ಹಿರಿಯ ಲೀಲಾವತಿ ಸಿನಿಮಾಗಳ ಜತೆಗೆ ವೈಯಕ್ತಿಕ ಜೀವನದ ಬಗ್ಗೆಯೂ ಸುದ್ದಿಯಾಗುತ್ತಿದ್ದರು. ಈ ಕುರಿತಾಗಿ ಅವರ ಪುತ್ರ ವಿನೋದ್ ರಾಜ್ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನ, ಅವರು ಹೊರ ಹಾಕಿದ್ದ ಆಕ್ರೋಶ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುವಂತೆ ಮಾಡಿತ್ತು.
ತಮ್ಮ ತಂದೆಯವರ ಕುರಿತಾಗಿನ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಟ ವಿನೋದ್ ರಾಜ್, – ಈ ವಿಚಾರ ತಿಳಿದುಕೊಳ್ಳೋದ್ರಿಂದ ಜಿಎಸ್ ಟಿ ಏನಾದ್ರೂ ಕಡಿಮೆಯಾಗುತ್ತಾ..?ಪೆಟ್ರೋಲ್ ಬೆಲೆ ಕಡಿಮೆ ಆಗುತ್ತಾ? ಅಥವಾ ಬೇರೆ ಯಾವುದಾದ್ರೂ ಸಮಸ್ಯೆ ಪರಿಹಾರವಾಗುತ್ತಾ? ಅಂತ ಆಕ್ರೋಶ ಹೊರಹಾಕಿದ್ದ ವಿನೋದ್ ರಾಜ್, ಈ ಪ್ರಶ್ನೆ ಮಾಡುವವರು ಅವರವರ ಮನೆಯನ್ನು ನೋಡಿಕೊಳ್ಳಿ ಈ ವಿಚಾರ ಯಾಕೆ. ಪದೇ ಪದೇ ಈ ವಿಚಾರ ತೆಗೆಯಬೇಡಿ. ನಾನು ನನ್ನ ತಾಯಿಗೆ ಮಾತು ಕೊಟ್ಟಿದ್ದೇನೆ, ನನ್ನ ತಾಯಿಯೂ ಕೂಡ ಬೇರೆಯವರಿಗೆ ಮಾತು ಕೊಟ್ಟಿದ್ದಾರೆ ನೀವೇ ಅರ್ಥ ಮಾಡಿಕೊಳ್ಳಿ. ಈ ವಿಚಾರ ನನ್ನ ಜೊತೆಗೇ ಮಣ್ಣಾಗಲಿ ಅಂತ ಮಾರ್ಮಿಕವಾಗಿ ಉತ್ತರಿಸಿದ್ರು.