ಬೇಸಿಗೆ ಶುರುವಾಯ್ತು ಈ ಸುಡುವ ಬಿಸಿಲಿಗೆ ಮನೆಯ ಒಳಗಿದೆ ಸೂರ್ಯನ ತಾಪಕ್ಕೆ ಸಾಕಷ್ಟು ಬಾರಿ ನೀರನ್ನ ಕುಡಿತೀವಿ.. ಇನ್ನೇನಾದ್ರೂ ಹೊರಗಡೆ ಇಂದ ಮನೆಗೆ ಬಂದ್ರೆ ನಾವು ಮಾಡುವ ಮೊದಲ ಕೆಲಸವೆಂದರೆ ನೀರು ಕುಡಿಯೋದು ಅದು ಕೂಡ ನಾರ್ಮಲ್ ನೀರಲ್ಲ ರೆಫ್ರಿಜರೇಟರ್ನಿಂದ ನೇರವಾಗಿ ಒಂದು ಲೋಟ ತಣ್ಣಗಾದ ನೀರನ್ನು ಕುಡಿಯುವುದು. ಆದ್ರೆ ಈ ಫ್ರಿಡ್ಜ್ ನೀರನ್ನ ಕುಡಿಯೋದ್ರಿಂದ ಸಾಕಷ್ಟು ತೊಂದರೆಗೆ ಒಳಗಾಗ್ತಿವಿ..ಏನೆಲ್ಲ ಸಮಸ್ಯೆಗಳು ಅಂದ್ರೆ..

ಗಂಟಲು ನೋವು
ಬೇಸಿಗೆಕಾಲದಲ್ಲಿ ಸಾಮಾನ್ಯವಾಗಿ ಈ ಗಂಟಲು ನೋವು ಅಥವಾ ಕಿರಿಕಿರಿ ಬರುವುದು ಕಡಿಮೆ.. ಕಾರಣ ದೇಹದಲ್ಲಿ ಉಷ್ಣತೆ ಹೆಚ್ಚಿರತ್ತೆ..ಆದ್ರೆ ಫ್ರಿಡ್ಜ್ ಅಲ್ಲಿ ಇರುವಂತಹ ತಣ್ಣೀರು ಕುಡಿಯುವುದರಿಂದ ಗಂಟಲಿನ ಕಿರಿಕಿರಿಯನ್ನು ಉಂಟುಮಾಡಬಹುದು, ವಿಶೇಷವಾಗಿ ಸೂಕ್ಷ್ಮ ಗಂಟಲು ಹೊಂದಿರುವ ಜನರಿಗೆ. ಇದು ಗಂಟಲಿನ ಸ್ನಾಯುಗಳು ಸಂಕುಚಿತಗೊಳ್ಳಲು ಕಾರಣವಾಗಬಹುದು, ಗಂಟಲಿನಲ್ಲಿ ಅಲ್ಸರ್ ಆದ್ರೆ ನುಂಗಲು ಕಷ್ಟವಾಗುತ್ತದೆ.

ಲೋಳೆಯ(Mucus)ಉತ್ಪಾದನೆಯನ್ನು ಹೆಚ್ಚಿಸಬಹುದು:
ತಣ್ಣೀರು ಕುಡಿಯುವುದರಿಂದ ಉಸಿರಾಟದ ವ್ಯವಸ್ಥೆಯಲ್ಲಿ ಲೋಳೆಯ ಉತ್ಪಾದನೆಯನ್ನು ಹೆಚ್ಚಿಸಬಹುದು. ಇದು ಆಸ್ತಮಾ ಅಥವಾ ಅಲರ್ಜಿಯಂತಹ ಉಸಿರಾಟದ ಸಮಸ್ಯೆಗಳಿರುವ ಜನರಿಗೆ ಉಸಿರಾಡಲು ಕಷ್ಟವಾಗುತ್ತದೆ.

ಜೀರ್ಣಕ್ರಿಯೆಯನ್ನು ನಿಧಾನಗೊಳಿಸಬಹುದು:
ತಣ್ಣೀರು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಹೆಚ್ಚು ತಣ್ಣೀರು ಕುಡಿಯುವುದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ನಾವು ತಿಂದ ಆಹಾರದಿಂದ ಕೊಬ್ಬನ್ನು ಗಟ್ಟಿಗೊಳಿಸುತ್ತದೆ ಮತ್ತು ತಿಂದ ಆಹಾರ ದೇಹದಿಂದ ಹೊರಬರುವ ಪ್ರಕ್ರಿಯೆ ಕೂಡ ಕಷ್ಟವಾಗುತ್ತದೆ.

ಇದೆಲ್ಲದರ ಜೊತೆಗೆ ಕೆಮ್ಮು ,ಶೀತ ,ತಲೆನೋವು ಹಾಗೂ ಕಫಾ ಕೂಡ ಶುರುವಾಗತ್ತೆ..ಇನ್ನು ವಿವಿಧ ಸಂಶೋಧನೆಗಳು ಮತ್ತು ಆಯುರ್ವೇದ ಕೂಡ ಫ್ರಿಡ್ಜ್ ನೀರು ನಮ್ಮ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ ಮತ್ತು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಹೇಳಿಕೊಂಡಿದೆ.

ಬೇಸಿಗೆಯಲ್ಲಿ ನಮ್ಮ ದೇಹದ ಉಷ್ಣತೆ ಹೆಚ್ಚಿರುತ್ತದೆ ಈ ಸಂದರ್ಭದಲ್ಲಿ ಅತಿಯಾದ ತಣ್ಣೀರನ್ನು ಕುಡಿಯುವುದರಿಂದ ಇಷ್ಟೆಲ್ಲಾ ಸಮಸ್ಯೆಗಳು ಎದುರಾಗುತ್ತದೆ ಹಾಗಾಗಿ ಫ್ರಿಡ್ಜ್ ನಲ್ಲಿ ಇಟ್ಟಿರುವ ನೀರನ್ನು ಗುಡ್ ಬೈ ಹೇಳಿ..