ಪ್ರತಿಯೊಬ್ಬರಿಗೂ ಕೂಡ ಬಾಯಲ್ಲಿ ಹುಣ್ಣು ಆಗಿರುತ್ತೆ. ಹುಣ್ಣು ಅಥವಾ ಅಲ್ಸರ್ ಅಂತಾನು ಹೇಳಬಹುದು. ಅಲ್ಸರ್ ಆಗೋದು ಯಾಕೆ ಅಂದ್ರೆ ನಮ್ಮ ದೇಹದಲ್ಲಿ ಉಷ್ಣತೆ ಜಾಸ್ತಿಯಾದಾಗ.ಜೊತೆಗೆ ನಾವೇನಾದ್ರೂ ತಿನ್ಬೇಕಾದ್ರೆ ಆಕ್ಸಿಡೆಂಟ್ ಲಿ ನಮ್ಮ ಕೆನ್ನೆಯನ್ನು ಅಥವಾ ನಾಲಿಗೆಯನ್ನು ಕಚ್ಚಿದಾಗ ಹುಣ್ಣಾಗುವಂತ ಚಾನ್ಸಸ್ ಇರುತ್ತೆ..

ಬಾಯಲ್ಲಿ ಹುಣ್ಣಾದಾಗ ನಮಗೆ ಏನು ಊಟ ಮಾಡೋದಿಕ್ಕಾಗಲ್ಲ ಸ್ಪೆಷಲ್ ಸ್ವಲ್ಪ ಖಾರ ಇರುವಂತಹ ಆಹಾರವನ್ನ ತಿಂದ್ರೆ ತುಂಬಾನೇ ಉರಿ ಆಗುತ್ತೆ ..ಜೊತೆಗೆ ಹುಣ್ಣಾದ ಜಾಗದಲ್ಲಿ ಫುಲ್ ಕೆಂಪಾಗಿರುತ್ತೆ ಹಾಗೂ ಕೆಲವೊಬ್ಬರಿಗೆ ಪಸ್ ಕೂಡ ಆಗುತ್ತೆ.. ಅಲ್ಸರಾದಾಗ ದುಬಾರಿ ಕರ್ಚು ಮಾಡಿ ಟ್ರೀಟ್ಮೆಂಟ್ ತಗೋಬೇಕು ಅನ್ನೋದಕ್ಕಿಂತ ಹೋಂ ರೆಮಿಡೀಸ್ ನ ಮಾಡಬಹುದು..

ಲವಂಗದ ಎಣ್ಣೆ
ಲವಂಗ ಅಥವಾ ಲವಂಗದ ಎಣ್ಣೆಯು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಮತ್ತು ಇದು ಅತ್ಯಂತ ಪರಿಣಾಮಕಾರಿಯಾಗಿದ್ದು ಬಾಯಲ್ಲಿ ಹುಣ್ಣಾಗಿದ್ದರೆ ಒಳ್ಳೆಯ ಮನೆಮದ್ದು ಇದು. ಲವಂಗದಲ್ಲಿ ಯೋಜಿನಾಲ್ ಮತ್ತು ಆಂಟಿ ಮೈಕ್ರೋಬಿಯಲ್ ಅನ್ನೋ ಹೊಂದಿದೆ.. ಹಾಗಾಗಿ ಬಾಯಲ್ಲಿ ಹುಣ್ಣಾಗಿದ್ದರೆ ಅದರಿಂದ ನೋವು ಕಾಡ್ತಾ ಇದ್ರೆ ಆ ನೋವನ್ನ ಹೀಲ್ ಮಾಡುವುದಕ್ಕೆ ಲವಂಗದ ಎಣ್ಣೆ ಅಥವಾ ಲವಂಗ ತುಂಬಾನೇ ಉಪಕಾರಿ. ಹಾಗೂ ಹಲ್ಲು ನೋವಿದ್ದರೂ ಕೂಡ ಹಲ್ಲು ನೋವನ್ನು ತಕ್ಷಣವೇ ಕಡಿಮೆ ಮಾಡುತ್ತೆ ಈ ಲವಂಗದ ಎಣ್ಣೆಯನ್ನು ದಿನಕ್ಕೆ ಎರಡರಿಂದ ಮೂರು ಬಾರಿ ಅಲ್ಸರಾದ ಜಾಗಕ್ಕೆ ಹಚ್ಚಬೇಕು..

ಚಿಯಾ ಸೀಡ್ಸ್
ನಮ್ಮ ದೇಹದಲ್ಲಿ ಉಷ್ಣತೆ ಜಾಸ್ತಿಯಾದಾಗ ಬಾಯಲ್ಲಿ ಅಲ್ಸರ್ ಆಗುವಂತ ಚಾನ್ಸಸ್ ಹೆಚ್ಚಿರುತ್ತೆ. ಜ್ವರ ಬಂದಾಗಲೂ ಕೂಡ ನಮ್ಮ ಬಾಯಲ್ಲಿ ಅಲ್ಸರ್ ಆಗುತ್ತದೆ ಹಾಗಾಗಿ ನಮ್ಮ ದೇಹವನ್ನು ತಂಪು ಮಾಡುವುದಕ್ಕೆ ಚಿಯಾ ಬೀಜಗಳು ತುಂಬಾನೇ ಉಪಕಾರಿ. ಚಿಯಾ ಸೀಡ್ಸ್ ಅನ್ನ ಒಂದು ಲೋಟ ನೀರಿಗೆ ಹಾಕಿ ಕುಡಿಯೋದ್ರಿಂದ ಬೇಗನೆ ಅಲ್ಸರ್ ಆಗಿರುವಂಥದ್ದು ಕಡಿಮೆ ಆಗುತ್ತೆ..

ಬೆಳ್ಳುಳ್ಳಿ
ಬಾಯಲ್ಲಿ ಅಲ್ಸರ್ ಆದ ಸಂದರ್ಭದಲ್ಲಿ ಬೆಳ್ಳುಳ್ಳಿಯ ರಸವನ್ನ ಬಾಯಲ್ಲಿ ಇಟ್ಟುಕೊಳ್ಳುವುದರಿಂದ ಅಲ್ಸರ್ ಬೇಗನೆ ಕಡಿಮೆಯಾಗುತ್ತದೆ .ಇನ್ನು ಬೆಳ್ಳುಳ್ಳಿಯಲ್ಲಿ ಆಂಟಿ ಮೈಕ್ರೋಬಿಯಲ್ ಮತ್ತು ಆಂಟಿ ಬ್ಯಾಕ್ಟೀರಿಯ ಅಂಶಗಳು ಜಾಸ್ತಿ ಇರುತ್ತೆ ಇದು. ಇದು ಬ್ಯಾಕ್ಟೀರಿಯಗಳನ್ನ ನಾಶ ಮಾಡಲು ಸಹಾಯ ಮಾಡುತ್ತದೆ.. ಅಲ್ಸರಾದ ಸಂದರ್ಭದಲ್ಲಿ ಬೆಳ್ಳುಳ್ಳಿಯನ್ನ ಇಟ್ಟುಕೊಳ್ಳುವುದರಿಂದ ಸ್ವಲ್ಪಮಟ್ಟಿಗೆ ಉರಿ ಆಗ್ಬಹುದು ಆದರೆ ಬೇಗನೆ ಅಲ್ಸರ್ ಕಡಿಮೆ ಆಗುತ್ತದೆ..

ಅಲೋವೆರಾ
ಅಲೋವೆರವನ್ನು ಸಾಕಷ್ಟು ಮದ್ದುಗಳಲ್ಲಿ ಕೂಡ ಉಪಯೋಗಿಸುತ್ತಾರೆ .ನಮ್ಮ ದೇಹವನ್ನು ತಂಪಾಗಿಡಿಸಲು ಅಲೋವೆರಾ ತುಂಬಾನೇ ಉಪಯುಕ್ತ .ಬಾಯಲ್ಲಿ ಹುಣ್ಣಾದಾಗ ಅಲೋವೆರಾ ಅಥವಾ ಅಲೋವೆರ ಜೆಲ್ ಅನ್ನ ಹಚ್ಚುವುದರಿಂದ ಬೇಗನೆ ಅಲ್ಸರ್ ಕಡಿಮೆ ಆಗುತ್ತೆ ..ಇದನ್ನ ದಿನಕ್ಕೆ 5 ರಿಂದ 6 ಬಾರಿ ಮಾಡುವುದು ಉಪಯುಕ್ತ ಹಾಗೂ ಅಲೋವೆರವನ್ನು ಹಚ್ಚಿದಾಗ ತಕ್ಷಣ ಅಲ್ಸರ್ ಕಡಿಮೆ ಆಗುತ್ತದೆ..

ಒಟ್ಟಿನಲ್ಲಿ ಅಲ್ಸರಾದಾಗ ನಮಗೆ ಯಾವುದೇ ರೀತಿ ಆಹಾರವನ್ನು ತಿನ್ನೋದಕ್ಕೆ ಆಗಲ್ಲ ಅದ್ರಲ್ಲೂ ಕೂಡ ಕಾರ ಮತ್ತು ಹುಳಿ ಇರುವಂತ ಆಹಾರವನ್ನು ತಿನ್ನೋದ್ರಿಂದ ಉರಿ ಅಥವಾ ನೋವು ಜಾಸ್ತಿ ಆಗುತ್ತೆ ಹಾಗಾಗಿ ನೀವು ಮೊಸರು ಅಥವಾ ಹಾಲನ್ನ ಹೆಚ್ಚಾಗಿ ಬಳಸಿ.