ಐ.ಟಿ ವಶಕ್ಕೆ ಪಡೆದಿದೆ.
ಕೊಪ್ಪಳದಲ್ಲಿ (koppal) ಸಚಿವ ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ್ (Nekkanti nagaraj) ರನ್ನ ವಶಕ್ಕೆ ಪಡೆದ ಎಸ್.ಐ.ಟಿ (SIT) ಹಗರಣದ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಕಲೆಹಾಕಲು ಮುಂದಾಗಿದೆ.
ಕೊಪ್ಪಳದಲ್ಲಿ ನಿನ್ನೆ ಸಂಜೆ ನೆಕ್ಕಂಟಿ ನಾಗರಾಜ್ ರನ್ನ ವಶಕ್ಕೆ ಪಡೆದಿರೋ ಎಸ್.ಐ.ಟಿ ,ಹಣ ವರ್ಗಾವಣೆ ವಿಚಾರದಲ್ಲಿ ಈ ವ್ಯಕ್ತಿಯ ಕೈವಾಡ ಶಂಕೆ ಹಿನ್ನಲೆ ಎಸ್.ಐ.ಟಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದೆ.
ಸದ್ಯ ಈಗಾಗಲೇ ಎಸ್.ಐ.ಟಿ ವಶದಲ್ಲಿರೋ ವಾಲ್ಮೀಕಿ ನಿಗಮ ಎಂ.ಡಿ ಪದ್ಮನಾಭ ಹಾಗೂ ಲೆಕ್ಕಾಧಿಕಾರಿ ಪರಶುರಾಮ್ ನೀಡಿದ ಮಾಹಿತಿ ಮೇರೆಗೆ ನೆಕ್ಕಂಟಿ ನಾಗರಾಜನನ್ನು ವಶಕ್ಕೆ ಪಡೆದ ಎಸ್.ಐ.ಟಿ ತನಿಖೆ ಚುರುಕುಗೊಳಿಸಿದೆ.