ಅನೈತಿಕವಾಗಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಮದುವೆಯಾಗದೆ ಸಂಬಂಧ ಹೊಂದಿದ ಪತ್ನಿ, ಪತಿಯಿಂದ ಜೀವನಾಂಶವನ್ನು ಕೋರುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯ್ದೆ, 2005 ರ ಸೆಕ್ಷನ್ 12 ರ ಅಡಿಯಲ್ಲಿ ಆರ್ಥಿಕ ನೆರವನ್ನು ಪಡೆಯುವ ಸಲುವಾಗಿ ನ ಮಹಿಳೆಯ ಪರಿಶೀಲನಾ ಅರ್ಜಿಯನ್ನು ಆಲಿಸಿದ ನ್ಯಾಯಾಲಯ, ಕಾನೂನು ರೀತ್ಯಾ ಯೋಚಿಸಿ ಅರ್ಜಿಯನ್ನು ವಜಾಗೊಳಿಸಿದೆ.
ತಾನು ವಾಸಿಸುತ್ತಿದ್ದ ನೆರೆಹೊರೆಯವರೊಂದಿಗೆ “ವಿವಾಹೇತರ ಸಂಬಂಧಗಳಲ್ಲಿ” ಪತ್ನಿ ಭಾಗಿಯಾಗಿರುವುದನ್ನು ಸೂಚಿಸುವ ಸ್ಪಷ್ಟ ಪುರಾವೆಗಳನ್ನು ನ್ಯಾಯಾಲಯವು ಗಮನಿಸಿದ್ದು, ಅನೈತಿಕ ಸಂಬಂಧ ಇರುವುದು ಸ್ಪಷ್ಟವಾದಾಗ, ಜೀವನಾಂಶಕ್ಕೆ ಹೆಂಡತಿಯ ಅರ್ಹತೆ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ದೃಢವಾಗಿ ಹೇಳಿದೆ.