• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಾಕ್ ತಂಡವನ್ನು ಬೆಂಬಲಿಸಿದ ಯುವಕ : ಪೊಲೀಸರು ಮಾಡಿದ್ದೇನು ಗೊತ್ತಾ?

Any Mind by Any Mind
October 21, 2023
in ಕರ್ನಾಟಕ
0
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಾಕ್ ತಂಡವನ್ನು ಬೆಂಬಲಿಸಿದ ಯುವಕ : ಪೊಲೀಸರು ಮಾಡಿದ್ದೇನು ಗೊತ್ತಾ?
Share on WhatsAppShare on FacebookShare on Telegram

ADVERTISEMENT

ಧರ್ಮ, ಜಾತಿ , ದೇಶದ ಗಡಿಯನ್ನು ಮೀರಿ ಪ್ರೀತಿ ಹಂಚುವ ಕ್ರೀಡೆಯನ್ನು ಧರ್ಮ ಸಂಘರ್ಷಕ್ಕೆ ತಳುಕು ಹಾಕಲು ನಡೆಯುತ್ತಿರುವ ಪ್ರಯತ್ನಗಳು ಇವತ್ತಿನದೇನು ಅಲ್ಲ. ಕ್ರಿಕೆಟ್ ಎಂಬ ವಿಶ್ವವೇ ಇಷ್ಟ ಪಡುವ ಆಟವನ್ನು ಆಟವಾಗಿ ನೋಡದೆ ಒಂದು ಯುದ್ದವಾಗಿ ನೋಡುವ ಮನಸ್ಥಿತಿಯನ್ನು ನಾವಿಂದು ಬೆಳೆಸಿಕೊಂಡಿರುವುದು ನಿಜಕ್ಕೂ ಬೇಸರದ ವಿಷಯವೇ ಹೌದು.

ಈತರದ ಬೆಳವಗಿಯಿಂದಲೇ ನಿನ್ನೆ ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ್ ವಿಶ್ವಕಪ್ ಪಂದ್ಯದಲ್ಲಿ ಆತಂಕ ಮೂಡಿಸುವ ಬೆಳವಣಿಗೆಯೊಂದು ನಡೆದಿದೆ. ಹೌದು, ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದು, ಈ ವೇಳೆ ಯುವಕನೊಬ್ಬ ಪಾಕ್ ಬೆಂಬಲಿಸಿದಕ್ಕೆ ಪೊಲೀಸರು ತರಾಟೆ ತೆಗೆದುಕೊಂಡಿದ್ದಾರೆ.

ಪಾಕಿಸ್ತಾನ್ ಪರ ಬೆಂಬಲಿಸಿ ಘೋಷಣೆ ಕೂಗಿದನ್ನ ಪೊಲೀಸರು ಆಕ್ಷೇಪಿಸಿದ್ದಾರೆ. ಇದಕ್ಕೆ ಯುವಕ, ನಾನು ಪಾಕಿಸ್ತಾನದಿಂದ ಬಂದಿದ್ದೇನೆ, ಪಾಕಿಸ್ತಾನ್ ಪರ ಬೆಂಬಲಿಸಿ ಘೋಷಣೆ ಕೂಗಿದ್ದೇನೆ, ಆಸ್ಟ್ರೇಲಿಯಾದವರು ಅವರ ತಂಡದ ಪರವಾಗಿ ಘೋಷಣೆ ಕೂಗುತ್ತಿದ್ದಾರೆ. ಇದಲ್ಲದೇ ನಾವು ಭಾರತ್ ಮಾತಾಕಿ ಜೈ ಅಂತಾ ಕೂಗೋಕೆ ಆಗುತ್ತಾ ಎಂದು ಮರು ಪ್ರಶ್ನಿಸಿದ್ದಾನೆ.

ಇಷ್ಟೇ ಅಲ್ಲದೇ, ಆಸ್ಟ್ರೇಲಿಯಾ ಪರವಾಗಿ ಘೋಷಣೆ ಕೂಗಬಹುದು ಆದರೆ ಪಾಕಿಸ್ತಾನ್ ಪರ ಘೋಷಣೆ ಕೂಗಬಾರದಾ ಅಂತಾ ಪೊಲೀಸ್ ಅಧಿಕಾರಿಯನ್ನು ಪ್ರಶ್ನೆ ಮಾಡಿ ಒಂದು ಕ್ಷಣ ಪೊಲೀಸರನ್ನೇ ತಬ್ಬಿಬ್ಬು ಮಾಡಿದ್ದಾನೆ.

ಮುಂದುವರೆದು, ಪಾಕಿಸ್ತಾನ ಪರ ಘೋಷಣೆ ಕೂಗಬಾರದು ಅಂತ ಹೇಳುತ್ತಿದ್ದೀರಾ ನೀವು ಹೇಳುವುದನ್ನು ನಾನು ವೀಡಿಯೊ ಮಾಡಿಕೊಳ್ಳುತ್ತೇನೆ, ಈಗ ಹೇಳಿ, ಪಾಕ್ ಪರ ಘೋಷಣೆ ಕೂಗಬಾರದಾ ಎಂದು ಕೇಳಿದಾನೆ. ಪೊಲೀಸರು ನಮ್ಮ ಅಧಿಕಾರಿಗಳನ್ನು ಕೇಳಿ ಹೇಳುತ್ತೇವೆ ಎಂದು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇದಕ್ಕೂ ಮುನ್ನ ಕ್ರೀಡಾಂಗಣಕ್ಕೆ ಪಾಕ್ ಬಾವುಟ ತರುವಂತಿಲ್ಲ ಎಂದು ಇದೇ ಯುವಕನಿಗೆ ಪೊಲೀಸರು ತಡೆದಿದ್ದು, ಆಸ್ಟ್ರೇಲಿಯಾ ಬಾವುಟ ಮಾತ್ರ ತರುವುದಕ್ಕೆ ಅವಕಾಶ ಇದೆಯ ಎಂದು ಪೊಲೀಸರಿಗೆ ಪ್ರಶ್ನಿಸಿದ್ದ ಎಂದು ತಿಳಿದುಬಂದಿದೆ.

ವಿಶ್ವಕಪ್ ಗೆಲ್ಲುವುದಕ್ಕೆ ವಿಶ್ವದ ಅಷ್ಟು ದೇಶಗಳು ಹೆಮ್ಮೆಯಿಂದ ಸೆಣೆಸಾಡುತ್ತಿದ್ದು, ಇತ್ತ ಕ್ರೀಡೆಯಲ್ಲು ಭೇದಭಾವ ಮಾಡುತ್ತಿರುವುದು ನಿಜಕ್ಕೂ ಭಾರತಕ್ಕೆ ಹೆಮ್ಮೆ ತರವ ವಿಷಯವಲ್ಲ. ಅದರಲ್ಲೂ ಕ್ರೀಡೆ ಜಾತಿ ಧರ್ಮ ಗಡಿಯನ್ನು ಮೀರಿ ಬೆಳೆದು ನಿಂತಿದೆ. ಇಲ್ಲಿಯ ಭಾರತೀಯ ಕ್ರಿಕೆಟ್ ಆಟಗಾರರಿಗೆ ವಿಶ್ವಾದ್ಯಾಂತ ಅಭಿಮಾನಿಗಳು, ಅನುಯಾಯಿಗಳು ಇದ್ದಾರೆ.‌ ಯಾವ ತಂಡವನ್ನು ನೀವು ಬೆಂಬಲಿಸಬೇಕು, ಯಾವ ತಂಡವನ್ನು ನೀವು ಬೆಂಬಲಿಸಬಾರದು ಎಂಬ ತೀರ್ಮಾನವನ್ನು ಮಾಡುವುದು ಕ್ರೀಡಾಲೋಕಕ್ಕೆ ಮಾಡುವ ದೊಡ್ಡ ಸಂಚಕಾರ.

ಅವರವರ ದೇಶವನ್ನು, ಅವರಿಷ್ಟದ ಆಟಗಾರರನ್ನು ಬೆಂಬಲಿಸುವ ಹಾಗೂ ಕೂಗಿ ಪ್ರೇರೇಪಿಸುವ ಎಲ್ಲಾ ಹಕ್ಕುಗಳು ವಿಶ್ವದ ಎಲ್ಲಾ ಮನುಷ್ಯನಿಗೂ ಇದೆ ಎಂಬ ಸಣ್ಣ ಮಾಹಿತಿ ಪೊಲೀಸರು ಸಹ ತಿಳಿಯಬೇಕಿದೆ.

ಲೇಖನದಲ್ಲಿ ಹೇಳಬೇಕಾದ ಎಲ್ಲವನ್ನೂ ಆ ಯುವಕ ತುಂಬಾ ಸರಳವಾಗಿಯೇ ಹೇಳಿದ್ದಾನೆ. ಪಾಕ್-ಆಸಿಸ್ ಪಂದ್ಯದಲ್ಲಿ ಎರಡೂ ತಂಡಗಳ ಅಭಿಮಾನಿಗಳು ಇದ್ದೇ ಇರುತ್ತಾರೆ. ಆಸ್ಟ್ರೇಲಿಯಾ ತಂಡವನ್ನು ಬೆಂಬಲಿಸಿ ಕೂಗಿ ಕೇಕೆ ಹಾಕಿ ಪ್ರೇರೆಪಿಸುವುದು ಸರಿ ಆದರೆ ಪಾಕಿಸ್ತಾನ್ ತಂಡಕ್ಕೆ ಆತರ ಮಾಡಬಾರದು ಎಂಬುವ ಮನಸ್ಥಿಯನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ಅಂದು ಯಾವ ತಂಡಗಳು ಆಡುತ್ತವೊ ಆ ತಂಡಗಳ ಅಭಿಮಾನಿಗಳು ಸೇರಿ ಕೂಗಿ ಪ್ರೊತ್ಸಾಗಿಸುವುದು ಅವರ ನೈತಿಕ ಹಕ್ಕು ಕೂಡ.

ವಿಶ್ವಕಪ್ ಪಂದ್ಯದಲ್ಲಿ ಏಷಿಯಾ ಖಂಡದಿಂದ ಇರುವುದೇ ಭಾರತ, ಶ್ರೀಲಂಕಾ, ಪಾಕಿಸ್ತಾನ್ ಹಾಗೂ ಬಾಂಗ್ಲಾದೇಶ ಅದರಲ್ಲಿ ಬಾಂಗ್ಲಾದೇಶ ಶ್ರೀಲಂಕಾ ಕ್ವಾಲಿಫೈ ಆಗುವುದು ಡೌಟು. ಇನ್ನುಳಿದ ಭಾರತ ಮತ್ತು ಪಾಕಿಸ್ತಾನ್ ಮಾತ್ರ ಎರಡೂ ತಂಡಗಳು ಫೈನಲ್ಗೆ ಬರಬೇಕು ಎಂಬ ಮನೋಭಾವ ಯಾರಿಗೂ ಇಲ್ಲವಾಗಿದೆ. ಇಂತಹ ಗಳಿಗೆ ಬರಲಿ. ಒಂದೇ ಕ್ರೀಡಾಂಗಣದಲ್ಲಿ ಇಂಡಿಯಾ ಮತ್ತು ಪಾಕಿಸ್ತಾನ್ ಅಭಿಮಾನಿಗಳು ಸೇರಿ ಆ ಪಂದ್ಯವನ್ನು ಹಬ್ಬದಂತೆ ಆಚರಿಸಲಿ. ಗೆದ್ದ ತಂಡದ ಅಭಿಮಾನಿಗಳು ಸೋತ ತಂಡದ ಅಭಿಮಾನಿಗಳನ್ನು ಸಂತೈಸಲಿ. ಸೋತವರಿಗೆ ಗೆದ್ದವರು ಹಬ್ಬದೂಟ ಹಾಕಿಸಿ ಮುಂದೆ ಸಾಗಲಿ…

Tags: BJPCongress PartyCovid 19ಎಚ್ ಡಿ ಕುಮಾರಸ್ವಾಮಿಕರೋನಾಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

‘ಪರ್ವ’ ಕಾದಂಬರಿಯನ್ನು ಆಧರಿಸಿ ಸಿನಿಮಾ: ಕಾಶ್ಮೀರಿ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಆಕ್ಷನ್ ಕಟ್

Next Post

ವಿದ್ಯುತ್​​ ಕೊರತೆ ವಿಚಾರವಾಗಿ ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ಆಕ್ರೋಶ: ಹೆಚ್​ಡಿ ಕುಮಾರಸ್ವಾಮಿ

Related Posts

ಡಿ.ಫಾರ್ಮ್ ವಾರ್ಷಿಕ ಪರೀಕ್ಷೆ: 100 ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ
ಕರ್ನಾಟಕ

ಡಿ.ಫಾರ್ಮ್ ವಾರ್ಷಿಕ ಪರೀಕ್ಷೆ: 100 ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ

by ಪ್ರತಿಧ್ವನಿ
March 4, 2026
0

ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಹಾಗೂ ಪರೀಕ್ಷಾ ಪ್ರಾಧಿಕಾರ (BEA) ಸಂಯುಕ್ತವಾಗಿ, Rajiv Gandhi University of Health Sciences (RGUHS) ಸಮನ್ವಯದಲ್ಲಿ...

Read moreDetails
ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

March 4, 2026
“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

March 4, 2026
ಬೆಂಗಳೂರಿಗರೇ ಗಮನಿಸಿ: ಕೆಲ ಮಾರ್ಗಗಳಲ್ಲಿ ಸಂಚಾರ ವ್ಯತ್ಯಯ

ಬೆಂಗಳೂರಿಗರೇ ಗಮನಿಸಿ: ಕೆಲ ಮಾರ್ಗಗಳಲ್ಲಿ ಸಂಚಾರ ವ್ಯತ್ಯಯ

March 4, 2026
ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

March 4, 2026
Next Post
ವಿದ್ಯುತ್​​ ಕೊರತೆ ವಿಚಾರವಾಗಿ ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ಆಕ್ರೋಶ: ಹೆಚ್​ಡಿ ಕುಮಾರಸ್ವಾಮಿ

ವಿದ್ಯುತ್​​ ಕೊರತೆ ವಿಚಾರವಾಗಿ ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ಆಕ್ರೋಶ: ಹೆಚ್​ಡಿ ಕುಮಾರಸ್ವಾಮಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada