ವಿಶ್ವವಿಖ್ಯಾತ ಮೈಸೂರು ದಸರಾಕ್ಕೂ ಮುಂಚೆ ಆಚರಿಸುತ್ತಿದ್ದ ಮೈಸೂರಿನಲ್ಲಿ ಮಹಿಷ ದಸರಾವನ್ನು ಈ ವರ್ಷ ಅದ್ದೂರಿಯಾಗಿ ನಡೆಸಲಾಗುತ್ತಿದ್ದು, ಇದಕ್ಕೆ ವಿರೋಧಿಸಿ ಕೋರ್ಟಿಗೆ ಅರ್ಜಿ ಸಲ್ಲಿಕೆಯಾಗಿದೆ. ಮಹಿಷ ದಸರಾ ಆಚರಣೆ ಸಮಿತಿ ಅಧ್ಯಕ್ಷರಿಗೆ ಕೋರ್ಟ್ ನಿಂದ ನೋಟಿಸ್ ಜಾರಿಯಾಗಿದೆ.
ಮೈಸೂರಿನ ಸ್ನೇಹ ಮಯಿಕೃಷ್ಣ ಎಂಬವರಿಂದ ಮೈಸೂರಿನ ಎಂಟನೇ ಹೆಚ್ಚುವರಿ ಕೋರ್ಟಿಗೆ ಅರ್ಜಿ ಸಲ್ಲಿಕೆಯಾಗಿದ್ದು, ಮಹಿಷ ದಸರಾ ಆಚರಣ ಸಮಿತಿ ಅಧ್ಯಕ್ಷರಿಗೆ ಕೋರ್ಟ್ನಿಂದ ನೋಟಿಸ್ ಜಾರಿಯಾಗಿದೆ.
ಮಹಿಷಾ ದಸರಾಗೆ ಬಿಜೆಪಿಯಿಂದ ಹಾಗೂ ಸಂಸದ ಪ್ರತಾಪ್ ಸಿಂಹ ಅವರ ವಿರೋಧವೇ ಹೆಚ್ಚು ಎನ್ನಬಹುದು. ಮಹಿಷಾ ದಸರಾ ಅಕ್ಟೋಬರ್ 13 ರಂದು ನಡೆಯಲಿದ್ದು ಬೇಕು ಅಂತಲೇ ಅಂದೇ ಪ್ರತಾಪ್ ಸಿಂಹ ಚಾಮುಂಡಿ ಬೆಟ್ಟ ಚಲೋ ಪ್ರತಿಭಟನೆಯನ್ನು ಅಯೋಜಿಸಿದ್ದಾರೆ.