ಇತ್ತೀಚಿಗೆ ವೇದಿಕೆಯೊಂದರ ಮೇಲೆ ಭಾಷಣ ಮಾಡುವ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ (BY vijayendra) ಶಿಕ್ಷಣ ಸಚಿವ ಮಧು ಬಂಗಾರಪ್ಪ (Education minister madhu bangarappa) ಅವರ ಹೇರ್ ಸ್ಟೈಲ್ (Hairstyle) ಕುರಿತು ಹಾಸ್ಯ ಮಾಡಿದ್ದರು . ಶಿಕ್ಷಣ ಸಚಿವರೆ ನೀಟಾಗಿ ಹೇರ್ ಕಟ್ ಮಾಡಿಸಿ ಶಿಸ್ತಿನಿಂದ ಕಾಣಿಸಿಕೊಳ್ಳಿ ಎಂದು ಮಧು ಬಂಗಾರಪ್ಪ ಹೇರ್ ಸ್ಟೈಲ್ ಬಗ್ಗೆ ವ್ಯಂಗ್ಯ ಮಾಡಿದ್ರು.
ಶಾಲೆಗಳಿಗೆ ಮಕ್ಕಳು ಶಿಸ್ತನ್ನು ಕಲಿಯಲು ಬರ್ತಾರೆ , ಶಾಲೆಗೆ ಬರುವ ಮಕ್ಕಳನ್ನ ಪೋಷಕರು ನೀಟಾಗಿ ತಲೆ ಬಾಚಿ ಪೌಡರ್ ಹಚ್ಚಿ ಶಿಸ್ತಿನಿಂದ ಕಳುಹಿಸುತ್ತಾರೆ . ಆದರೆ ನಮ್ಮ ಶಿಕ್ಷಣ ಸಚಿವರೆ ಹೇರ್ ಕಟ್ ಮಾಡಿಸದೆ ಶಿಸ್ತಿನಿಂದ ಇರದೆ ಹೇಗಂದ್ರೆ ಹಾಗೆ ಶಾಲೆಗಳಿಗೆ ಬರ್ತಾರೆ ಎಂದು ವಿಜಯೇಂದ್ರ ಟೀಕಿಸಿದರು.

ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿಜಯೇಂದ್ರ ಪುರುಸೊತ್ತಾಗಿದ್ದರೆ ಅರ್ಥಾತ್ ಅವರಿಗೆ ಸಮಯ ಇದ್ರೆ ಅವರೇ ಬಂದು ಮಾಡಲಿ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ . ಈ ಮುಂಚೆ ಬಿಜೆಪಿಯವರು ಡಿಕೆ ಶಿವಕುಮಾರ್ (Dk shivakumar) ಗಡ್ಡದ ಬಗ್ಗೆ ಮಾತಾಡಿ 100 ರಿಂದ 65 ಸ್ಥಾನಗಳಿಗೆ ಬಂದ್ರು ಇದೀಗ ಲೋಕಸಭಾ ಚುನಾವಣೆಯಲ್ಲಿ 26 ರಿಂದ 6 ಸ್ಥಾನಗಳಿಗೆ ಬರಲಿದ್ದಾರೆ ನನ್ನ ಹೇರ್ ಸ್ಟೈಲ್ ಬಗ್ಗೆ ಚಿಂತೆ ಮಾಡುವುದನ್ನು ಬಿಟ್ಟು ಬಾಕಿ ಕೆಲಸ ಇದ್ರೆ ನೋಡಲಿ ಎಂದು ಮಧು ಬಂಗಾರಪ್ಪ ಬಿ ವೈ ವಿಜಯೇಂದ್ರ ಕೊಟ್ಟಿದ್ದಾರೆ.