ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಮೊದಲನೇ ಹಂತದ ಮತದಾನ ಇನ್ನೇನು ಮುಕ್ತಾಯ ಹಂತ ತಲುಪಿದೆ. 21 ರಾಜ್ಯಗಳ, 102 ಸ್ಥಾನಗಳಿಗೆ ಮತದಾನ ನಡೀತಾಯಿದ್ದು, ಒಟ್ಟಾರೆ 1,625 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ತಮಿಳುನಾಡು, ರಾಜಸ್ಥಾನ, ಉತ್ತರ ಪ್ರದೇಶ ಸೇರಿ ಪ್ರಮುಖ ರಾಜ್ಯಗಳಲ್ಲಿ ಈ ದಿನ ಮತದಾನ ನಡೆಯುತ್ತಿದೆ. ಮತಗಟ್ಟೆ ಸುತ್ತಮುತ್ತ ಹದ್ದಿನ ಕಣ್ಣಿಡಲಾಗಿದ್ದು, ಭಾರಿ ಭದ್ರತೆ ಕೈಗೊಳ್ಳಲಾಗಿದೆ. ತಮಿಳುನಾಡು ರಾಜ್ಯದಲ್ಲಿ ಒಟ್ಟು ಎಲ್ಲಾ 39 ಲೋಕಸಭಾ ಕ್ಷೇತ್ರ, ರಾಜಸ್ಥಾನದ 25 ಸ್ಥಾನಗಳ ಪೈಕಿ 12, ಉತ್ತರ ಪ್ರದೇಶದ 80 ಸ್ಥಾನಗಳ ಪೈಕಿ 8 ಸ್ಥಾನಕ್ಕೆ, ಮಧ್ಯಪ್ರದೇಶದ 29 ಸ್ಥಾನಗಳ ಪೈಕಿ 6 ಸ್ಥಾನಕ್ಕೆ, ಮಹಾರಾಷ್ಟ್ರದಲ್ಲಿ 48 ಸ್ಥಾನಗಳ ಪೈಕಿ 5 ಸ್ಥಾನಕ್ಕೆ, ಉತ್ತರಾಖಂಡದ ಎಲ್ಲಾ 5 ಸ್ಥಾನಕ್ಕೆ, ಅಸ್ಸಾಂ 14 ಸ್ಥಾನಗಳ ಪೈಕಿ 5 ಸ್ಥಾನಕ್ಕೆ, ಬಿಹಾರ ರಾಜ್ಯದಲ್ಲಿ ಒಟ್ಟು 40 ಸ್ಥಾನಗಳ ಪೈಕಿ 4 ಸ್ಥಾನಗಳಿಗೆ ಮತದಾನ ನಡೀತಾಯಿದೆ. ಪಶ್ಚಿಮ ಬಂಗಾಳ ರಾಜ್ಯದ 42 ಸ್ಥಾನಗಳ ಪೈಕಿ 3 ಸ್ಥಾನಗಳಿಗೆ, ಅರುಣಾಚಲ ಪ್ರದೇಶದ 2 ಸ್ಥಾನಗಳ ಪೈಕಿ ಎಲ್ಲಾ 2 ಸ್ಥಾನಕ್ಕೆ, ಮಣಿಪುರದಲ್ಲಿ 2 ಸ್ಥಾನಗಳ ಪೈಕಿ ಎಲ್ಲಾ 2 ಸ್ಥಾನಕ್ಕೆ ಚುನಾವಣೆ ನಡೀತಾಯಿದೆ. ಹಾಗೇ ಮೇಘಾಲಯದ 2 ಸ್ಥಾನಗಳ ಪೈಕಿ ಎಲ್ಲಾ 2, ಛತ್ತೀಸ್ಘಡದ 11 ಸ್ಥಾನಗಳ ಪೈಕಿ 1 ಸ್ಥಾನಕ್ಕೆ, ಮಿಜೋರಾಂ ರಾಜ್ಯದ ಎಲ್ಲಾ 1 ಸ್ಥಾನಕ್ಕೆ, ನಾಗಾಲ್ಯಾಂಡ್ ರಾಜ್ಯದ ಎಲ್ಲಾ 1 ಸ್ಥಾನಕ್ಕೆ, ಸಿಕ್ಕಿಂನ ಎಲ್ಲಾ 1 ಸ್ಥಾನಕ್ಕೆ, ತ್ರಿಪುರದ 2 ಸ್ಥಾನಗಳ ಪೈಕಿ 1 ಸ್ಥಾನಕ್ಕೆ ಎಲೆಕ್ಷನ್ ಸಾಗಿದೆ. ಜಮ್ಮು ಮತ್ತು ಕಾಶ್ಮೀರದ 5 ಸ್ಥಾನಗಳ ಪೈಕಿ 1 ಸ್ಥಾನಕ್ಕೆ ಮತದಾನವು ಭಾರಿ ಭದ್ರತೆಯಿಂದ ನಡೆಯುತ್ತಿದೆ. ಇನ್ನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಎಲ್ಲಾ 1 ಸ್ಥಾನ, ಲಕ್ಷದ್ವೀಪದ ಎಲ್ಲಾ 1 ಸ್ಥಾನಕ್ಕೆ, ಪುದುಚೇರಿಯ ಒಂದು ಕ್ಷೇತ್ರಕ್ಕೆ ವೋಟಿಂಗ್ ಸಾಗ್ತಿದೆ.
BREAKING NEWS : ಭಾರತಕ್ಕೆ ಬಹುದೊಡ್ಡ ರಾಜತಾಂತ್ರಿಕ ಗೆಲುವು ; ತೈಲ ಸಮಸ್ಯೆಗೆ ಪರಿಹಾರ ನೀಡಿದ ಕೇಂದ್ರ ಸರ್ಕಾರ..
ಬೆಂಗಳೂರು : ಅಂತರಾಷ್ಟ್ರೀಯ ಮಟ್ದಲ್ಲಿ ಭಾರತಕ್ಕೆ ರಾಜತಾಂತ್ರಿಕ ಬಹುದೊಡ್ಡ ಗೆಲುವಾಗಿದೆ. ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಎದುರಾಗಿರುವ ತೈಲ ಹಾಗೂ ಗ್ಯಾಸ್ ಸಿಲಿಂಡರ್‌ಗಳ ಅಭಾವದ ಹಿನ್ನೆಲೆಯಲ್ಲಿ ನಡೆದಿರುವ...
Read moreDetails





