ಬೆಂಗಳೂರು: ಇಲ್ಲಿಯವರೆಗೂ ಪ್ರಚಾರದ ಭರಾಟೆಯಲ್ಲಿದ್ದ ನಾಯಕರು ಈಗ ರಿಲ್ಯಾಕ್ಸ್ ಮೂಡ್ ಗೆ ತೆರಳುತ್ತಿದ್ದಾರೆ. ಈಗ ಚುನಾವಣೆ ಪ್ರಚಾರದಿಂದ ಬಳಲಿ ಬೆಂಡಾಗಿರುವ ಸಿಎಂ ಸಿದ್ದರಾಮಯ್ಯ ಅವರು ಈಗ ರಿಲ್ಯಾಕ್ಸ್ ಮೂಡ್ ಗೆ ಜಾರಿಗೆದ್ದಾರೆ. ಈಗ ಅವರು ಊಟಿಗೆ ಪ್ರಯಾಣ ಬೆಳೆಸಿದ್ದಾರೆ.
![](https://pratidhvani.com/wp-content/uploads/2024/04/siddaramaiah-1-1-1024x576.webp)
ಹೆಚ್ಎಎಲ್ನಿಂದ (HAL) ಮೈಸೂರಿಗೆ ಪ್ರಯಾಣ ಬೆಳೆಸಿ ಅಲ್ಲಿಂದ ಊಟಿಗೆ (Ooty) ತೆರಳಲಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಮೂರು ದಿನಗಳ ಕಾಲ ಊಟಿಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ ಎನ್ನಲಾಗಿದೆ. ಇದಕ್ಕೂ ಮುನ್ನ ಸಿಎಂ ಅವರನ್ನು ಸಚಿವರಾದ ರಾಮಲಿಂಗಾರೆಡ್ಡಿ, ಮಹದೇವಪ್ಪ, ರಾಜಣ್ಣ ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಎರಡನೇ ಹಂತದ ಮತದಾನದ ಬಗ್ಗೆ ಚರ್ಚಿಸಿದ್ದಾರೆ. ಆದರೆ, ಸಿದ್ದರಾಮಯ್ಯ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಹೊರಟು ಹೋಗಿದ್ದಾರೆ.
![](https://pratidhvani.com/wp-content/uploads/2024/04/SIDDARAMAIAH-2.webp)
ಇನ್ನೊಂದೆಡೆ ಡಿಕೆಶಿ ತಮ್ಮ ಕುಟುಂಬದೊಂದಿಗೆ ಚಿಕ್ಕಮಗಳೂರು ರೆಸಾರ್ಟ್ ಗೆ ತೆರಳಿ ವಾಸ್ತವ್ಯ ಹೂಡಲಿದ್ದಾರೆ.