ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಜಾರಿ ನಿರ್ದೇಶನಾಲಯ ಶುಕ್ರವಾರ ಚಾರ್ಜ್ ಶೀಟ್ ಸಲ್ಲಿಸಿದೆ. ಜತೆಗೆ ಆಮ್ ಆದ್ಮಿ ಪಕ್ಷವನ್ನು ಆರೋಪಿ ಎಂದು ಹೆಸರಿಸಿದೆ.
ಇಲ್ಲಿನ ವಿಶೇಷ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ದೂರನ್ನು ಸಲ್ಲಿಸಲಾಗಿದ್ದು, ಆರೋಪಿಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ)ಯ ನಿಬಂಧನೆಗಳ ಅಡಿಯಲ್ಲಿ ಆರೋಪ ಹೊರಿಸುವಂತೆ ಕೋರಲಾಗಿದೆ ಎಂದು ಮೂಲಗಳು ತಿಳಿಸಿವೆ.ಫೆಡರಲ್ ಏಜೆನ್ಸಿಯು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರೂ ಆಗಿರುವ 55 ವರ್ಷದ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಅವರ ಅಧಿಕೃತ ನಿವಾಸದಲ್ಲಿ ಬಂಧಿಸಿತ್ತು. ಪ್ರಸ್ತುತ ಅವರು ಮಧ್ಯಂತರ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದಾರೆ.

ಒಟ್ಟಾರೆ ಈ ಪ್ರಕರಣದಲ್ಲಿ ಇಡಿ ಸಲ್ಲಿಸಿರುವ ಎಂಟನೇ ಚಾರ್ಜ್ ಶೀಟ್ ಇದಾಗಿದ್ದು, ಇದುವರೆಗೆ 18 ಜನರನ್ನು ಬಂಧಿಸಿದೆ. ಕಳೆದ ವಾರ, ಬಿಆರ್ಎಸ್ ನಾಯಕ ಮತ್ತು ತೆಲಂಗಾಣ ಮಾಜಿ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ ಕವಿತಾ ಮತ್ತು ಇತರ ನಾಲ್ವರ ವಿರುದ್ಧ ಸಂಸ್ಥೆಯು ಇದೇ ರೀತಿಯ ದೂರು ದಾಖಲಿಸಿದೆ.ಒಟ್ಟಾರೆ ಈ ಪ್ರಕರಣದಲ್ಲಿ ಇಡಿ ಸಲ್ಲಿಸಿರುವ ಎಂಟನೇ ಚಾರ್ಜ್ ಶೀಟ್ ಇದಾಗಿದ್ದು, ಇದುವರೆಗೆ 18 ಜನರನ್ನು ಬಂಧಿಸಿದೆ. ಕಳೆದ ವಾರ, ಬಿಆರ್ಎಸ್ ನಾಯಕ ಮತ್ತು ತೆಲಂಗಾಣ ಮಾಜಿ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ ಕವಿತಾ ಮತ್ತು ಇತರ ನಾಲ್ವರ ವಿರುದ್ಧ ಸಂಸ್ಥೆಯು ಇದೇ ರೀತಿಯ ದೂರು ದಾಖಲಿಸಿದೆ.ಒಟ್ಟಾರೆ ಈ ಪ್ರಕರಣದಲ್ಲಿ ಇಡಿ ಸಲ್ಲಿಸಿರುವ ಎಂಟನೇ ಚಾರ್ಜ್ ಶೀಟ್ ಇದಾಗಿದ್ದು, ಇದುವರೆಗೆ 18 ಜನರನ್ನು ಬಂಧಿಸಿದೆ. ಕಳೆದ ವಾರ, ಬಿಆರ್ಎಸ್ ನಾಯಕ ಮತ್ತು ತೆಲಂಗಾಣ ಮಾಜಿ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ ಕವಿತಾ ಮತ್ತು ಇತರ ನಾಲ್ವರ ವಿರುದ್ಧ ಸಂಸ್ಥೆಯು ಇದೇ ರೀತಿಯ ದೂರು ದಾಖಲಿಸಿದೆ.ಮುಖ್ಯಮಂತ್ರಿಯನ್ನು ಈ ಹಿಂದೆ ಇಡಿ ದೆಹಲಿ ಅಬಕಾರಿ “ಹಗರಣ”ದ “ಕಿಂಗ್ಪಿನ್ ಮತ್ತು ಪ್ರಮುಖ ಸಂಚುಕೋರ” ಎಂದು ಕರೆದಿದೆ. ಅವರು ದೆಹಲಿ ಸರ್ಕಾರದ ಸಚಿವರು, ಎಎಪಿ ನಾಯಕರು ಮತ್ತು ಇತರ ವ್ಯಕ್ತಿಗಳೊಂದಿಗೆ ಶಾಮೀಲಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.