• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇತರೆ / Others

ಕೆಆರ್‌ಎಸ್ ಸುತ್ತಮುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಪರೀಕ್ಷಾರ್ಥ ಸ್ಫೋಟಕ್ಕೆ ಇಂದು ಜಾಗ ಪರಿಶೀಲನೆ

Any Mind by Any Mind
March 5, 2024
in ಇತರೆ / Others, ಇದೀಗ, ಕರ್ನಾಟಕ
0
ಕೆ.ಆರ್‌.ಎಸ್‌ ಭರ್ತಿಗೆ 3 ಅಡಿ ಬಾಕಿ
Share on WhatsAppShare on FacebookShare on Telegram

ಕೆಆರ್‌ಎಸ್(KRS) ಸುತ್ತಮುತ್ತ ೨೦ ಕಿ.ಮೀ. ವ್ಯಾಪ್ತಿಯಲ್ಲಿ ಪರೀಕ್ಷಾರ್ಥ(Testing) ಸ್ಫೋಟ(Blast) ನಡೆಸುವಂತೆ ಉಚ್ಚ ನ್ಯಾಯಾಲಯ(High Court) ಆದೇಶ ನೀಡಿರುವ ಹಿನ್ನೆಲೆಯಲ್ಲಿ ಜಾರ್ಖಂಡ್‌(Jharkhand)ನ ವಿಜ್ಞಾನಿಗಳು ಹಾಗೂ ತಜ್ಞರ ತಂಡ ಇಂದು(ಮಾ.5) ಮಂಡ್ಯ(Mandya) ಜಿಲ್ಲೆಗೆ ಆಗಮಿಸುತ್ತಿದೆ.

ಆರು ತಿಂಗಳೊಳಗೆ ಪ್ರಾಯೋಗಿಕ ಸ್ಫೋಟ ನಡೆಸಿ ವರದಿ ನೀಡುವಂತೆ ಹೈಕೋರ್ಟ್(High Court) ಆದೇಶ ನೀಡಿರುವುದರಿಂದ ಜಿಲ್ಲಾಡಳಿತ ಸಿದ್ಧತೆ ನಡೆಸಿತ್ತು. ಅದರಂತೆ, ರೈತ ಮುಖಂಡರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆ ಸಲಾಗಿತ್ತು. ಆದರೆ ಆ ಪ್ರಯತ್ನ ವಿಫಲವಾಗಿತ್ತು. ಆದರೂ ಜಿಲ್ಲಾಡಳಿತ ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕು ಎಂದು ತಿಳಿಸಿತ್ತು. ಅದರಂತೆ, ಮಾ. 5ರಂದು ಜಾರ್ಖಂಡ್‌ನ ವಿಶೇಷ ತಜ್ಞರ ತಂಡ ಆಗಮಿಸುತ್ತಿದ್ದು, KRS ಸುತ್ತಮುತ್ತ ಪರೀಕ್ಷಾರ್ಥ ಸ್ಫೋಟ ನಡೆಸಲು ಜಾಗ ಪರಿಶೀಲನೆ ನಡೆಸಲಿದೆ ಎಂದು ತಿಳಿದುಬಂದಿದೆ.

ADVERTISEMENT

ತಜ್ಞರು, ರೈತ(Raitha) ಮುಖಂಡರ ಸಭೆ: ಮದ್ದೂರಿನ ಮರಳಿಗ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ(Minister) ಎನ್.ಚಲುವರಾಯಸ್ವಾಮಿ(Cheluvarayaswamy), ಮಂಗಳವಾರ ಪರೀಕ್ಷಾರ್ಥ ಸ್ಫೋಟ ನಡೆಸಲು ತಜ್ಞರು ಆಗಮಿಸುತ್ತಿದ್ದಾರೆ. ನ್ಯಾಯಾಲಯವೂ ಈಗಾಗಲೇ ಪ್ರಾಯೋಗಿಕ ಸ್ಫೋಟ ನಡೆಸುವಂತೆ ಆದೇಶ ನೀಡಿದೆ. ಅದರಂತೆ, ಪರೀಕ್ಷಾರ್ಥ ಸ್ಫೋಟ ಮಾಡಬೇಕಾ? ಬೇಡವಾ? ಎನ್ನುವುದನ್ನು ತಜ್ಞರು ಹಾಗೂ ರೈತರ ಸಭೆಯಲ್ಲಿ ಚರ್ಚಿಸಲಾಗುವುದು. ಪೂರ್ಣ ಪ್ರಮಾಣದಲ್ಲಿ ಸಭೆ ನಡೆಸಿ ಎಲ್ಲರನ್ನೂ ಮನವೊಲಿಸಬೇಕಿದೆ ಎಂದು ತಿಳಿಸಿದ್ದಾರೆ.

ಈ ನಡುವೆ ತಜ್ಞರ ತಂಡದ ಆಗಮನ ಹಾಗೂ ಪರೀಕ್ಷಾರ್ಥ ಸ್ಫೋಟವನ್ನು ವಿರೋಧಿಸಿ ಗೋಬ್ಯಾಕ್(Goback) ಚಳವಳಿ ನಡೆಸಲು ರೈತಸಂಘ ಹಾಗೂ ಬಿಜೆಪಿ ನಿರ್ಧರಿಸಿವೆ. KRS ಜಲಾಶಯದ ಆವರಣದಲ್ಲಿಯೇ ಪ್ರತಿಭಟನೆ, ಧರಣಿ ನಡೆಸಲು ಮುಂದಾಗಿವೆ. ಕೆಆರ್‌ಎಸ್(KRS) ಜಲಾಶಯದ ಸುರಕ್ಷತೆ ಮುಖ್ಯವಾಗಿದೆ. ಯಾವುದೇ ಕಾರಣಕ್ಕೂ ಪರೀಕ್ಷಾರ್ಥ ಸ್ಫೋಟ ನಡೆಸಲು ಬಿಡುವುದಿಲ್ಲ. ಮಂಗಳವಾರ ಗೋಬ್ಯಾಕ್ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. BJPಯೂ ಗೋಬ್ಯಾಕ್ ಚಳವಳಿ ನಡೆಸಲು ಮುಂದಾಗಿದೆ.

#KRS #Dam #Mandya #TrailBlast #BJPKarnataka #SumalathaAmbreesh

Previous Post

ಲೋಕಾಸಭಾ ಚುನಾವಣೆ: ಮಾ.8 ರಂದು ಬಿಜೆಪಿಯ ಎರಡನೇ ಪಟ್ಟಿ ಬಿಡುಗಡೆ ಸಾಧ್ಯತೆ

Next Post

ಚುನಾವಣೆ ಬಂದಾಗ ಬಿಜೆಪಿಗರು ಪಾಕಿಸ್ತಾನ, ಭಯೋತ್ಪಾದನೆ ಹೆಸರಿನಲ್ಲಿ ವೋಟ್ ಪಡೆಯಲು ಮುಂದಾಗುತ್ತಾರೆ

Related Posts

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು
ಕರ್ನಾಟಕ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

by ಪ್ರತಿಧ್ವನಿ
April 23, 2026
0

ಬೆಂಗಳೂರು: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಪ್ರಕಟಿಸಿದೆ. ಈ ಬಾರಿ ಉತ್ತಮ ಫಲಿತಾಂಶ ಬಂದ ಹಿನ್ನೆಲೆ, ಈ ಹಿಂದೆ ಘೋಷಿಸಲಾಗಿದ್ದ ಮೂರನೇ ಪರೀಕ್ಷೆ (Exam-3)...

Read moreDetails
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

April 23, 2026
ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಜಿಲ್ಲಾವಾರು ವಿವರ ಇಲ್ಲಿದೆ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಜಿಲ್ಲಾವಾರು ವಿವರ ಇಲ್ಲಿದೆ

April 23, 2026
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
Next Post
ಸಿದ್ದರಾಮಯ್ಯ ಅವರು ನುಡಿದಂತೆ ನಡೆಯುವ ನಾಯಕರು, ಕಾಂಗ್ರೆಸ್ ಸಂವಿಧಾನ ರಕ್ಷಿಸಿದೆ : ಯತೀಂದ್ರ ಸಿದ್ದರಾಮಯ್ಯ

ಚುನಾವಣೆ ಬಂದಾಗ ಬಿಜೆಪಿಗರು ಪಾಕಿಸ್ತಾನ, ಭಯೋತ್ಪಾದನೆ ಹೆಸರಿನಲ್ಲಿ ವೋಟ್ ಪಡೆಯಲು ಮುಂದಾಗುತ್ತಾರೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada