• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, October 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

100 ಕೋಟಿ ಡೀಲ್‌ ಆರೋಪ.. ಬೆಂಗಳೂರಿಗೆ ದೇವರಾಜೇಗೌಡ ಶಿಫ್ಟ್‌..

ಕೃಷ್ಣ ಮಣಿ by ಕೃಷ್ಣ ಮಣಿ
May 18, 2024
in Uncategorized
0
100 ಕೋಟಿ ಡೀಲ್‌ ಆರೋಪ.. ಬೆಂಗಳೂರಿಗೆ ದೇವರಾಜೇಗೌಡ ಶಿಫ್ಟ್‌..
Share on WhatsAppShare on FacebookShare on Telegram

ಪ್ರಜ್ವಲ್‌ ರೇವಣ್ಣಗೆ ಸಂಬಂಧಿಸಿದ್ದು ಎನ್ನಲಾಗ್ತಿರುವ ಪೆನ್‌ಡ್ರೈವ್‌ ಕೇಸ್‌ನಲ್ಲಿ ವಕೀಲ, ಬಿಜೆಪಿ ನಾಯಕ ದೇವರಾಜೇಗೌಡ, ಡಿಸಿಎಂ ಡಿ.ಕೆ ಶಿವಕುಮಾರ್‌ ವಿರುದ್ಧ ನೇರ ಆರೋಪ ಮಾಡಿದ್ದಾರೆ. ಮೊದಲು ಲೈಂಗಿಕ ಕಿರುಕುಳ ಕೇಸ್ ಹಾಕಿಸಿದ್ರು. ಅದರಲ್ಲಿ ಯಾವುದೇ ಸಾಕ್ಷ್ಯ ಸಿಗಲಿಲ್ಲ. ಅದಾದ ಮೇಲೆ ರೇಪ್ ಕೇಸ್ ಹಾಕಿಸಿದ್ರು. ಅದರಲ್ಲೂ ಸಾಕ್ಷ್ಯ ಸಿಗಲಿಲ್ಲ. ಏನಾದರೂ ಮಾಡಿ ದೇವರಾಜೇಗೌಡರನ್ನ ಮಟ್ಟಹಾಕಬೇಕು ಅಂತ ಹೇಳಿ ಈಗ ಪೆನ್‌ಡ್ರೈವ್ ಕೇಸ್‌ನಲ್ಲಿ ಲಾಕ್ ಮಾಡಿಸಿದ್ದಾರೆ ಎಂದು ದೂರಿದ್ದಾರೆ.

ADVERTISEMENT

ಪೆನ್‌ಡ್ರೈವ್‌ ಕೇಸ್‌ನಲ್ಲಿ ಡಿ.ಕೆ ಶಿವಕುಮಾರ್ ಕೈವಾಡ ಇದೆ. ಮುಂದೆ ನನ್ನ ಕಾನೂನು‌ ಹೋರಾಟ ಡಿ.ಕೆ ಶಿವಕುಮಾರ್ ಜೈಲಿಗೆ ಕಳಿಸೋದು ಎಂದಿದ್ದಾರೆ. ಸರ್ಕಾರದ ನಾಲ್ಕು‌ ಸಚಿವರು ನನ್ನನ್ನು ಕರೆಸಿ‌ ಮಾತನಾಡಿಸಿದ್ದರು. ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ, ಕೃಷ್ಣ ಭೈರೇಗೌಡ, ಪ್ರಿಯಾಂಕ್ ಖರ್ಗೆ ಹಾಗು ಇನ್ನೊಬ್ಬ ಸಚಿವರು ನನಗೆ ಆಫರ್ ಕೊಟ್ರು. ₹100 ಕೋಟಿ ಹಣದ ಆಫರ್ ನೀಡಿದ್ದರು. ಅಡ್ವಾನ್ಸ್ ಆಗಿ ₹5 ಕೋಟಿ ಹಣವನ್ನ ಬೌರಿಂಗ್ ಕ್ಲಬ್‌ಗೂ ಕಳಿಸಿದ್ದರು. ಆದರೆ ನಾನು ಹಣದ ಡೀಲ್‌ಗೆ ಒಪ್ಪಲಿಲ್ಲ ಅದಕ್ಕೇ ಹೀಗೆಲ್ಲಾ ಮಾಡುತ್ತಿದ್ದಾರೆ. ಕುಮಾರಸ್ವಾಮಿಯನ್ನ ರಾಜಕೀಯವಾಗಿ ಮುಗಿಸಲು ಸಂಚು ರೂಪಿಸಿದ್ದರು ಎಂದು ಹೇಳಿದ್ದಾರೆ.

ಕಾರ್ತಿಕ್ ಗೌಡನ ಹತ್ತಿರ ಪೆನ್‌ಡ್ರೈವ್ Pendrive ತರಿಸಿಕೊಂಡು ಎಲ್ಲಾ ರೆಡಿ ಮಾಡಿದ ಡಿ.ಕೆ ಶಿವಕುಮಾರ್, ನಾಲ್ಕು ಜನ ಮಂತ್ರಿಗಳ ಕಮಿಟಿ ಮಾಡಿ ಇದನ್ನೆಲ್ಲಾ ಹ್ಯಾಂಡಲ್‌ ಮಾಡಬೇಕು ಎಂದು ಬಿಟ್ಟಿದ್ದಾರೆ. ಇಷ್ಟೆಲ್ಲಾ ದೊಡ್ಡ ಹಗರಣ ಆಗಿರೋದ್ರಿಂದ ಮೋದಿಯವರಿಗೆ, ಬಿಜೆಪಿಗೆ ಕುಮಾರಸ್ವಾಮಿ ಅವರಿಗೆ ಕೆಟ್ಟ ಹೆಸರು ತರೋದಕ್ಕೆ ಮಾಡಿದ್ರು. ಚನ್ನರಾಯಪಟ್ಟಣದ ಗೋಪಾಲಸ್ವಾಮಿಯನ್ನು Gopalaswamy ಐದು ಕೋಟಿ ಕ್ಯಾಷ್‌‌ ಕೊಟ್ಟು ಸಂಧಾನಕ್ಕೆ ಕಳಿಸಿದ್ರು. ₹100 ಕೋಟಿ Crores ಆಫರ್ ಮಾಡಿದ್ದು ಡಿ.ಕೆ ಶಿವಕುಮಾರ್. ಮೋದಿವರಿಗೆ ಕಳಂಕ ತರಬೇಕು, ಬಿಜೆಪಿಗೆ ಕೆಟ್ಟ ಹೆಸರು ತರಬೇಕು. ರಾಜ್ಯದಲ್ಲಿ ಹೆಚ್.ಡಿ ಕುಮಾರಸ್ವಾಮಿ Kumaraswamy ನಾಯಕತ್ವ ಹಾಳು ಮಾಡಬೇಕು ಅನ್ನೋದು ಡಿಕೆಶಿ ಉದ್ದೇಶ ಎಂದಿದ್ದಾರೆ.

ಡಿ.ಕೆ ಶಿವಕುಮಾರ್‌ ಡೀಲ್‌ಗೆ ನಾನು ಒಪ್ಪದಿದ್ದಾಗ ಮೊದಲಿಗೆ ಅಟ್ರಾಸಿಟಿ ಕೇಸ್ ಮಾಡಿಸಿದ್ರು. ಅದರಲ್ಲಿ ಡಾಕ್ಯೂಮೆಂಟ್ ಸಿಗಲಿಲ್ಲ, ನೆಗೆಟಿವ್ ಆಯ್ತು. ಆ ಬಳಿಕ ಮತ್ತೊಬ್ಬಳ ಕೈಯಲ್ಲಿ 354A ಕೇಸ್ ಹಾಕಿಸಿದ್ರು. ಅದೂ ಫೆಲ್ಯೂರ್ ಆಯ್ತು, ಆದಾದ್ಮೇಲೆ ರೇಪ್ ಕೇಸ್ ಹಾಕಿಸಿದ್ರು, ರೇಪ್ ಕೇಸ್‌ನಲ್ಲಿ ಯಾವುದೇ ದಾಖಲೆಗಳು ಸಿಗಲಿಲ್ಲ. 4 ದಿನಗಳ ಕಾಲ ನಿರಂತರವಾಗಿ ವಿಚಾರಣೆ ನಡೆಸಿದ್ದಾರೆ. ಡಿ.ಕೆ ಶಿವಕುಮಾರ್ D.K Shivakumar ನೇರವಾಗಿ ನನ್ನ ಹತ್ತಿರ ಮಾತನಾಡಿ ಹಣದ Money Offer ಆಫರ್‌ ಮಾಡಿದ್ರು ಎಂದು ನೇರವಾಗಿಯೇ ಆರೋಪ ಮಾಡಿದ್ದಾರೆ ವಕೀಲ ದೇವರಾಜೇಗೌಡ.

ಒಂದು ದಿನಗಳ ಕಾಲ ದೇವರಾಜೇಗೌಡರನ್ನು Devarajegowda ವಶಕ್ಕೆ ಪಡೆದಿರುವ ಎಸ್‌ಐಟಿ ಅಧಿಕಾರಿಗಳು, ಬೆಂಗಳೂರಿನ ಸಿಐಡಿ ಕಚೇರಿಗೆ ಕರೆತಂದಿದ್ದಾರೆ. ಇಂದು‌ ಮತ್ತು ನಾಳೆ ದೇವರಾಜೇಗೌಡರನ್ನ ತೀವ್ರ ವಿಚಾರಣೆ ನಡೆಸಲಿದ್ದು, ಆ ಬಳಿಕ ಮತ್ತೆ ಕೋರ್ಟ್‌ಗೆ ಹಾಜರು ಮಾಡಲಿದ್ದಾರೆ. ಹಾಸನದ Hassan ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗಿದ್ದ ಕೇಸ್​ ಸಂಬಂಧ ವಶಕ್ಕೆ ಪಡೆದಿರೋ SIT ಟೀಂ ಪ್ರಕರಣದ 8ನೇ ಆರೋಪಿಯಾಗಿ ಸೇರಿಸಿಕೊಂಡಿದ್ದಾರೆ. ಕಾರ್ತಿಕ್ ಗೌಡ ಕೂಡ ದೇವರಾಜೇಗೌಡಗೆ ಪೆನ್‌ಡ್ರೈವ್ ಕೊಟ್ಟಿದ್ದೆ ಅಂತ ಹೇಳಿದ್ದರಿಂದ ದೇವರಾಜೇಗೌಡರನ್ನು ವಿಚಾರಣೆ ನಡೆಸಲು ಕಸ್ಟಡಿಗೆ ಪಡೆದಿದ್ದಾರೆ.

Previous Post

ಅಬಕಾರಿ ನೀತಿ ಹಗರಣ ಕೇಸ್.. ದಿಲ್ಲಿ ಸಿಎಂ ಕೇಜ್ರಿವಾಲ್ ವಿರುದ್ಧ ಚಾರ್ಜ್ ಶೀಟ್

Next Post

ರಾಜ್ಯದಲ್ಲಿ ಎಲ್ಲೆಲ್ಲಿ ಮಳೆ ಆರ್ಭಟ ಹೇಗಿದೆ..?

Related Posts

ನ್ಯಾಷನಲ್ ಹೆರಾಲ್ಡ್ ಪ್ರಕರಣ:ನಮಗೆ ಸಮನ್ಸ್ ನೀಡಿರುವುದು ಸರಿಯಲ್ಲ: ಡಿ.ಕೆ. ಶಿವಕುಮಾರ್
Uncategorized

ಕಾವೇರಿ ನೀರು ವಿಚಾರದ ಬಗ್ಗೆ ರಾಜ್ಯ ಸರ್ಕಾರದಿಂದ ನ್ಯಾಯಾಲಯದಲ್ಲಿ ಮೇಲ್ಮನವಿ : ಸಿಎಂ ಡಿಕೆ ಶಿವಕುಮಾರ್

by ಪ್ರತಿಧ್ವನಿ
September 24, 2026
0

ಚಿತ್ರದುರ್ಗ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ಜಲಾಶಯಗಳ ನೈಜ ಸ್ಥಿತಿಗತಿಯನ್ನು ಮನವರಿಕೆ ಮಾಡಿಕೊಡಲು ಸರ್ಕಾರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಿದೆ ಎಂದು ಮುಖ್ಯಮಂತ್ರಿ ಡಿ.ಕೆ....

Read moreDetails
ಪೌರ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಪತ್ರಕರ್ತರ ನಿಯೋಗ ಸಿಎಂಗೆ ಮನವಿ

ಪೌರ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಪತ್ರಕರ್ತರ ನಿಯೋಗ ಸಿಎಂಗೆ ಮನವಿ

September 21, 2026
ಮೆಟ್ರೋ ಪ್ರಯಾಣಕ್ಕೆ ಆನ್‌ಲೈನ್ ಟಿಕೆಟ್‌; ಲಗೇಜ್ ಟಿಕೆಟ್‌ಗೆ ಮಾತ್ರ ಕ್ಯೂ! ಹಬ್ಬದ ವೇಳೆ ಪ್ರಯಾಣಿಕರ ಪರದಾಟ

ಮೆಟ್ರೋ ಪ್ರಯಾಣಕ್ಕೆ ಆನ್‌ಲೈನ್ ಟಿಕೆಟ್‌; ಲಗೇಜ್ ಟಿಕೆಟ್‌ಗೆ ಮಾತ್ರ ಕ್ಯೂ! ಹಬ್ಬದ ವೇಳೆ ಪ್ರಯಾಣಿಕರ ಪರದಾಟ

September 11, 2026
ಗುಲಬರ್ಗಾ ವಿ. ವಿ 47ನೇಯ ಸಂಸ್ಥಾಪನಾ ದಿನಾಚರಣೆ

ಗುಲಬರ್ಗಾ ವಿ. ವಿ 47ನೇಯ ಸಂಸ್ಥಾಪನಾ ದಿನಾಚರಣೆ

September 10, 2026
‘ನಾನು ಭಾರತದಿಂದ ಪರಾರಿಯಾಗಿಲ್ಲ; ಕೇಂದ್ರದ ವಿರುದ್ಧ ವಿಜಯ್ ಮಲ್ಯ ಕಿಡಿ

‘ನಾನು ಭಾರತದಿಂದ ಪರಾರಿಯಾಗಿಲ್ಲ; ಕೇಂದ್ರದ ವಿರುದ್ಧ ವಿಜಯ್ ಮಲ್ಯ ಕಿಡಿ

September 9, 2026
Next Post
ರಾಜ್ಯದಲ್ಲಿ ಎಲ್ಲೆಲ್ಲಿ ಮಳೆ ಆರ್ಭಟ ಹೇಗಿದೆ..?

ರಾಜ್ಯದಲ್ಲಿ ಎಲ್ಲೆಲ್ಲಿ ಮಳೆ ಆರ್ಭಟ ಹೇಗಿದೆ..?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada