ಬೆಂಗಳೂರು: ರಾಜ್ಯದಲ್ಲಿ ಎರಡನೇ ಹಾಗೂ ಅಂತಿಮ ಹಂತದ ಮತದಾನ ಆರಂಭವಾಗಿದೆ. ಎಲ್ಲೆಡೆ ಮತದಾರ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸುತ್ತಿದ್ದಾನೆ.
ಕೊನೆಯ ಲೋಕಸಭೆ ಚುನಾವಣೆಗೆ (Loksabha Elections 2024) ಉತ್ತರ ಕರ್ನಾಟಕದ (UttarKarnataka) 14 ಲೋಕಸಭೆ ಕ್ಷೇತ್ರಗಳಲ್ಲಿ ಮತದಾನ ಜರುಗಲಿದೆ.
21 ಮಹಿಳೆಯರು ಸೇರಿದಂತೆ 227 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಬ್ಬರು ಮಾಜಿ ಮುಖ್ಯಮಂತ್ರಿಗಳು, ಇಬ್ಬರು ಕೇಂದ್ರ ಸಚಿವರು, ರಾಷ್ಟ್ರೀಯ ಪಕ್ಷದ ಅಧ್ಯಕ್ಷರೊಬ್ಬರ ಅಳಿಯ, ನಾಲ್ವರು ಸಚಿವರ ಮಕ್ಕಳು, ಓರ್ವ ಸಚಿವರ ಸಹೋದರಿ, ಓರ್ವ ಮಂತ್ರಿಯ ಪತ್ನಿ, ಹಾಲಿ ಸಂಸದರ ಪತ್ನಿ ಕಣದಲ್ಲಿದ್ದಾರೆ.
ಅಖಾಡದಲ್ಲಿರುವವರನ್ನು ಗಮನಿಸುವುದಾದರೆ….
ಶಿವಮೊಗ್ಗ: ರಾಘವೇಂದ್ರ(ಬಿಜೆಪಿ) V/s ಗೀತಾ ಶಿವರಾಜ್ಕುಮಾರ್(ಕಾಂಗ್ರೆಸ್) V/s ಈಶ್ವರಪ್ಪ (ಬಿಜೆಪಿ ಬಂಡಾಯ)
ಬೆಳಗಾವಿ: ಜಗದೀಶ್ ಶೆಟ್ಟರ್(ಬಿಜೆಪಿ) V/s ಮೃಣಾಲ್ ಹೆಬ್ಬಾಳ್ಕರ್ (ಕಾಂಗ್ರೆಸ್)
ಬೀದರ್: ಭಗವಂತ್ ಖೂಬಾ(ಬಿಜೆಪಿ) V/sಸಾಗರ್ ಖಂಡ್ರೆ (ಕಾಂಗ್ರೆಸ್)
ಚಿಕ್ಕೋಡಿ: ಅಣ್ಣಾ ಸಾಹೇಬ್ ಜೊಲ್ಲೆ (ಬಿಜೆಪಿ) V/s ಪ್ರಿಯಾಂಕಾ ಜಾರಕಿಹೊಳಿ (ಕಾಂಗ್ರೆಸ್)
ಬಾಗಲಕೋಟೆ: ಪಿಸಿ ಗದ್ದೀಗೌಡರ್(ಬಿಜೆಪಿ) V/s ಸಂಯುಕ್ತಾ ಪಾಟೀಲ್ (ಕಾಂಗ್ರೆಸ್)
ಉತ್ತರ ಕನ್ನಡ: ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ) V/s ಅಂಜಲಿ ನಿಂಬಾಳ್ಕರ್ (ಕಾಂಗ್ರೆಸ್)
ಧಾರವಾಡ: ಪ್ರಲ್ಹಾದ್ ಜೋಶಿ (ಬಿಜೆಪಿ) V/s ವಿನೋದ್ ಅಸೂಟಿ (ಕಾಂಗ್ರೆಸ್)
ಹಾವೇರಿ: ಬಸವರಾಜ ಬೊಮ್ಮಾಯಿ (ಬಿಜೆಪಿ) V/s ಆನಂದ್ ಗಡ್ಡದೇವರಮಠ (ಕಾಂಗ್ರೆಸ್)
ಕಲಬುರಗಿ: ರಾಧಾಕೃಷ್ಣ (ಕಾಂಗ್ರೆಸ್) V/s ಉಮೇಶ್ ಜಾಧವ್ (ಬಿಜೆಪಿ)
ದಾವಣಗೆರೆ: ಗಾಯತ್ರಿ ಸಿದ್ದೇಶ್ವರ್(ಬಿಜೆಪಿ) V/s ಪ್ರಭಾ ಮಲ್ಲಿಕಾರ್ಜುನ್(ಕಾಂಗ್ರೆಸ್) V/s ವಿನಯ್(ಕಾಂಗ್ರೆಸ್ ಬಂಡಾಯ)
ಬಳ್ಳಾರಿ: ಶ್ರೀರಾಮುಲು (ಕಾಂಗ್ರೆಸ್) V/s ಇ.ತುಕಾರಾಂ (ಕಾಂಗ್ರೆಸ್)
ಕೊಪ್ಪಳ: ಬಸವರಾಜ್ ಕ್ಯಾವಟೋರ್ (ಬಿಜೆಪಿ) V/s ರಾಜಶೇಖರ್ ಹಿಟ್ನಾಳ್ (ಕಾಂಗ್ರೆಸ್)
ವಿಜಯಪುರ: ರಮೇಶ್ ಜಿಗಜಿಣಗಿ(ಬಿಜೆಪಿ) V/s ರಾಜು ಆಲಗೂರ (ಕಾಂಗ್ರೆಸ್)
ರಾಯಚೂರು: ರಾಜಾ ಅಮರೇಶ್ವರ ನಾಯಕ್ (ಬಿಜೆಪಿ) V/s ಕುಮಾರನಾಯಕ್ (ಕಾಂಗ್ರೆಸ್) ಕಣದಲ್ಲಿದ್ದಾರೆ. ಎಲ್ಲೆಡೆ ಶಾಂತಿಯಿಂದ ಮತದಾನ ನಡೆಯುತ್ತಿದೆ.