ಮಹಿಳೆಯರ ಬಗ್ಗೆ ಕೀಳು ಹೇಳಿಕೆ ನೀಡಿದ್ದಾರೆಂದು ನಟಿ ಶೃತಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಮಹಿಳೆಯರು ಉಚಿತ ಬಸ್ ನಲ್ಲಿ ಎಲ್ಲೆಲ್ಲೋ ಸುತ್ತಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಹೀಗಾಗಿ ಶ್ರುತಿಗೆ ಮಹಿಳಾ ಆಯೋಗದಿಂದ ನೋಟಿಸ್ ನೀಡಲಾಗಿದೆ.ನಟಿ ಶ್ರುತಿ ನೀಡಿದ್ದ ಹೇಳಿಕೆ ಖಂಡಿಸಿ ಸಾಮಾಜಿಕ ಕಾರ್ಯಕರ್ತ ಮನೋಹರ್ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ದೂರಿನ ಅನ್ವಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಶೃತಿಗೆ ನೊಟೀಸ್ ನೀಡಿದ್ದಾರೆ. ಶೃತಿ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದೆ.
ಬಸ್ಸಿನ ಸೀಟಿಗೋಸ್ಕರ ಹೆಣ್ಮಕ್ಕಳು ಜುಟ್ಟು ಹಿಡಿದುಕೊಂಡು ಹೊಡೆದಾಡುವಂತೆ ಮಾಡಿದ್ದೀರಿ. ನನ್ನ ಹೆಂಡತಿ ಎಲ್ಲಿಗೆ ಹೋದಳೋ ಗೊತ್ತಿಲ್ಲ ಅಂತ ಎಷ್ಟೋ ಮನೆಯ ಗಂಡಸರು ಅಳ್ತಾ ಇದಾರೆ. ಎಷ್ಟೋ ಮನೆಯಲ್ಲಿ ಮಕ್ಕಳು ಉಪವಾಸ ಬಿದ್ದಿದ್ದಾರೆ. ಫ್ರೀ ಬಸ್ ಕೊಟ್ಟರು ಅಂದ ತಕ್ಷಣ ಹೆಣ್ಮಳ್ಳಲು ಎಲ್ಲೆಲ್ಲೋ ಹೋಗುತ್ತಿದ್ದಾರೆ. ತೀರ್ಥಯಾತ್ರೆಗೆ ಹೋಗಬೇಕು ಎಂಬ ನೆಪದಲ್ಲಿ ಎಲ್ಲಿಗೆ ಹೋಗಬೇಕು ಎಂಬುದು ಕೂಡ ಗೊತ್ತಿಲ್ಲ. ಗೊತ್ತು-ಗುರಿ ಇಲ್ಲದಂತೆ ಮಾಡಿದ್ದಾರೆ ಎಂದು ಟೀಕಿಸಿದ್ದರು. ಈ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ.
ಮಹಿಳೆಗೆ ರಕ್ಷಣೆ ಇರಬೇಕು. ಆಕರ್ಷಣೆ ಅಲ್ಲ. ಸೀತೆಗೆ ಲಕ್ಷ್ಮಣರೇಖೆ ಹಾಕಿದಾಗ ಆಕೆಯ ಎದುರಿಗೆ ಕಂಡಿದ್ದು ಬಂಗಾರದ ಚಿಂಕೆ. ಆದರೂ ಆಕೆ ಲಕ್ಷ್ಮಣರೇಖೆಯನ್ನು ದಾಡಿದಳು. ನಂತರ ಅವಳ ಅಪಹರಣ ಆಯಿತು. ಇಂದು ಕಾಂಗ್ರೆಸ್ ಕೊಡುತ್ತಿರುವ ಬಿಟ್ಟಿ ಭಾಗ್ಯಗಳು ಕೂಡ ಬಂಗಾರದ ಚಿಂತೆಯ ರೀತಿ. ಆ ಪಕ್ಷದವರು ಅಪಹರಣ ಮಾಡುತ್ತಾರೆ ಎಂದು ಟೀಕಿಸಿದ್ದರು.