ಅಹಮದಾಬಾದ್: ಭಾರತ ವಿಶ್ವಕಪ್ಗೂ ಮುನ್ನ ಏಷ್ಯಾಕಪ್ ಫೈನಲ್ನಲ್ಲಿ ತಾನು ಬೌಲಿಂಗ್ನಲ್ಲಿ ಸಮರ್ಥ ತಂಡ ಎಂದು ವಿಶ್ವಕ್ಕೆ ಸಂದೇಶ ನೀಡಿತ್ತು.
ಅದರಂತೆ ವಿಶ್ವಕಪ್ನ ಎರಡು ಪಂದ್ಯದಲ್ಲಿ ನಿಯಂತ್ರಿತ ಬೌಲಿಂಗ್ ಪ್ರದರ್ಶನ ನೀಡಿತ್ತು. ಪಾಕಿಸ್ತಾನದ ವಿರುದ್ಧದ ಮೂರನೇ ಪಂದ್ಯದಲ್ಲಿ ಅದೇ ಲಯದ ಬೌಲಿಂಗ್ನ್ನು ಮುಂದುವರೆಸಿದೆ. ಸಿರಾಜ್ ಆರಂಭದಲ್ಲಿ ದುಬಾರಿ ಆದರು ನಂತರ ವಿಕೆಟ್ ಪಡೆಯುವಲ್ಲಿ ಯಶಸ್ವಿ ಆದರೆ. ಪಾಕಿಸ್ತಾನ ನಾಯಕ ಬಾಬರ್ ಅರ್ಧಶತಕ ಮತ್ತು ರಿಜ್ವಾನ್ ಅವರ 49 ರನ್ ಬಲವಾಯಿತು. ಮತ್ತಾವ ಬ್ಯಾಟರ್ನಿಂದಲೂ ದೊಡ್ಡ ಇನ್ನಿಂಗ್ಸ್ ಬರಲೇ ಇಲ್ಲ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಪಾಕ್ ಮೊದಲ 5 ಓವರ್ನಲ್ಲಿ ಉತ್ತಮ ಲಯದಲ್ಲಿ ಬ್ಯಾಟಿಂಗ್ ಮಾಡಿತು. ನಂತರ ಆದರೆ 8ನೇ ಓವರ್ನಲ್ಲಿ ಸಿರಾಜ್ ಅಬ್ದುಲ್ಲಾ ಶಫೀಕ್ (20) ಅವರ ವಿಕೆಟ್ ಪಡೆದರು. ಅವರ ಬೆನ್ನಲ್ಲೇ ಇನ್ನೊಬ್ಬ ಆರಂಭಿಕ ಆಟಗಾರ ಇಮಾಮ್-ಉಲ್-ಹಕ್ (36) ವಿಕೆಟ್ ಸಹ ಉರುಳಿತು.
ಬಾಬರ್ – ರಿಜ್ವಾನ್ ಜೊತೆಯಾಟ: ಮೂರನೇ ವಿಕೆಟ್ಗೆ ಒಂದಾದ ನಾಯಕ ಬಾಬರ್ ಅಜಮ್ ಮತ್ತು ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಭರ್ಜರಿ ಜೊತೆಯಾಟ ಮಾಡಿದರು. ಈ ಜೋಡಿ ತಂಡಕ್ಕೆ ವಿಕೆಟ್ ಕಾಯ್ದುಕೊಟ್ಟಿದ್ದಲ್ಲದೇ, ಆರಂಭಿಕ ವಿಕೆಟ್ ನಷ್ಟದಿಂದ ತಂಡಕ್ಕೆ ಚೇತರಿಕೆಯನ್ನು ನೀಡಿತು. ಎರಡು ಪಂದ್ಯದಲ್ಲಿ ವಿಫಲತೆ ಕಂಡಿದ್ದ ಬಾಬರ್ ಅಜಮ್ ಇಂದು ಅರ್ಧಶತಕ ಗಳಿಸಿದರು. 58 ಬಾಲ್ ಎದುರಿಸಿದ ಬಾಬರ್ ಅಜಮ್ 7 ಬೌಂಡರಿ ಸಹಾಯದಿಂದ 50 ರನ್ ಗಳಿಸಿದರು. ಇಬ್ಬರು 82 ರನ್ನ ಜೊತೆಯಾಟ ಆಡಿದರು.